ಕಂಪ್ಲಿ

7ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಭೂಮಿ ಪೂಜೆ

7ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಭೂಮಿ ಪೂಜೆ

ಲೋಕದರ್ಶನ ವರದಿ 

ಕಂಪ್ಲಿ 06:  ಕ್ಷೇತ್ರದಲ್ಲಿ ಶಿಕ್ಷಣ ನೀರಾವರಿ ಮತ್ತು ರಸ್ತೆಗೆ ಹೆಚ್ಚಿನ ಅಧ್ಯತೆ ನೀಡಲಾಗುವುದು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.    ಪಟ್ಟಣದ ಅಂಬೇಡ್ಕರ್ ಸರ್ಕಲ್ ಇಂದಿರಾ ಕ್ಯಾಂಟಿನ್ ಹತ್ತಿರ 2025-26ನೇ ಸಾಲಿನ 4059 ಸಿಎಂಐಡಿಕ್ಯೂ ಯೋಜನೆಯ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಕಂಪ್ಲಿ ಯಿಂದ ಕೊಟ್ಟಾಲ್ ಮಾವಿನಹಳ್ಳಿ ಶ್ರೀರಾಮರಂಗಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪುರಷರಗಿಂತ ಮಹಿಳೆಯರು ಹೆಚ್ಚಿನ ಜನಸಂಖ್ಯೆ ಇರುವುದರಿಂದ ಮಹಿಳೆಯರಿಗೆ ಮೀಸಲಾತಿ ಅಗುವ ಸಂಭವವಿದೆ ನಮ್ಮ ಪಕ್ಷದಿಂದ ಮಹಿಳೆಯರು ಯಾರೆ ನಿಂತರು ಅವರ ಪರವಾಗಿ ಕೆಲಸ ಮಾಡಲಾಗುವುದು ಇಲ್ಲ ಅಂದರೆ ಇದೆ ಮೀಸಲಾತಿ ಮುಂದುವರೆದರೆ ಪುನಹ ನಾನು ಚುನಾವಣೆ ನಿಲ್ಲುತೇವೆ ಎಂದು ಭರವಸೆ ನೀಡಿದರು.

ರೈತರಿಗೆ ಹೋಲಗಳಿಗೆ ಮಾಗಣಿ ರಸ್ತೆಗಳಿಗೆ ಅಧ್ಯತೆ ನೀಡಲಾಗುವುದು ಹೀಗೆ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿ ಎಂಸಿ ಅಧ್ಯಕ್ಷ ಹಬೀಬರೆಹಮಾನ್ ಮುಖಂಡರಾದ ಮೂಕಯ್ಯಸ್ವಾಮಿ ಲಕ್ಷೀನಾರಾಯಣ ದೇವಸಮುದ್ರ ವೆಂಕೋಬಣ್ಣ  ಸುಧೀರ್ ಚಾಂದಬಾಷ ರಾಮನಾಯುಡು ನಾರಾಯಣಪ್ಪ ಸಣಾಪುರ ಹನುಮಂತಪ್ಪ ವೆಂಕಟರಾಮರಾಜ ವೀರೇಶ ಸುಧಾ ವಿ ನಾಗರಾಜ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು. ತಾಲೂಕಿನ ಕಂಪ್ಲಿ ಕೊಟ್ಟಾಲ್ ಕ್ರಾಸ್ ದಿಂದ ದೇವಸಮುದ್ರ ಮಾಗಣಿ ರಸ್ತೆ 3 ಕೋಟಿ ಮತ್ತು ಸಣಾಪುರ ರಸ್ತೆಯಲ್ಲಿರುವ ರಾಮದೇವರ ಗುಡಿಯಿಂದ ಒಂಟಿ ಮನೆವರೆಗೆ 1 ಕೋಟಿ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.  


ಸುದ್ದಿ ಓದಿ