ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ
ಲೋಕದರ್ಶನ ವರದಿ
ಕಾಗವಾಡ 25: ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿಯ ವಿವಿಧ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು 80 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ, ಬರುವ ಆರು ತಿಂಗಳುಗಳಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಶುಕ್ರವಾರದಂದು ಜುಗೂಳ-ಮಂಗಾವತಿ ಗ್ರಾಮಗಳ ಮಧ್ಯದ 60 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುವಾಗ ಮಾಹಿತಿ ನೀಡಿದರು.
ಪ್ರವಾಹ ಯೋಜನೆಯಡಿಯಲ್ಲಿ ಕೃಷ್ಣಾ ನದಿ ನೀರಿನಿಂದ ಬಾಧೆಗೊಳಗಾದ ಜುಗೂಳ-ಮಂಗಾವತಿ ಮದ್ಯದ ರಸ್ತೆ ನಿರ್ಮಿಸಲು ಅನೇಕ ದಿನಗಳಿಂದ ಇಲ್ಲಿಯ ಜನರ ಬೇಡಿಕೆಯಾಗಿತ್ತು. ಇದನ್ನು ಆಲಿಸಿದ ಶಾಸಕ ಶ್ರೀಮಂತ ಪಾಟೀಲರು 60 ಲಕ್ಷ ರೂ ಅನುದಾನ ಮಂಜೂರುಗೊಳಿಸಿದ್ದಾರೆ.
ಕೃಷ್ಣಾ ನದಿ ಹಿನ್ನಿರಿನಿಂದ ರೈತರ ಭೂಮಿಗಳು ಸವಳು ಜವಳಾಗುತ್ತಿವೆ, ಅದಕ್ಕಾಗಿ ಕೇಂದ್ರದಿಂದ ಹೊಸ ಯೋಜನೆಯೊಂದನ್ನು ತಂದು ಸಂಪೂರ್ಣ ಸವಳು ಜವಳು ಹೊಗಲಾಡಿಸುವಂತೆ ರೈತರು ಶಾಸಕರನ್ನು ಒತ್ತಾಯಿಸಿದರು, ಆಗ ಶಾಸಕ ಶ್ರೀಮಂತ ಪಾಟೀಲರು ಈಗಾಗಲೇ ಕೇಂದ್ರ ಸಚಿವರಿಗೆ ಒಂದು ಮನವಿಯನ್ನು ಕೊಟ್ಟಿರುತ್ತೇನೆ, ಸವಳು ಜವಳು ಹೋಗಲಾಡಿಸಲು ಒಂದು ಪೈಲಟ್ ಪ್ರೋಜಕ್ಟ್ ಅಂತಾ ಮಂಜೂರು ಮಾಡುವಂತೆ ಹೇಳಿದ್ದೇನೆ, ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.
ಲೊಕೋಪಯೋಗಿ ಇಲಾಖೆಯ ಇಂಜನೀಯರುಗಳಾದ ಜೆ.ಎ. ಹಿರೇಮಠ, ಆರ್.ಪಿ. ಅವತಾಡೆ, ಮುಖಂಡರಾದ ಸಂಜಯ ತೆಲಸಂಗ, ಅಣ್ಣಾಸಾಬ ಪಾಟೀಲ, ರಾಜಗೌಡ ಪಾಟೀಲ, ಶಂಕರಗೌಡ ಪಾಟೀಲ ಕಲಗೌಡ ಪಾಟೀಲ, ಮಹಾದೇವ ಕೋರ್ಬು, ರವಿ ಬನಚೋಡ, ಪೀಪಟ ಬನಚೋಡ, ಅವಿನಾಸ ಪಾಟೀಲ, ಮೆಹಬೂಬ್ ಕಿಲ್ಲೇದಾರ, ಪ್ರಲ್ಹಾದ ಕೋಳಿ, ಕಲ್ಲಪ್ಪ ಶಿವರಾಯ, ಸುರೇಶ ಪಾಟೀಲ, ಅರುಣ ಗಣೇಶವಾಡಿ ಸೇರಿದಂತೆ ಅನೇಕರು ಇದ್ದರು.