ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ
ಕಾಗವಾಡ 18: ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ನನ್ನ ಕ್ಷೇತ್ರದ ಜನರ ಸೇವೆ, ಕ್ಷೇತ್ರದ ಅಭಿವೃದ್ಧಿ ಮಾತ್ರ ಗಮನದಲ್ಲಿಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ. ಹೈ ಕಮಾಂಡ್ ನನ್ನ ಕಾರ್ಯವನ್ನು ಗುರುತಿಸಿ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಮಂಗಳವಾರ ದಿ. 18ರಂದು ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಹಾಗೂ ಉಗಾರ ಖುರ್ದ ಮದ್ಯದ 1 ಕಿ.ಮೀ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಳೆದ ಹಲವಾರು ವರ್ಷಗಳಿಂದ ಬೇಡಿಕೆಯಾಗಿ ಉಳಿದಿದ್ದ ಉಗಾರ ಖುರ್ದ ಹಾಗೂ ಉಗಾರ ಬುದ್ರುಕ್ ಗ್ರಾಮಗಳ ಮದ್ಯದ ರಸ್ತೆ ಮಳೆಗಾಲದಲ್ಲಿ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಮುಳುಗಡೆಯಾಗುತ್ತಿತ್ತು. ಅದನ್ನು ಎತ್ತರಿಸಲು ಪ್ರವಾಹ ಹಾನಿ ಯೋಜನೆಯಡಿ 1.25 ಕೋಟಿ ರೂ ವೆಚ್ಚದಲ್ಲಿ ಅನುದಾನ ಮಂಜೂರುಗೊಳಿಸಿದ್ದು ಇಂದು ಕಾಮಗಾರಿಗೆ ಚಾಲನೆ ನೀಡುತ್ತಿರುವುದಾಗಿ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ನಾನು ಕಳೆದ ಅವಧಿಯಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವನಾಗಿ ಅಲ್ಪ ಕಾಲಾವಧಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಮತ್ತೊಂದು ಬಾರಿ ಜವಾಬ್ದಾರಿ ನೀಡಿದರೆ ನಿರ್ವಹಿಸುವುದಾಗಿ ಶ್ರೀಮಂತ ಪಾಟೀಲ ಹೇಳಿದರು.
991 ಮನೆಗಳ ಮಂಜೂರು:
2019 ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದು ಮನೆ ಮಠಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಾನು ವಾಗ್ದಾನ ಮಾಡಿರುವ ಹಾಗೆ ಕ್ಷೇತ್ರ ಜುಗೂಳ,ಮಂಗಾವತಿ, ಶಹಾಪುರ, ಕುಸನಾಳ,ಮೊಳವಾಡ, ಉಗಾರ ಸೇರದಿಂತೆ ಹಲವಾರು ಗ್ರಾಮಗಳಲ್ಲಿ ಪ್ರವಾಹದಿಂದ ಬಾಧೆಗೊಳಗಾದ 991 ಮನೆಗಳನ್ನು ನಿರ್ಮಿಸಲು ಮಂಜೂರಾತಿ ಪಡೆದುಕೊಂಡು ಬಂದಿರುವುದಾಗಿ ಹೇಳಿದರು.
ರೈತರಿಗೆ ನಿರಂತರ ವಿದ್ಯೂತ್ ಪೂರೈಕೆ:
ಹೆಸ್ಕಾಂ ಇಲಾಖೆಯಿಂದ ಹಗಲು ಮತ್ತು ರಾತ್ರಿ 3 ಗಂಟೆ ವಿದ್ಯೂತ್ ಪೂರೈಕೆ ಮಾಡುತ್ತಿರುವುದನ್ನು ನಿಲಿಸ್ಲಿ ಏಕ ಕಾಲಕ್ಕೆ ನಿರಂತರವಾಗಿ ವಿದ್ಯೂತ್ ಸರಬುರಾಜು ಮಾಡುವಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ನಿನ್ನೆಯಿಂದಲೇ ನಿರಂತವಾಗಿ ವಿದ್ಯೂತ್ತ ವಿತರಣೆಯಾಗುತ್ತಿದೆ ಎಂದರು.
ಶಾಲಾ ಕಟ್ಟಡ ಉದ್ಘಾಟನೆ:
ನಬಾರ್ಡ ಯೋಜನೆಯಡಿ 48 ಲಕ್ಷ ರೂ ವೆಚ್ಚಮಾಡಿ ನಿರ್ಮಿಸಿದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ನೂತನ ಕಟ್ಟಡದ ಉದ್ಘಾಟನೆ,10 ಲಕ್ಷ ರೂ ವೆಚ್ಚದ ಶಾಲಾ ಕೊಠಡಿಯ ಹಾಗೂ 17 ಲಕ್ಷ ರೂ ವೆಚ್ದ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಗ್ರಾಮ ಪಂಚಾಯತಿಯ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಂಜುರುಗೊಳಿಸಿದ ಕಸ ವಿಲೇವಾರಿ ವಾಹನ ಲೋಕಾರೆ್ನಯನ್ನು ಶಾಸಕ ಶ್ರೀಮಂತ ಪಾಟೀಲ ನೆರವೇರಿಸಿದರು.
ಪಿಎಲ್.ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ, ಮುಖಂಡರಾದ ಅಪ್ಪಾಸಾಬ ಚೌಗುಲೆ, ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಮನೋಜ ಕುಸನಾಳೆ, ವಿಜಯ ಶಿಂಧೆ, ಪ್ರಮೋದ ಹೊಸುರೆ, ಗುತ್ತಿಗೇದಾರರಾದ ರಾಜು ಆಲಬಾಳ, ನಾನಾಸಾಬ ಅವತಾಡೆ, ಸಚಿನ ಮೊಳವಾಡ, ಶಂಕರ ಮದನ್ನವರ,ಸಚೀನ ಸಾಳ್ವಂಕೆ, ಅಧಿಕಾರಿಗಳಾದ ಜೆ.ಎ.ಹಿರೇಮಠ, ಆರ್.ಪಿ.ಅವತಾಡೆ, ಎಂ.ಎಸ್.ಮಗದುಮ್, ಸಂಜೀವಕುಮಾರ ಸದಲಗೆ, ಪ್ರಪುಲ ಥೋರುಸೆ, ಯೋಗೇಶ ಕುಂಬಾರ,ನೂತನ ಪುರಸಭೆ ಸದಸ್ಯರು, ಮುಖಂಡರು ಇದ್ದರು.