ಇಂಡಿ

ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಶಾಸಕ ಪಾಟೀಲ ಒತ್ತಾಯ

ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಶಾಸಕ ಪಾಟೀಲ ಒತ್ತಾಯ


ಇಂಡಿ: ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ವ್ಯಾಪ್ತಿಯಲ್ಲಿರುವ ಸರಕಾರಿ ಜಮೀನಿನ 156. ಎಕರೆ ಪ್ರದೇಶದಲ್ಲಿ ಬೇವು, ಹೊಂಗೆ, ಆಲ ,ಅರಳಿ, ನೇರಳೆ ಮುಂತಾದ ಜಾತಿಯ 19000 ಗಿಡಗಳನ್ನು ನೆಡಲಾಗಿದೆ. ಆ ಪ್ರದೇಶದಲ್ಲಿ ಕೃಷ್ಣಮೃಗಗಳು ವಾಸಿಸುತ್ತಿದ್ದು. ಸದರಿ ಪ್ರದೇಶವನ್ನು ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಒತ್ತಾಯಿಸಿದರು. 

ಇಂಡಿ ಹಾಗೂ ಚಡಚಣ ತಾಲೂಕಿನ ದೇವರ ನಿಂಬರಗಿ, ಧುಮಕನಾಳ, ನಂದರಗಿ, ಶಿಗಣಾಪುರ, ಜೇವೂರ ಸೇರಿದಂತೆ ಮುಂತಾದ ಕಡೆಗಳಲ್ಲಿ 150 ರಿಂದ 200 ಕೃಷ್ಣ ಮೃಗಗಳಿದ್ದು ಕೃಷ್ಣ ಮೃಗಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಪ್ರಸ್ತಾಪಿಸಿದರು. 

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಉಮೇಶ ಕತ್ತಿ ಈ ಕುರಿತು ಸದರಿ ಪ್ರದೇಶಗಳನ್ನು ರಕ್ಷಿತ ಅರಣ್ಯವೆಂದು ಘೋಷಿಸಲು ಕಂದಾಯ ಇಲಾಖೆಯು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಪ್ರಕರಣ 71ರ ಅಡಿಯಲ್ಲಿ ಕಾಯ್ದಿರಿಸಿ ಆದೇಶಿಸಬೇಕಾಗುತ್ತದೆ. ನಂತರ ಸ್ಥಳದ ಸೂಕ್ತತೆ ಪರೀಶೀಲಿಸಿ ಜಂಟಿ ಸರ್ವೆ ನಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು. ಕೃಷ್ಣ ಮೃಗಗಳು ಕಳೆದ 4 ವರ್ಷಗಳಿಂದ ಆ ಭಾಗದಲ್ಲಿ ಕಂಡು ಬರುತ್ತಿವೆ. ಅವು ವಾಸಿಸುತ್ತಿರುವ ಪ್ರದೇಶ ಅರಣ್ಯ ಪ್ರದೇಶವಾಗಿರದೆ. ಖಾಸಗಿ ಜಮೀನು ಹಾಗೂ ಸರಕಾರಿ ಮುಫತ್ ಗಾಯರಾಣಗಳಲ್ಲಿ ಕಂಡು ಬರುತ್ತಿವೆ. ಸ್ಥಳೀಯ ಗ್ರಾಮಸ್ಥರ ಮತ್ತು ಗ್ರಾ.ಪಂ ದೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಕೊಳ್ಳಲಾಗುವದು ಎಂದರು. 


ಸುದ್ದಿ ಓದಿ