ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರೀಶೀಲನೆ
ಗುಳೇದಗುಡ್ಡ,ಜು.22: ನೂತನ ಗುಳೇದಗುಡ್ಡ ತಾಲೂಕಿನ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಪಟ್ಟಣದ ಹೆಸ್ಕಾಂ ಇಲಾಖೆ ಕಟ್ಟಡವನ್ನು ಹಸ್ತಾಂತರ ಮಾಡಲು ಮಾಜಿ ಸಿ.ಎಂ., ಶಾಸಕ ಸಿದ್ದರಾಮಯ್ಯನವರು ಹುಬ್ಬಳ್ಳಿ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಗುರುವಾರ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದರು.
ಮಾಜಿ ಸಿ.ಎಂ., ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರ್ಪನವರಿಗೆ ಹಾಗೂ ಹುಬ್ಬಳ್ಳಿಯ ಹೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಭಾರತಿ ಅವರಿಗೆ ಕೆಲ ದಿನಗಳ ಹಿಂದೆ ದೂರವಾಣಿ ಮುಖಾಂತರ ಮಾತನಾಡಿದ ಹಿನ್ನೆಲೆಯಲ್ಲಿ, ಗುರುವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ಅಧಿಕಾರಿಗಳು ಭೇಟಿ ನೀಡಿ ನೂತನ ಗುಳೇದಗುಡ್ಡ ತಾಲೂಕಿನ ಮಿನಿ ವಿಧಾನಸೌಧ ಕಟ್ಟಣ ನಿರ್ಮಾಣಕ್ಕೆ ಸ್ಥಳ ಪರೀಶೀಲಿಸಿದರು.
ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಗುಳೇದಗುಡ್ಡದ ಪ್ರವಾಸಿಮಂದಿರದ ಹತ್ತಿರವಿರುವ ಉಪವಿಭಾಗದ ಕಚೇರಿ ಮತ್ತು ಬಾಗಲಕೋಟೆ ರಸ್ತೆಗೆ ಹೊಸ ಅಂಭಾಭವಾನಿ ದೇವಸ್ಥಾನದ ಹತ್ತಿರವಿರುವ ಕಚೇರಿ ಎರಡೂ ಹೆಸ್ಕಾಂ ಕಚೇರಿಗಳ ಸ್ಥಳಗಳನ್ನು ಪರೀಶೀಲನೆ ಮಾಡಿದರು. ಸ್ಥಳದ ಕುರಿತಾಗಿ ಮಾಜಿ ಸಿ.ಎಂ. ಸಿದ್ಧರಾಮಯ್ಯನವರಿಗೆ ದೂರವಾಣಿ ಮುಖಾಂತರ ತಿಳಿಸುವುದಾಗಿ ಅವರು ಹೇಳಿದರು.
ತಾಲೂಕಾ ಹೆಸ್ಕಾಂ ಅಧಿಕಾರಿ ಎಇಇ ಪ್ರಕಾಶ ಪೂಚಗುಂಡಿ ಹಾಗೂ ಹೆಸ್ಕಾಂ ಸಿಬ್ಬಂದಿಗಳು, ಗುತ್ತಿಗೆದಾರರು ಹಾಜರಿದ್ದರು.
ಚರ್ಚಿಸಿ ನಿರ್ಧಾರ : ಗುರುವಾರ ಗುಳೇದಗುಡ್ಡಕ್ಕೆ ಹುಬ್ಬಳ್ಳಿಯ ಹೆಸ್ಕಾಂ ಅಧಿಕಾರಿಗಳು ಬಂದು ಹೋಗಿದ್ದಾರೆ. ಸಿದ್ದರಾಮಯ್ಯ ಸಾಹೇಬರೊಂದಿಗೆ ಆದಷ್ಟು ಬೇಗ ಚರ್ಚಿಸಿದ ಬಳಿಕ ಸ್ಥಳ ನಿರ್ಧಾರವಾಗಲಿದೆ ಎಂದು ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.