ಜಾತಿ ಧರ್ಮ ಸಮನ್ವಯತೆಯಿಂದ ಬದುಕಿರಿ
ಗುಳೇದಗುಡ್ಡ,ಮಾ,22: ನಮ್ಮ ದೇಶ ಹಲವು ಜಾತಿ, ಧರ್ಮ ಸಮ್ವಯದ ನೆಲೆವೀಡಾಗಿದೆ ನೀವುಗಳು ಎಲ್ಲರೊಂದಿಗೆ ಜಾತ್ಯಾತೀತತೆಯಿಂದ ಧರ್ಮ ಸಮನ್ವಯತೆಯಿಂದ ಬದುಕಿರಿ ಎಂದು ಶ್ರೀ ಚಿನ್ಮಯಾನಂದ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಜರುಗಿದ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗುಳೇದಗುಡ್ಡ ತಾಲೂಕಿನ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ ಸಮಾರಂಭವನ್ನು ಉದ್ಘಾಟಿಸಿ ಸಾನಿಧ್ಯವಹಿಸಿ ಮಾತನಾಡಿ, ಒಂದು ದಿನ ತಮ್ಮ ಗುರುಗಳೊಂದಿಗೆ ಹೋಗುವಾಗ ಈ ನೆಲ ದೂಡ್ಡ ಸಾಮ್ರಾಜ್ಯವಾಗುತ್ತದೆ ಎಂದಾಗ ಅದೇ ಪ್ರದೇಶದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಆಗೀನ ಕಾಲದಲ್ಲಿ ಮುತ್ತು, ರತ್ನ ಅಳೆದು ಮಾರುವಂತ ಶ್ರೀಮಂತ ಸಾಮ್ರಾಜವಾಗಿತ್ತು. ಅಂತಹ ಹಿರಿಯರ ಗುಣಗಳನ್ನು ಬೆಳೆಸಿಕೊಂಡು ಉದಾತ್ತವಾಗಿ ಸಮಾಜದಲ್ಲಿ ಆದರ್ಶಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ.ಸಿದ್ದಾಪೂರವಹಿಸಿದ್ದರು.
ವೇದಿಕೆಯ ಮೇಲೆ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಶ್ರೀಶೈಲ ದಳವಾಯಿ, ಹಣಮಂತ ಅಪ್ಪಣ್ಣವರ, ಮುಖಂಡ ಪ್ರಕಾಶ ಮೇಟಿ, ಜಿ.ಪಂ.ಸದಸ್ಯ ಆಸೆಂಗೆಪ್ಪ ನಕ್ಕರಗುಂದಿ, ಮಂಜು ಹೊಸಮನಿ, ಬಸವರಾಜ ಭೂತಾಳಿ, ಹನಮಂತ ಕಳ್ಳಿಗುಡ್ಡ, ನಾಗಪ್ಪ ಗೌಡರ, ಶಶಿ ಉದಗಟ್ಟಿ, ಮಲ್ಲು ಹುನಗುಂಡಿ, ಲೆಂಕೆಪ್ಪ ಹಿರೇಕುರಬರ, ಶಿವಾನಂದ ಗೊರವರ ಮತ್ತಿತರು ಉಪಸ್ಥಿತರಿದರು.
ಪದಾಧಿಕಾರಿಗಳ ಆಯ್ಕೆ: ಗುಳೇದಗುಡ್ಡ ತಾಲೂಕು ಕುರುಬರ ಸಂಘದ ತಾಲೂಕ ಅಧ್ಯಕ್ಷರಾಗಿ ನಾಗಪ್ಪಗೌಡರ, ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ವಾಲೀಕಾರ, ಕಾರ್ಯದರ್ಶಿಯಾಗಿ ಡಾ.ಎಚ್.ಎಸ್.ಘಂಟಿ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಮಲ್ಲು ಹುನಗುಂಡಿ, ಕಾರ್ಯದರ್ಶಿಯಾಗಿ ಮಂಜುನಾಥ ಜಡಿ ಹಾಗೂ ತಾಲ್ಲೂಕಿನಲ್ಲಿ ಹನ್ನೆರಡು ಗ್ರಾ.ಪಂಗಳಿದ್ದು, ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲು ನಿರ್ಣಯಿಸಲಾಯಿತು.