ನಷ್ಟವಾದ ಅಂಗಡಿಗಳಿಗೆ ಶಾಸಕ ಪಾಟೀಲ ಭೇಟಿ ನೀಡಿ ಸಾಂತ್ವನ
ಇಂಡಿ: ವಿದ್ಯುತ್ ಅನಾಹುತದಿಂದ ಬೆಂಕಿ ಹತ್ತಿ ನಷ್ಟವಾದ ಅಂಗಡಿಗೆ ಇಂಡಿಯ ಶಾಸಕರಾದ ಯಶವಂತರಾಯಗೌಡ ಪಾಟೀಲರು ಭೇಟಿ ನೀಡಿ ಸಾಂತ್ವನ ಹೇಳಿದರು.
ಅವರು ಶನಿವಾರ ಪಟ್ಟಣದ ಸ್ಟೇಶನ್ ರಸ್ತೆಯಲ್ಲಿರುವ ವಿಶ್ವಕರ್ಮ ಸಮಾಜದ 5 ಕಟ್ಟಿಗೆ ಅಂಗಡಿಗಳು ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಸಂಪೂರ್ಣ ಸುಟ್ಟಿದ್ದವು.
ಸರಕಾರದಿಂದ ಬರುವ ಹಣಕ್ಕೆ ಪ್ರಯತ್ನಿಸುವದಾಗಿ ತಿಳಿಸಿದರು. ಮತ್ತು ಒಂದು ಲಕ್ಷ ರೂ ಪರಿಹಾರ ನೀಡಿದರು.
ಈ ಸಂದರ್ಭದಲ್ಲಿ ಶಿವು ಬಡಿಗೇರ, ಶಾಂತಪ್ಪ ಪತ್ತಾರ, ಬಸವರಾಜ ಬಡಿಗೇರ, ಸಂಗಪ್ಪ ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಸಂತೋಷ ಬಡಿಗೇರ, ಧರ್ಮಣ್ಣ ವಾಲಿಕಾರ, ಜಾವೇದ ಮೋಮಿನ್, ಶಿವಕುಮಾರ ಬಿಸನಾಳ, ಸತೀಶ ಕುಂಬಾರ, ಶ್ರೀಕಾಂತ ಕುಡಿಗನೂರ ಮತ್ತಿತರಿದ್ದರು.