ಕಾಗವಾಡ

ಸಿದ್ದೇಶ್ವರ ಪಿಕೆಪಿಎಸ್ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಟ್ರ್ಯಾಕ್ಟರ್‌ಗೆ ಸಾಲ

ಸಿದ್ದೇಶ್ವರ ಪಿಕೆಪಿಎಸ್ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಟ್ರ್ಯಾಕ್ಟರ್‌ಗೆ ಸಾಲ

ಲೋಕದರ್ಶನ ವರದಿ 

ಕಾಗವಾಡ 28: ನಿಸ್ವಾರ್ಥ ಆಡಳಿತ ಮಂಡಳಿ ಮತ್ತು ಪ್ರಾಮಾಣಿಕ ಸಿಬ್ಬಂದಿಗಳ ಇವರ ಸೇವೆಯಿಂದ ಸಹಕಾರಿ ಸಂಸ್ಥೆಗಳು ಅಭಿವೃದ್ಧಿ ಸಾಧಿಸುವುದು ಶತಸಿದ್ಧ ಎಂದು ಐನಾಪುರ್ ಸಿದ್ದೇಶ್ವರ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ಪ್ರವೀಣ ಗಾಣಿಗೇರ್ ಹೇಳಿದರು. 

ಗುರುವಾರ ರಂದು ಶ್ರೀ ಸಿದ್ದೇಶ್ವರ ಪಿಕೆಪಿಎಸ್ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಟ್ರ್ಯಾಕ್ಟರ್‌ಗೆ ಸಾಲ ನೀಡಿದರು. ಸಂಸ್ಥೆಯ ಸದಸ್ಯರು ಹಾಗೂ ರೈತನಾದ ಸಂತೋಷ್ ಕುಸನಾಳೆ ಇವರಿಗೆ ಟ್ರ್ಯಾಕ್ಟರ್ ಕಿ ನೀಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರವೀಣ ಗಾಣಿಗೇರ್ ಮಾತನಾಡಿದರು. 

ಐನಾಪುರ್ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ್ ಮಾತನಾಡಿ ಸಹಕಾರ ರಂಗ ಹುಟ್ಟಿದ್ದರಿಂದ ಸಾಮಾನ್ಯ ಬಡ ರೈತ ಕುಟುಂಬಗಳಿಗೆ ಸಾಲ ನೀಡಿ ಸಹಕರಿಸಲು ಸಿದ್ಧವಾಯಿತು. ಸಕಾಲದಲ್ಲಿ ಸಾಲ ಪಡೆದು ಮರುಪಾವತಿಸಬೇಕು ಎಂದು ಹೇಳಿದರು. ಇದ್ದೆ ರೀತಿ ಸಂಸ್ಥೆಯ ಹಿರಿಯ ಸದಸ್ಯರಾದ ಸಂಜಯ್ ಬಿರಡಿ, ಅರುಣ ಗಾಣಿಗೇರ್ ಮಾತನಾಡಿದರು. 

ಸಂಸ್ಥೆಯ ಕಾರ್ಯದರ್ಶಿ ವಿರುಪಾಕ್ಷ ಕಾರ್ಚಿ ಮಾತನಾಡಿ ಸಂಸ್ಥೆ ವತಿಯಿಂದ ಇದೇ ಪ್ರಥಮ ಬಾರಿಗೆ ಟ್ರ್ಯಾಕ್ಟರ್ ಖರೀದಿಸಲು 5 ಲಕ್ಷ ರೂ. ಸಾಲ ನೀಡಲಾಗಿದೆ. ರೈತ ಸದಸ್ಯರಿಗೆ ಇವರಿಗ್ಗೆ 90 ಲಕ್ಷ ರೂಪಾಯಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಹಿರಿಯರಾದ ತಾತ್ಯಾಸಾಹೇಬ ಕುಚನುರೆ, ಕುಕುಮಚಂದ್ ಹಂಚಿಬಟ್ಟೆ, ಭೀಮಪ್ಪ ತೇಲಿ, ಬಾದಶಹ ಡಾಂಗೆ, ಆದಿನಾಥ ದಾನೊಳ್ಳಿ, ಸುರೇಶ್ ಅಡಿಸೇರಿ, ಚನ್ನಮಲ್ಲಪ್ಪ ಗಾಣಿಗೇರ್, ಸಂಜಯ್ ಬಿರಡಿ, ಸುರೇಶ ಗಾಣಿಗೇರ್, ಮೆಹಬೂಬ ನನದಿ, ಗುರುರಾಜ ಮಡಿವಾಳರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ