ರಾಣೆಬೆನ್ನೂರ

ನಗರದ ಮೂರು ಕಡೆ ಲೋಕಾಯುಕ್ತರು ಮಿಂಚಿನ ದಾಳಿ ನಡೆಸಿ ದಾಖಲೆ ಪತ್ರ ಪರೀಶೀಲಿಸಿದರು

ನಗರದ ಮೂರು ಕಡೆ ಲೋಕಾಯುಕ್ತರು ಮಿಂಚಿನ ದಾಳಿ ನಡೆಸಿ ದಾಖಲೆ ಪತ್ರ ಪರೀಶೀಲಿಸಿದರು

ನಗರದ ಮೂರು ಕಡೆ ಲೋಕಾಯುಕ್ತರು ಮಿಂಚಿನ ದಾಳಿ ನಡೆಸಿ ದಾಖಲೆ ಪತ್ರ ಪರೀಶೀಲಿಸಿದರು 

ರಾಣೇಬೆನ್ನೂರ 13: ಬೆಳ್ಳಂ ಬೆಳಿಗ್ಗೆ ನಗರದ ಮೂರು ಕಡೆ ಸಂಶಯದ ಮೇರೆಗೆ ಲೋಕಾಯುಕ್ತರು ಮಿಂಚಿನ ದಾಳಿ ನಡೆಸಿ ದಾಖಲೆ ಪತ್ರ ಪರೀಶೀಲಿಸಿದರು. ಹಾವೇರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಯಮುನಪ್ಪ ಆಲದರ್ತಿ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ  ಮಂಗಳವಾರ ಈ ದಾಳಿ ನಡೆದಿದೆ.ತನಿಖೆ ಭಾಗವಾಗಿ ರಾಣೆಬೆನ್ನೂರಿನ ಶಿವಾಜಿನಗರದ ಸಾಯಿ ನಿವಾಸ ಹಾಗೂ ಅವರ ಚಾಲಕರಾಗಿದ್ದ ಸಿದ್ದೂಜಿ ಲಕ್ಷ್ಮಣರಾವ್ ಸೂರ್ಯವಂಶಿ ಹಾಗೂ ನಗರದ ಬಸವಾ ಪಾರ್ಕ ನಿವಾಸಿ ಅಪಾತಿ ಅಧಿಕಾರಿ ಉಪನಿರ್ದದೇಶಕರ ಕಚೇರಿ ವ್ಯವಸ್ಥಾಪಕ ಅನಿಲ ಸೂರ್ವೆ, ಸ್ಥಳೀಯ ಸಿಡಿಪಿಓ ಕಚೇರಿಯ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಅವರ ಮನೆ ಮೇಲೆ ಮಂಗಳವಾರ ಬೆಳಿಗ್ಗೆ 5. 30ಗಂಟೆಗೆ ಹೊತ್ತಿಗೆ ಏಕಕಾಲಕ್ಕೆ ದಾಳಿ ನಡೆಸಿದರು.   

  ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅವರ ಶಿವಾಜಿ ನಗರದ ಮನೆ ಮುಂದೆ ಬಾಗಿಲು ಬಡಿದು ನೋಡಿದಾಗ ಅವರು ಮನೆಯಲ್ಲಿ ಇಲ್ಲದ ಬಗ್ಗೆ ತಿಳಿದು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ನಾನು ಎರಡು ದಿನ ರಜೆ ಇದ್ದು, ನಮ್ಮ ತಾಯಿ ಅವರ ತೀರಿಕೊಂಡಿದ್ದರಿಂದ ಈಗ ಯಾದಗೀರಿ ಜಿಲ್ಲೆ ಸುರಪುರ ಸಮೀಪದ ಹಸನಾಪುರಕ್ಕೆ ಬಂದಿದ್ದೇನೆ ಎಂದು ತಿಳಿಸಿದರೆಂದು ಹೇಳಲಾಗಿದೆ. ಅವರುಗಳ ಮನೆ ಮುಂದೆ ಲೋಕಾಯುಕ್ತ ಪೊಲೀಸ್ ಹಾಗೂ ನಗರದ ಸ್ಥಳೀಯ ಠಾಣೆ ಪೊಲೀಸರು ಅವರ ಬರುವಿಕೆಗಾಗಿ ಮನೆ ಮುಂದೆ ಕಾಯುತ್ತಾ ಕುಳಿತಿರುವ ಘಟನೆ ಕಂಡು ಬಂದಿತು. ಬಸವಾ ಪಾರ್ಕಿನಲ್ಲಿ ವಾಸವಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಅನಿಲ ಸೂರ್ವೆ ಅವರ ಮನೆಯಲ್ಲಿ ಅಪಾದಿತ ಅಧಿಕಾರಿ ಶ್ರೀನಿವಾಸ ಆಲದರ್ತಿ ಅವರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರೀಶೀಲನೆ ನಡೆಸಿದ್ದು ಕಂಡು ಬಂದಿತು.   

 ಅಪಾದಿತ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅವರ ವಿರುದ್ದ ಪ್ರಕರಣ ದಾಖಲಾಗಿದ್ದು ಅದರ ಭಾಗವಾಗಿ ಇಲ್ಲಿನ ಮೃತ್ಯುಂಜಯ ನಗರದ ಕಾಂತೇಶ ನಿಲಯದ ವಾಸವಾಗಿರುವ ಅವರ ವಾಹನ ಚಾಲಕ ಸಿದ್ದೂಜಿ ಲಕ್ಷ್ಮಣರಾವ್ ಅವರ ಮನೆಯನ್ನು ಶೋಧನೆ ಮಾಡಿ ಶ್ರೀನಿವಾಸ ಆಲದರ್ತಿ ಅವರಿಗೆ ಸಂಬಂಧಿಸಿದ ಚರ ಸ್ಥಿತ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳು ಮತ್ತು ಬೆಳೆ ಬಾಳುವ ವಸ್ತುಗಳನ್ನು ಪರೀಶೀಲನೆ ಮಾಡಿದರು.     

 ಸಿದ್ದೂಜಿರಾವ್ ಸೂರ್ಯವಂಶಿ ಅವರಿಗೆ ಸಂಬಂಧಿಸಿದ ಒಲೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟಿ, ಹಿರೋ ಕಂಪನಿಯ ಫ್ಯಾಶನ್ ಪ್ಲಸ್ ಹೊಂಡಾ ಬೈಕ್, ಹುಂಡೈ ಕಂಪನಿಯ ವೆನ್ಯೂ ಕಾರು ಚಾಲಕನ ಹೆಸರಿನ್ನಲ್ಲಿರುವುದು ಕಂಡು ಬಂದಿದೆ.20 ಗ್ರಾಂ ತೂಕದ ಪಾಟ್ಲಿ, 36 ಗ್ರಾಂ ತೂಕದ ಬಿಲಾವರ ಬಳೆ, 30 ಗ್ರಾಂ ತೂಕದ ತಾಳಿ ಸರ, 30 ಗ್ರಾಂ ಬಂಗಾರದ ಲಕ್ಷ್ಮೀ ನಕ್ಲೇಸ್, 10 ಗ್ರಾಂ ಚಿನ್ನದ ಒಂದು ಕೊರಳು ಚೈನು, 5 ಗ್ರಾಂ ತೂಕದ ಒಂದು ಕೊರಳು ಚೈನು, 5 ಗ್ರಾಂ ಬಂಗಾರದ ಗುಂಡಿನ ಸರ, 10 ಗ್ರಾಂ ತೂಕದ 6 ಕೈ ಬೆರಳಿನ ಉಂಗುರಗಳು, 10 ಗ್ರಾಂ ತೂಕದ 5 ಜೊತೆ ಕಿವಿ ಓಲೆ ಸೇರಿದಂತೆ ಒಟ್ಟು 156 ಗ್ರಾಂ ತೂಕದ 7.90ಲಕ್ಷ ಅಂದಾಜು ಮೊತ್ತದ  ಚಿನ್ನಾಭರಣಗಳು  ಹಾಗೂ 4000 ಸಾವಿರ ನಗದು ಶೋಧನಾ ಕಾರ್ಯದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ಬಂಗಾರದ ಆಭರಣಗಳು ಸಿಡಿಪಿಓ ಕಚೇರಿಯ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಅವರಿಗೆ ಸೇರಿದ್ದಾಗಿದ್ದರಿಂದ ಜ್ಯೋತಿ ಅವರ ವಶಕ್ಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಒಟ್ಟಾರೆ ಇಂದಿನ ದಾಳಿಯಲ್ಲಿ  ಲೋಕಾಯುಕ್ತರು ಮೂವರು ನೌಕರರಿಂದ ಯಾವುದೇ ವಸ್ತುಗಳನ್ನು, ದಾಖಲೆಗಳನ್ನು ವಶ ಪಡಿಸಿಕೊಂಡಿಲ್ಲವೆಂದು ಹೇಳಲಾಗಿದ್ದು, ಬರೀ ಪರೀಶೀಲನೆ ನಡೆಸಿದರೆಂದು ತಿಳಿದು ಬಂದಿದೆ. ಆಪಾದಿತ ಶ್ರೀನಿವಾಸ ಆಲದರ್ತಿ ಅವರಿಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳು, ಚರ ಮತ್ತು ಸ್ಥಿರಾಸ್ಥಿಗಳು, ವಸ್ತುಗಳು, ಬಂಗಾರದ ವಡವೆಗಳಾಗಲೀ ಕಂಡು ಬಂದಿರುವುದಿಲ್ಲ ಎಂದು ಶಿವಮೊಗ್ಗದ ಲೋಕಾಯುಕ್ತ ಪೊಲೀಸ ಇನೆಸ್ಪೆಕ್ಟರ್ ಪ್ರಕಾಶ ತಿಳಿಸಿದ್ದಾರೆ. 


ಸುದ್ದಿ ಓದಿ