ಸಿಂಧಗಿ

ಎತ್ತಿನ ಗಾಡಿ ಸ್ಪರ್ಧೆಯನ್ನು ಶಾಸಕ ರಮೇಶ ಭೂಸನೂರ ಚಾಲನೆ

ಎತ್ತಿನ ಗಾಡಿ ಸ್ಪರ್ಧೆಯನ್ನು ಶಾಸಕ ರಮೇಶ ಭೂಸನೂರ ಚಾಲನೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಹಾಲಮರಡಿ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಎತ್ತಿನ ಗಾಡಿ ಓಡಿಸುವ ಹಾಗೂ ಭಾರ ಎತ್ತುವ ಸ್ಪರ್ಧೆಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಜಾತ್ರಾ ಮಹೋತ್ಸವದ ನಿಮಿತ್ಯ ಇಂತಹ ಸ್ಪರ್ಧೆಗಳನ್ನು ಏರಿ​‍್ಡಸಿರುವುದು ಶ್ಲಾಘನೀಯ ಕಾರ್ಯ. ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇಂದಿನ ಯುವಕರು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಪಿಎಸ್‌ಐ ಸೋಮೆಶ ಗೆಜ್ಜಿ, ನಾಗಪ್ಪ ಶಿವೂರ, ನಾನಾಗೌಡ ಪಾಟೀಲ, ರವಿ ನಾಯ್ಕೋಡಿ, ಪಂಡಿತ ಚೌಧರಿ, ಧರೇಪ್ಪ ಕಂಟಿಗೊಂಡ, ಮಡ್ಯಪ್ಪ ಸೊನ್ನದ, ಧರ್ಮಣ್ಣ ಹಿರೇಕುರುಬರ, ಮಡ್ಯಪ್ಪ ಸೊನ್ನದ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 

ಸುದ್ದಿ ಓದಿ