ಬೈಲಹೊಂಗಲ

‘ಗರೀಬನ ಜೋಳಿಗೆ’ ಗಜಸಿಲ್ ಸಂಕಲನಕ್ಕೆ ಸಾಹಿತ್ಯ ಪ್ರಶಸ್ತಿ

‘ಗರೀಬನ ಜೋಳಿಗೆ’ ಗಜಸಿಲ್ ಸಂಕಲನಕ್ಕೆ ಸಾಹಿತ್ಯ ಪ್ರಶಸ್ತಿ

ಲೋಕದರ್ಶನ ವರದಿ 


ಬೈಲಹೊಂಗಲ 20: ತಾಲೂಕಿನ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ ನಾಗೇಶ್ ಜೆ. ನಾಯಕ ರಚಿಸಿದ ಗರೀಬನ ಜೋಳಿಗೆ ಗಜಸಿಲ್ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ 2020ರ ಸಾಲಿನ ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ ಲಭಿಸಿದೆ. 

ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪ್ರತಿವರ್ಷ ಜಿಲ್ಲೆಯ ಲೇಖಕರಿಗೆ ಪುಸ್ತಕ ಪ್ರಶಸ್ತಿ ಕೊಡುತ್ತಿದ್ದು, 2020 ಸಾಲಿನಲ್ಲಿ ಪ್ರಕಟವಾದ ಉತ್ತಮ ಕೃತಿ ಪುಸ್ತಕ ಪ್ರಶಸ್ತಿಗೆ ನಾಗೇಶ್ ಜೆ. ನಾಯಕ ಅವರ ‘ಗರೀಬನ ಜೋಳಿಗೆ’ ಗಜಸಿಲ್ ಸಂಕಲನಕ್ಕೆ ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ ಗೌರವ ಲಭಿಸಿದೆ. ಈಗಾಗಲೇ ನಾಗೇಶ್ ಅವರ 20 ಕೃತಿಗಳು ಪ್ರಕಟವಾಗಿದ್ದು, ಇಂಚಲ ಕಾವ್ಯ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಅಡ್ವೈಸರ್ ಸಾಹಿತ್ಯ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಗಂಗಾಧರ ಮಡಿವಾಳೇಶ್ವರ ಪ್ರಶಸ್ತಿ, ಲಭಿಸಿವೆ. 

ಮುಂದಿನ ದಿನಗಳಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗೇಶ್ ನಾಯಕ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ತಿಳಿಸಿದ್ದಾರೆ. 


ಸುದ್ದಿ ಓದಿ