ಶಾಸಕ ಆನಂದ ಮಾಮನಿ ಕ್ಷೇತ್ರದ ಅಭಿವೃದ್ಧಿ ಹಗಲಿರುಳು ಶ್ರಮಿಸಿದ್ದರು: ಸಣಗೌಡ್ರ
ಯರಗಟ್ಟಿ 30: ಧೀಮಂತ ನಾಯಕ, ಬಡವರ ಬಂಧು ಸವದತ್ತಿ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಶಾಸಕ ಆನಂದ ಮಾಮನಿಯವರು ಹಗಲಿರುಳು ಶ್ರಮಿಸಿದ್ದರು ಎಂದು ಗ್ರಾಪಂ ಉಪಾಧ್ಯಕ್ಷ ಫಕೀರ್ಪ ಸಣಗೌಡ್ರ ಹೇಳಿದರು.
ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ರವಿವಾರ ನಡೆದ ಶಾಸಕ ಆನಂದ ಮಾಮನಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಬೆರೆತು ಪಕ್ಷಪಾತ ಮಾಡದೇ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನ ಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಗ್ರಾಪಂ ಸದಸ್ಯ ಅಶೋಕ ಚಿಕ್ಕೊಪ್ಪ ಮಾತನಾಡಿ, ಸವದತ್ತಿ ಕ್ಷೇತ್ರಕ್ಕೆ ನೀಡಿದ ಅಭಿವೃದ್ಧಿಯ ಕೊಡುಗೆ ಅಪಾರ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ಹಾನಿಮಾಡಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಮುಖಂಡ ರಾಯಪ್ಪ ರಾಯಣ್ಣವರ, ಬಸವರಾಜ ಯರಗಟ್ಟಿ, ಮಹಾಂತಯ್ಯ ಹಿರೇಮಠ, ಬಸವರಾಜ ಢಮ್ಮಣ್ಣಗಿ, ಫಕೀರ್ಪ ಗುರನಗೌಡ್ರ, ಬಸವರಾಜ ಹಳೇಮನಿ, ಅಜೀಜ ನದಾಫ, ಉಮೇಶ ಹಳೇಮನಿ, ಮಹೇಶ ಚವಡಪ್ಪನ್ನವರ, ಶಿವು ಮಾನನ್ನವರ, ಶ್ರೀಕಾಂತ ಹಿರೇಮಠ, ರಾಜು ಗುರನಗೌಡ್ರ, ಮಲ್ಲಪ್ಪ ಚವಡಪ್ಪನ್ನವರ ಹಾಗೂ ಕಾರ್ಯಕರ್ತರು ಇದ್ದರು.