ಕಾಗವಾಡ

ಲೋಕುರ ಗ್ರಾಪಂ ಮಾ.31ರವರೆಗೆ ಚುನಾವಣೆ

ಲೋಕುರ ಗ್ರಾಪಂ ಮಾ.31ರವರೆಗೆ ಚುನಾವಣೆ


ಕಾಗವಾಡ 15 : ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲೋಕುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಶಂಕರ ಮಮದಾಪುರೆ ಇವರ ನಿಧನದ ಬಳಿಕ ಖಾಲಿಯಾದ ಸದಸ್ಯರ ಸ್ಥಾನಕ್ಕಾಗಿ ಸೋಮವಾರ ಮಾರ್ಚ್ 15 ರಿಂದ 31ರ ವರೆಗೆ ಚುನಾವಣೆ ಜರುಗಲಿದೆ. ಇದರ ಘೋಷಣೆ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಪತ್ರಿಕಾ ಪ್ರಕಟಣೆ ಮೂಲಕ ಮಾಡಿದ್ದಾರೆ.

ಗ್ರಾಮ ಪಂಚಾಯತಿ ಉಪಚುನಾವಣೆ 2021ರ ಕುರಿತಂತೆ ಮಂಗಸೂಳಿ ಗ್ರಾಮ ಪಂಚಾಯತಿ ಉಪಚುನಾವಣೆ ಪ್ರಕ್ರೀಯೆ ಸೋಮವಾರ ದಿ. 15 ರಿಂದ ಪ್ರಾರಂಭಗೊಂಡಿದ್ದು, ದಿ. 19ರ ವರೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲನೆ ಮಾರ್ಚ್ 20 ಹಾಗೂ ನಾಮಪತ್ರ ಹಿಂದಕ್ಕೆ ಪಡೆಯುವ ದಿನಾಂಕ 22 ವಾಗಿದೆ. ಮತದಾನ ಮಾರ್ಚ್ 29 ರಂದು ನಡೆಯಲಿದ್ದು, ಮತ ಏಣಿಕೆ ಮಾರ್ಚ್ 31 ರಂದು ನೆರವೇರಲಿದೆ. ಈ ವೇಳಾಪಟ್ಟಿವಿದ್ದು, ಸದರಿ ವಿಷಯವಾಗಿ ಮತದಾರರಿಗೆ ಚುನಾವಣೆಗೆ ಸಂಬಂಧಪಟ್ಟದಂತೆ ತಿಳುವಳಿಕೆ ನೀಡಲು ಮತ್ತು ದೂರ ಸ್ವೀಕರಿಸಲು ಸಹಾಯವಾಣಿವನ್ನು ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ: 08339264555 ಗೆ 24 ಗಂಟೆ ಕಾಲ ಸೇವೆ ವದಗಿಸಲಾಗಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅಹ್ವಾನಿಸಿದ್ದಾರೆ.



ಸುದ್ದಿ ಓದಿ