ಕಾಗವಾಡ

ರಾಜು ಕಾಗೆಯವರ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭೇಟಿ ಚರ್ಚೆ

ರಾಜು ಕಾಗೆಯವರ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭೇಟಿ ಚರ್ಚೆ


ಕಾಗವಾಡ: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಾಜಿ ಶಾಸಕ ರಾಜು ಕಾಗೆಯವ ನಿವಾಸಕ್ಕೆ ಭೇಟಿ ನೀಡಿ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಹಲವು ಕುತುಹಲಕ್ಕೆ ಕಾರಣವಾಗಿದೆ. 

 ಶನಿವಾರ ದಿ.20ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡರಾದ ರಾಜು ಕಾಗೆಯವ ಮನೆಗೆ ಮೊನ್ನೆಯಷ್ಟೇ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು ಭೇಟಿ ನೀಡಿ ಹೋದ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಶನಿವಾರ ಧೀಡಿರನೆೆ ಭೇಟಿ ನೀಡಿ ಗುಪ್ತ ಮಾತುಕತೆ ನಡೆಸಿದ್ದಾರೆ. 

ವಿಧಾನ ಪರಿಷತ್‌ಗೆ ನಡೆಯಲಿರುವ ಚುನಮಾವಣೆಗೆ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿಯವರು ಕಾಂಗ್ರಸ್ ಅಭ್ಯರ್ಥಿಯಾಗಿ ಬೆಳಗಾವಿ ಜಿಲ್ಲೆಯಿಂದ ಸ್ಪರ್ದಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಾಜು ಕಾಗೆಯವರ ನಿವಾಸಕ್ಕೆ ಭೇಟಿ ನೀಡಿ ಉಭಯ ನಾಯಕರು ಸುಧಿರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ. ನಂತರ ಮಾತನಾಡಿದ ಮಾಜಿ ಶಾಸಕ ರಾಜು ಕಾಗೆ ನಾನು ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಶಿಪಾಯಿ, ಪಕ್ಷ ಚನ್ನರಾಯ ಹಟ್ಟಿಹೊಳಿಯವರಿಗೆ ವಿಧಾನ ಪರಿಷತ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಎರಡು ವಿ.ಪ ಸ್ಥಾನಗಳಿದ್ದು ನಮ್ಮ ಪಕ್ಷ ಚನ್ನರಾಯ ಹಟ್ಟಿಹೊಳಿಯವರನ್ನು ಕನಕ್ಕಿಳಿಸಿದೆ. ಅವರ ಪರವಾಗಿ ನಾವೆಲ್ಲರು ಕೆಲಸ ಮಾಡಿ ಗೆಲ್ಲುಸುವ ಹೊನೆಗಾರಿಕೆ ನಮ್ಮ ಮೇಲಿದೆ ಎಂದರು. 

 ಇನ್ನೇರಡು ದಿನಗಳಲ್ಲಿ ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ,ಪ್ರಕಾಶ ಹುಕ್ಕೇರಿ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರಸ್ ಮುಖಂಡರು ಪ್ರವಾಸ ಕೈಗೊಳ್ಳಲಿದ್ದಾರೆ. ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್ ಸದಸ್ಯನ್ನು ಒಂದುಗೂಡಿಸಿ ಸಭೆ ನಡೆಸಲಾಗುವುದೆಂದು ರಾಜು ಕಾಗೆ ಹೇಳಿದರು. 

ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಬ್ಲಾಕ್ ಅಧ್ಯಕ್ಷರಾದ ವಿಜಯಕುಮಾರ ಅಕಿವಾಟೆ,ಗಜಾನನ ಯರಂಡೋಲಿ,  ಉಮೇಶ ಪಾಟೀಲ ಬಾಳಕೃಷ್ಣ ಪಾಟೀಲ ವಸಂತ ಖೆ 


ಸುದ್ದಿ ಓದಿ