ಇಂಡಿ

ಅಂತರಾಷ್ಟ್ರೀಯ ಉತ್ತಮ ಕೃಷಿ ಪ್ರಶಸ್ತಿ ನಾಗನಾಥಗೌಡ ಬಿರಾದಾರಗೆ ಪ್ರದಾನ

ಅಂತರಾಷ್ಟ್ರೀಯ ಉತ್ತಮ ಕೃಷಿ ಪ್ರಶಸ್ತಿ ನಾಗನಾಥಗೌಡ ಬಿರಾದಾರಗೆ ಪ್ರದಾನ

ಇಂಡಿ 16: ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಪ್ರಗತಿಪರ ರೈತ, ಜೀವನವನ್ನು ಕೃಷಿಗಾಗಿ ಮುಡುಪಾಗಿಟ್ಟು ಇತರರಿಗೆ ಮಾದರಿಯಾದ ತೆರೆಮರೆಯ ಎಷ್ಟೋ ಕೃಷಿಕರ ಬದುಕುನ್ನು ಹಸನುಗೊಳಿಸಿದ  ಸಾಧನೆಯ ಸಹಕಾರ ಮೂರ್ತಿ  ಮುಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಕರು ಹಾಗೂ  ಚಡಚಣ ತಾಲೂಕಾ ಪಂಚಮಸಾಲಿ ಹೋರಾಟ ಸಮಿತಿ ಅಧ್ಯಕ್ಷರು, ಚಡಚಣ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತೊದಯ್ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಇವರಿಗೆ ಗೋವಾ (ಫಣಜಿ)ನಲ್ಲಿ ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯವತಿಯಿಂದ, ಅಂತರಾಷ್ಟ್ರೀಯ ಉತ್ತಮ ಕೃಷಿ ಪುರಸ್ಕಾರ ಪ್ರೆಸಿಡೆಂಟ್ ಎ ಎಸ್ ಜಿ ಎಸ್ ್ಘ ನ್ಯಾಷನಲ್ ್ಘ ಇಂಟರನ್ಯಾಷನಲ ಕಲ್ಚರ ಅಂಬ್ಯಾಸಿಡರ ಡಾ. ಮಹೇಶ್ ಗೌಡ ಇವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ, ಅಂತಾರಾಷ್ಟ್ರೀಯ ಉತ್ತಮ ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ನಾಗನಾಥಗೌಡ ಬಿರಾದಾರ ಅವರು ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ನನಗೆ ನನ್ನ ಕೃಷಿ ವೃತ್ತಿಗೆ ಸ್ಪಂದಿಸಿ. ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದು ತುಂಬಾ ಸಂತಸ ತಂದಿದೆ. ಬರುವ ದಿನಗಳಲ್ಲಿ ಕೃಷಿಯಲ್ಲಿ  ಇನ್ನಷ್ಟು ತೊಡಗಿ ಮಾದರಿ ರೈತನಾಗಬೇಕು ಎಂಬೂವುದೇ ನನ್ನ ಆಸೆ ಆಗಿದೆ ಹೇಳಿದರು. 

 ವಾಯ್ ಎಸ್ ಬೆನ್ನಿ,  ಡಾ. ಬಿ ವಿ ಪದ್ಮಾವತಿ, ಡಾ. ಶಶಿಕಲಾ ಬಿ, ಡಾ. ಕೆ ಶಿವರಾಮ್, ಅಮರೇಶ್ ಪಾಟೀಲ, ಡಾ. ರೇವಣ್ಣ ಬೆಳ್ಳಾರಿ,  ಹರ್ಷಾ ನಾಯಕ, ಎಸ್ ಆರ್ ಮಠ್, ಬಿ. ಶಿವಣ್ಣ, ಅರ್ಚನಾ ಡಿಚೋಲಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ