ರಾಣೆಬೆನ್ನೂರ

ಲಯನ್ಸ ಕನ್ನಡ ಶಾಲೆ ವಿದ್ಯಾರ್ಥಿಗಳು ಮಂಡಲ ಮಟ್ಟಕ್ಕೆ ಆಯ್ಕೆ

ಲಯನ್ಸ ಕನ್ನಡ ಶಾಲೆ ವಿದ್ಯಾರ್ಥಿಗಳು ಮಂಡಲ ಮಟ್ಟಕ್ಕೆ ಆಯ್ಕೆ

ರಾಣಿಬೆನ್ನೂರ 15: ನಗರದ ಲಯನ್ಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಮಂಡಲ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ತೇಜಸ್ವಿನಿ ಚಕ್ರಸಾಲಿ ಅಭಿನಯ ಗೀತೆಯಲ್ಲಿ ಪ್ರಥಮ, ನವ್ಯತಾ ತುಕ್ಕಪ್ಪನವರ ಭಕ್ತಿಗೀತೆಯಲ್ಲಿ ಪ್ರಥಮ, ಗೌತಮ್ ಬಾಳಿಕಾಯಿ ಆಶುಭಾಷಣದಲ್ಲಿ ಪ್ರಥಮ, ಸಿಂಚನಾ ಅಜ್ಜಪ್ಪನವರ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ,ಪೃಥ್ವಿ ಬುರಡಿಕಟ್ವಿ ಮಿಮಿಡ್ರಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ಸಾಧನೆ ಗೈದ ವಿದ್ಯಾರ್ಥಿಗಳಿಗೆ ಶಾಲೆಯು ಆಡಳಿತ ಮಂಡಳಿಯವರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆಗನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ