ರಾಣೆಬೆನ್ನೂರ

ನಿರುದ್ಯೋಗಿಗಳಿಗೆ ನೌಕರಿ ಕೊಡಿಸುವ ಆಮಿಷ: 68 ಲಕ್ಷ ರೂ ಪಂಗನಾಮ, ಠಾಣೆಗೆ ದೂರು ದಾಖಲು

ನಿರುದ್ಯೋಗಿಗಳಿಗೆ ನೌಕರಿ ಕೊಡಿಸುವ ಆಮಿಷ: 68 ಲಕ್ಷ ರೂ ಪಂಗನಾಮ, ಠಾಣೆಗೆ ದೂರು ದಾಖಲು

ರಾಣೇಬೆನ್ನೂರು 24: ನಗರವು ಸೇರಿದಂತೆ ತಾಲೂಕಿನ ಮತ್ತು ಜಿಲ್ಲೆಯ 17ಕ್ಕೂ ಹೆಚ್ಚು ಪದವೀಧರ ಯುವಕರಿಗೆ, ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿ ದೊರಕಿಸುವುದಾಗಿ,  68 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಘಟನೆ, ನಗರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಹಣ ಕಳೆದುಕೊಂಡ, ನಿರುದ್ಯೋಗಿ ಯುವಕರು, ಶಹರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.   

ರಾಣೇಬೆನ್ನೂರು ನಗರದ ರೋಹಿತ್ ಯಶ್ವಂತ್ ಗುತ್ತಲ್ (31) ಎಂಬಾತನೇ, ವಂಚಿಸಿದ ಪ್ರಮುಖ ವ್ಯಕ್ತಿಯಾಗಿದ್ದಾನೆ ಎನ್ನಲಾಗಿದೆ.   

ಕಳೆದ 2021 ರಿಂದ ಈ ವ್ಯಕ್ತಿಯು, 17 ಪದವೀಧರ ಯುವಕರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಜೆ. ಇ. ಎ. ಇ ಮತ್ತು ಡೀ ದರ್ಜೆಯ ಸರಕಾರಿ ನೌಕರಿ ದೊರಕಿಸುವ ಭರವಸೆ ನೀಡಿ, ತಲಾ ಒಬ್ಬೊಬ್ಬರಿಂದ,3.4. ಮತ್ತು 5 ಲಕ್ಷದವರೆಗೆ ಒಟ್ಟು 68 ಲಕ್ಷ ರೂಪಾಯಿಗಳನ್ನು, ಬ್ಯಾಂಕಿನವರ ಖಾತೆಯ ಮೂಲಕವೇ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ತನ್ನ ನಂಬಿಕೆಗಾಗಿ ತನ್ನ ಬಳಿ ಇರುವ ಖಾಲಿ ಚಕ್ಕುಗಳನ್ನು ಸಹ ಈ ಯುವಕರಿಗೆ ನೀಡಿದ್ದಾನೆ.    

ದಿನಗಳು ಕಳೆದಂತೆ ಯಾವುದೇ ಆದೇಶ ಪತ್ರ ತಮಗೆ ಬರದ ಕಾರಣ ವಂಚಿತನನ್ನು ಯುವಕರು ಪ್ರಶ್ನಿಸಿದಾಗ ಕೆಲವೇ ದಿನಗಳಲ್ಲಿ ತಮ್ಮ ಮನೆಗೆ ಆದೇಶ ಪತ್ರಗಳು ಬರಲಿವೆ ಎಂದು ಸುಳ್ಳು ಹೇಳಿ ವಂಚಿಸಿದ್ದಾನೆ. ಎಂದು ಹಣ ಕಳೆದುಕೊಂಡು, ಮೋಸ ಹೋದವರು, ಬಲವಾಗಿ ದೂರಿದ್ದಾರೆ.   

ಮತ್ತೆ ಪುನ:ವರ್ಷದ ನಂತರ ಸಂಪರ್ಕಿಸಿದಾಗ, ಸುಳ್ಳಿನ ಸರಮಾಲೆಯ ಮೂಲಕ ದಿನದೊಡುತ್ತಿದ್ದ ಈತನನ್ನು ಪುನಃ ಸಂಪರ್ಕಿಸಿದ್ದಾರೆ. ಅದಕ್ಕೆ ನೀಡಿದ ಉತ್ತರ ಸದ್ಯ ನೀತಿ ಸಂಹಿತೆ ಜಾರಿಯಲ್ಲಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡಲಾಗಿದೆ  ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಅಲ್ಲಿವರೆಗೂ ಕಾಯಲೇಬೇಕು ಎಂದುತ್ತರಿಸುವ ಈತನು ಇಲ್ಲಿಯವರೆಗೂ, ಯಾವುದೇ  ಉದ್ಯೋಗದ ಭರವಸೆ ಅಥವಾ ಆದೇಶ ಪತ್ರಗಳು ಬರುವ ಯಾವ ನೀರೀಕ್ಷೆಯು ತಮಗೆ ಕಂಡು ಬರುತ್ತಿಲ್ಲ ಎಂದು ದೂರಿದ್ದಾರೆ.    

ಈ ವಂಚಕನ ಜಾಲಕ್ಕೆ ಸಿಲುಕಿರುವ, 17 ಯುವಕರು ಬೇರೆ, ಬೇರೆ ಕಡೆ ನೌಕರಿ ಸಿಗುವುದೆಂಬ ನಂಬಿಕೆ ಭರವಸೆಯಿಂದ ಬಡ್ಡಿ ರೂಪದಲ್ಲಿ ಹಣ ತಂದು ಕೊಟ್ಟಿದ್ದಾರೆ. ವಂಚಕನ ನಯವಾದ ಮಾತಿಗೆ ಬಲಿ ಬಿದ್ದಿರುವ ಈ ಯುವಕರು, ನಿತ್ಯವೋ ಆತನ ನಯವಂಚನೆಯಿಂದ, ಬಿಡುಗಡೆ ಸಿಗಬಹುದೇ ಎನ್ನುವಂತೆ ಜಾತಕ ಪಕ್ಷಿಯಂತೆ ಈ ಯುವಕರು ಕಾಯುವಂತಾಗಿದೆ.  

ಮೇಲಿಂದ ಮೇಲೆ  ದುಂಬಾಲು ಬಿದ್ದ ಯುವಕರಿಗೆ, ಈ ನಯವಂಚಕ ರೋಹಿತ್ ಗುತ್ತಲ್ ಈತನು ಮತ್ತು ಮೋಸ ಎನ್ನುವಂತೆ ಕಳೆದ ವರ್ಷ 2023, ದಿನಾಂಕ 3,6-2023 ರಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯವರ ಸಹಿ ಇರುವ ಇಲಾಖೆಯ ಲೆಟರ್ ಪ್ಯಾಡಿನಲ್ಲಿ ಶೀಲು ಮತ್ತು ಶಿಕ್ಕ ಬಳಸಿ ಇದು ಸರ್ಕಾರದ ಪತ್ರ ತಾವು 21 -6-2023 ರ ಒಳಗಾಗಿ ದಾವಣಗೆರೆ ಲೋಕೋಪಯೂಗಿ ಇಲಾಖೆಯಲ್ಲಿ ಈ ಆದೇಶ ಪತ್ರವನ್ನು ತೋರಿಸಿ ನೌಕರಿ ಮಾಡಿರಿ ಎಂದು ಫೇಕ್ ಆದೇಶ ಪತ್ರವನ್ನು ನೀಡಿ ವಂಚಿಸಿದ್ದಾನೆ.  

ಬಹುನೀರೀಕ್ಷಿಯಲ್ಲಿ ಆದೇಶ ಪತ್ರ ಪಡೆದು ದಾವಣಗೆರೆಯಲ್ಲಿರುವ ಇಲಾಖೆಗೆ ಹೋದರೆ ಅಲ್ಲಿ ಯಾವುದೇ ಸರಕಾರದ ಆದೇಶ ಪತ್ರ ಬಂದಿಲ್ಲವೆಂಬ ಉತ್ತರ. ಇದರಿಂದ ಅಘಾತಕ್ ಒಳಗಾದ ಯುವಕರು ದಾರಿ ಕಾಣದೇ, ತಲೆ ಮೇಲೆ ಕೈ ಹೊತ್ತು, ಸಾಲ ಕೊಟ್ಟವರಿಗೆ ಹಣ ತೀರಿಸುವ ಬಗ್ಗೆ ಹೇಗೆ ಎನ್ನವ ಚಿಂತೆಯಲ್ಲಿ ನಿತ್ಯವೂ ಕೊರಗುವಂತಾಗಿದೆ. ಜಾಡು ಹಿಡಿದ ಯುವಕರು ಹಣ ಪಡೆದು ವಂಚಿಸಿದ ರೋಹಿತ್ ಯಶವಂತ್ ಗುತ್ತಲ್ ಎಂಬಾತನನ್ನು ಪತ್ತೆ ಹಚ್ಚಿದ ಯುವಕರು, ಆತನ ಜಾಡು ಹಿಡಿದು ಹೊರಟಾಗ, ಯುವಕರಿಗೆ ಸಿಕ್ಕಿದ್ದು, ಮೆಡ್ಲೇರಿ ರಸ್ತೆಯ ಬಸಲಿಕಟ್ಟಿ ತಾಂಡಕ್ಕೆ ಸಂಚರಿಸುವ ರಸ್ತೆಯ ಪಕ್ಕ ತನ್ನ ತಂದೆ ಹೆಸರಿನಲ್ಲಿರುವ ನಿವೇಶನದಲ್ಲಿ ಕೋಟಿ ರೂ ಬೆಲೆ ಬಾಳುವ ಕಟ್ಟಡವನ್ನು ಕಟ್ಟಿಸಿರುವುದು ಬೆಳಕಿಗೆ ಬಂದಿದೆ. ವಂಚಿಸಿದ ರೋಹಿತ್ ನನ್ನು ಕೂಡಲೆ ಬಂಧಿಸಿ, ಹಣ ಕಳೆದುಕೊಂಡ  ಯುವಕರಿಗೆ ನ್ಯಾಯ ಒದಗಿಸಬೇಕು ಮತ್ತು ಅವನಿಗೆ ಸೂಕ್ತ ಶಿಕ್ಷೆ ನೀಡಲು ಈ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು, ಪೊಲೀಸರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಪೊಲೀಸರು ವಿಳಂಬ ಧೋರಣೆ ಅನುಸರಿಸಿದರೆ ನೊಂದವರಿಗೆ ನ್ಯಾಯಕ್ಕಾಗಿ, ತಪಿತಸ್ತರಿಗೆ ಶಿಕ್ಷೆಗಾಗಿ ಓತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಯೋಗದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ 


ಸುದ್ದಿ ಓದಿ