ಚರಂಡಿ, ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಚಾಲನೆ
ಕಾಗವಾಡ 22: ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲಿ ಎಂದು ದೃಷ್ಟಿಯಿಂದ ಮೂಲಭೂತ ಸೌಲಭ್ಯಗಳಾದ ಸಮುದಾಯ ಭವನ, ಶುದ್ಧ ಕುಡಿಯುವ ನೀರು, ಸಿಸಿರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಪಕ್ಷಬೇಧ ಮರೆತ ನಾಗರಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಶ್ರೀಮಂತ ಪಾಟೀಲ ಕರೆ ನೀಡಿದರು.
ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉಗಾರ ಬುದ್ರುಕ್ ಗ್ರಾಮದಲ್ಲಿ ಮಂಗಳವಾರ ದಿ.21 ರಂದು ಎಸ್ಸಿ ಕಾಲೋನಿಯಲ್ಲಿ 25 ಲಕ್ಷ ರೂ. ವೆಚ್ಚದ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿ ಮಾತನಾಡಿದ ಅವರು ಕಳೆದ 4 ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿ ಜನತೆಯ ಬೇಡಿಕೆಗಳಗನುಗುಣವಾಗಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಮಾತನಾಡಿ ಶಾಸಕರಾದ ಶ್ರೀಮಂತ ಪಾಟೀಲರು ಕಳೆದ 4 ವರ್ಷಗಳಲ್ಲಿ ಕ್ಷೇತ್ರದ ತುಂಬ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅದರಂತೆ ನಮ್ಮ ಗ್ರಾಮಗಳಲ್ಲಿಯೂ ಹಲವಾರು ಜನೋಪಯೋಗಿ ಕಾರ್ಯ ಕೈಗೊಂಡಿದ್ದು ನನಗೆ ತೃಪ್ತಿ ತಂದಿದೆ ಎಂದರು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ವಾಲಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನೀಯರ ಜೆ.ಎ.ಹಿರೇಮಠ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ಇಂಜನೀಯರರಾದ ಆರ್,ಪಿ,ಅವತಾಡೆ, ಅಮರ ಮೇತ್ರಿ, ಗುತ್ತಿಗೆದಾರರಾದ ಸಚೀನ ವಸವಾಡೆ, ಜಿತೇಂದ್ರ ಶಿಂಧೆ, ಮುಖಂಡರಾದ ಮನೋಜ ಕುಸನಾಳೆ, ಸುನೀಲ ಶಿಂಧೆ, ಲಕ್ಷ್ಮಣ ಜಾಧವ, ವಿಜಯ ಶಿಂದೆ, ಮುದ್ದು ಮುಲ್ಲಾ, ಸಂದೀಪ ಕಾಟಕರ, ವಿನಾಯಕ ಶಿಂಧೆ, ದಾದಾ ಚೌಧರಿ, ಅಮೀನ ಶೇಖ, ಅಪ್ಪಾಸಾಬ ಸನದಿ, ಸಚೀನ ವಸವಾಡೆ, ಆನಂದ ವಂಟಗುಡೆ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.