ಸಾಲ ಮರುಪಾವತಿ ವಿಸ್ತರಣೆ ಸ್ವಾಗತಾರ್ಹ: ಪೊಲೀಸ್ಪಾಟೀಲ
ಶೇಡಬಾಳ 20: ಕಳೆದ ಎರಡು ವರ್ಷಗಳಿಂದ ಕೊರೊನಾ ಮೊದಲನೆ ಹಾಗೂ ಎರಡನೇ ಅಲೆಯಿಂದ ರೈತಾಪಿ ವರ್ಗದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಾಲ ಮರುಪಾವತಿ ಚಿಂತೆಯಲ್ಲಿದ್ದಾಗ ಮುಖ್ಯಮಂತ್ರಿ ಯಡಿಯುರ್ಪನವರು ಸಹಕಾರಿ ಸಂಘಗಳಲ್ಲಿ ಪಡೆದ ಎಲ್ಲ ಸಾಲಗಳನ್ನು ಜುಲೈ 31ರವರೆಗೆ ವಿಸ್ತರಿಸಿರುವುದಕ್ಕೆ ಮುಖ್ಯಮಮತ್ರಿ ಬಿ.ಎಸ್.ಯಡಿಯುರ್ಪ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಕೃಷ್ಣಾ ಕಿತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ದಿ.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕ ವಿಶ್ವನಾಥ ಮಲಗೌಡ ಪೊಲೀಸ್ಪಾಟೀಲ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ವೈ ಅವರು ಕೋವಿಡ್ ಲಾಕ್ಡೌನ್ಗೆ ಸಂಬಂಧಿಸಿದಂತೆ ಪ್ಯಾಕೆಜ್ ಘೋಷಣೆ ಮಾಡಿದ್ದರೆ. ಅದರಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರು ಪಡೆದುಕೊಂಡ ಸಾಲದ ಅವದಿ ಮುಗಿದಿದ್ದು, ಸಾಲ ಮರುಪಾವತಿಯ ಅವಧಿಯನ್ನು ಮೇ 31 ಆಗಿತ್ತು. ಅದನ್ನು ಜುಲೈ 31ರ ವರೆಗೆ ವಸ್ತರಿಸಿದ್ದು ರೈತ ಸಮುದಾಯಕ್ಕೆ ಸಂತಸ ತಂದಿದೆ ಎಂದು ವಿಶ್ವನಾಥ ಮಲಗೌಡ ಪೊಲೀಸ್ಪಾಟೀಲ ಹೇಳಿದರು,
ಸರಕಾರ ಕೊರೊನಾ ತಡೆಗಟ್ಟಲು ಲಾಕ್ಡೌನ್ ಘೋಷಣೆ ಮಾಡಿದೆ. ಇಂಥಹ ಸಂದರ್ಭದಲ್ಲಿ ರೈತರ ಸಾಲಗಳ ಮರುಪಾವತಿಯ ದಾಖಲೆಗಳನ್ನು ಪಡೆಯಲು ಸಾಧ್ಯವಿಲ್ಲ.ಆ ಕಾರಣಕ್ಕಾಗಿ ಸಾಲದ ಮರುಪಾವತಿ ದಿನಾಂಕವನ್ನು ಮುಂದುಡಬೇಕೇಂದು ಕಾಗವಾಡ ಹಾಗೂ ಅಥಣಿ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳು ಉಪ ಮುಖ್ಯಮಮತ್ರಿ ಲಕ್ಷ್ಮಣ ಸವದಿ, ಕೈಮಗ್ಗ,ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಗಮನಕ್ಕೆ ತಂದಾಗ ಇಬ್ಬರು ಸಚಿವರು ಸಿಎಂ ಅವರಿಗೆ ಮನವಿ ಮಾಡಿಕೊಂಡಾಗ ಸಾಲದ ಮರುಪಾವತಿಯ ಅವಧಿಯನ್ನು ವಿಸ್ತರಿಸಿದ್ದಾರೆ. ಇದರಿಂದ ಎಲ್ಲ ಸಹಕಾರಿ ಸಂಘಗಳ ಪಾಧಿಕಾರಿಗಳು ರಾಜ್ಯ ಸರಕಾರಕ್ಕೆ ಧನ್ಯದಗಳನ್ನು ಅರ್ಿಸಿದ್ದಾರೆ.