ಜಾನುವಾರು ಸಂತೆ ಇಲ್ಲ: ಕಾರ್ಯದರ್ಶಿ ರಾಠೋಡ
ಗುಳೇದಗುಡ್ಡ,ಜು.4: ಬಾದಾಮಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಮಾರುಕಟ್ಟೆಗಳಾದ ಕೆರೂರ ಪಟ್ಟಣದಲ್ಲಿ ಮಂಗಳವಾರ ಮತ್ತು ಜಾಲಿಹಾಳ ಗ್ರಾಮದಲ್ಲಿ ಬುಧವಾರ ಜರುಗುವ ಜಾನುವಾರು ಮತ್ತು ಕುರಿ ಸಂತೆಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಇನ್ನೂ ಆದೇಶ ಬಂದಿರುವುದಿಲ್ಲ. ಕಾರಣ ಈ ಸ್ಥಳಗಳಲ್ಲಿ ಜಾನುವಾರು ಮತ್ತು ಕುರಿ ಸಂತೆಗಳನ್ನು ಬಂದ್ ಮಾಡಲಾಗಿದೆ ಎಂದು ಬಾದಾಮಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವಿ ರಾಠೋಡ ತಿಳಿಸಿದ್ದಾರೆ.
ಸರ್ಕಾರದ ಆದೇಶ ಬರುವವರೆಗೆ ಸಂತೆ ಮಾಡುವ ವಿಷಯವಾಗಿ ಕಾಯಬೇಕೆಂದು ಹಾಗೂ ಅಲ್ಲಿವರೆಗೆ ಸಹಕರಿಸಬೇಕೆಂದು ಅವರು ರೈತ ಬಾಂಧವರು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.