ಗುಳೇಗುಡ್ಡ

ನೇಕಾರರ ಧರಣಿ : ಎಂ.ಡಿ. ಲಕ್ಷ್ಮೀ ನಾರಾಯಣ ಭೇಟಿ

ನೇಕಾರರ ಧರಣಿ : ಎಂ.ಡಿ. ಲಕ್ಷ್ಮೀ ನಾರಾಯಣ ಭೇಟಿ
ಗುಳೇದಗುಡ್ಡದಲ್ಲಿ ನೇಕಾರರ ಧರಣಿನಿರತ ಸ್ಥಳಕ್ಕೆ ಸೋಮವಾರ ಎಂ.ಡಿ.ಲಕ್ಷ್ಮೀನಾರಾಯಣ ಭೇಟಿ ನೀಡಿದರು.

ಗುಳೇದಗುಡ್ಡ 19:  ಪಟ್ಟಣದ ಕಾಲೇಜು ಸರ್ಕಲ್ ಹತ್ತಿರ ಇಲ್ಲಿನ ನೇಕರರು ಕೈಗೊಂಡಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕೆಪಿಸಿಸಿ ಓಬಿಸಿ ರಾಜ್ಯ ನೇಕಾರ ಘಟಕದ ಅಧ್ಯಕ್ಷ,  ಮಾಜಿ ಎಂಎಲ್‌ಸಿ ಎಂ.ಡಿ.ಲಕ್ಷ್ಮೀ ನಾರಾಯಣ ಅವರು ಸೋಮವಾರ ಭೇಟಿ ನೀಡಿ ಅವರ ಸಮಸ್ಯೆಯನ್ನು ಆಲಿಸಿದರು. 

ನಂತರ ಮಾತನಾಡಿದ ಅವರು, ನಾನು ಇಲ್ಲಿನ ಮೂರು ಪಕ್ಷಗಳ ಮುಖಂಡರ ಜೊತೆಗೆ ಸಂಪರ್ಕದಲ್ಲಿದ್ದೇನೆ. ಅವರಿಂದ ಈ ಸಮಸ್ಯೆಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ. ಅವರೂ ಒಟ್ಟಾಗಿ ಸೇರಿ ತಮ್ಮ ಸಮಸ್ಯೆ ಬಗೆಹರಿಸಲು ಮುಂದೆ ಬಂದಿರುವುದು ಸ್ವಾಗತಾರ್ಹ. ಒಂದೇ ಪಕ್ಷದವರು ಭರವಸೆ ನೀಡಿದ್ದರೆ ಅದು ಒಂದು ಪಕ್ಷದ ಭರವಸೆಯಾಗುತ್ತಿತ್ತು. ಆದರೆ ಮೂರೂ ಪಕ್ಷದ ಮುಖಂಡರು ಸೇರಿ ತೆಗೆದುಕೊಂಡ ನಿರ್ಧಾರದಿಂದ ತಮ್ಮ ಸಮಸ್ಯೆ ಖಂಡಿತ ಬಗೆಹರಿಯುತ್ತದೆ. ಅವರ ಮಾತಿಗೆ ಗೌರವ ನೀಡಿ ಇಷ್ಟಕ್ಕೆ ಧರಣಿ ಇಟ್ಟುಬಿಡಿ. ಒಂದು ವೇಳೆ ಮೂರು ಪಕ್ಷದವರು ನಿಮ್ಮ ಸಮಸ್ಯೆ ಬಗೆ ಹರಿಸದಿದ್ದರೆ ಸ್ವತ: ನಾನೇ ಬಂದು ಧರಣಿ ಕೂಡುತ್ತೇನೆ  ಎಂದು ಸಲಹೆ ನೀಡಿದರು. 

ಧರಣಿನಿರತ ನೇಕಾರರು ಮಾತನಾಡುತ್ತಾ ನಮಗೂ ತಮ್ಮ ಮಾತು ಸರಿ ಎಂದು ಅನ್ನಿಸುತ್ತಿದೆ. ಆದರೆ ಧರಣಿ ಮುಖಂಡ ವಿ.ಜಿ. ಮ್ಯಾಗಿನಹಳ್ಳಿ ಅವರು ಮೂರು ಪಕ್ಷದವರ ಭರವಸೆಯ ನಿರ್ಣಯಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಅವರನ್ನು ಪಟ್ಟಣದ ಮುಖಂಡರು ಮಾತುಕತೆಗೆ ಕರೆದಿದ್ದಾರೆ. ಅವರು ಬಂದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದುರು.  

ಪಿಎಸೈ ಪುಂಡಲೀಕ ಪಟಾತರ, ವಿಜಯಕುಮಾರ ಬಾಪ್ರಿ, ಜವಳಿ ಮೂಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ  ಹಾಜರಿದ್ದರು. 



ಸುದ್ದಿ ಓದಿ