ರಾಣೆಬೆನ್ನೂರ

ಲಯನ್ ಸೇವಾ ಸಂಸ್ಥೆ: ಇಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಲಯನ್ ಸೇವಾ ಸಂಸ್ಥೆ: ಇಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ರಾಣೇಬೆನ್ನೂರು  ಜು 14: ಜುಲೈ 15ರಂದು ಸೋಮವಾರ ಸಂಜೆ 6 ಗಂಟೆಗೆ, ಲಯನ್ಸ್‌  ಅಂತರಾಷ್ಟ್ರೀಯ ಸೇವಾ ಸಂಸ್ಥೆಯ, 2024 ಮತ್ತು 25ನೇ ಸಾಲಿನ ನೂತನ ಅಧ್ಯಕ್ಷ ಪದಾಧಿಕಾರಿಗಳ ಆದಗ್ರಹಣ ಸಮಾರಂಭವು, ಸ್ಥಳೀಯ ಶ್ರೀ ಆದಿಶಕ್ತಿ ದೇವಸ್ಥಾನ ಗುಪ್ತಾ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಎಂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ ಹೇಳಿದರು.  

ಅವರು ರವಿವಾರ, ಲಯನ್ಸ್‌ ಶಾಲಾ ಭವನದಲ್ಲಿ ಏರಿ​‍್ಡಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರದಲ್ಲಿ ಆರಂಭಗೊಂಡಿರುವ ಲಯನ್ ಸೇವಾ ಸಂಸ್ಥೆಗೆ 48 ವರ್ಷಗಳ ಭವ್ಯ ಇತಿಹಾಸವಿದೆ. ಸಾರ್ವಜನಿಕ ರಂಗದಲ್ಲಿ, ತನ್ನನ್ನೇ ತಾನು ತೊಡಗಿಸಿಕೊಂಡು ಸೇವಾ ಮುಖಿಯಾಗಿರುವ, ಲಯನ್ ಸಂಸ್ಥೆ, ಶಿಕ್ಷಣ ಸೇವೆಯ ಜೊತೆಗೆ,ಆರೋಗ್ಯ, ಕಣ್ಣು ತಪಾಸಣೆ ಮತ್ತು ಚಿಕಿತ್ಸೆ ತರಕಾರಿ ಆಸ್ಪತ್ರೆಯ   ರೋಗಿಗಳಿಗೆ ಪ್ರತಿ ಗುರುವಾರ ಅನ್ನಪ್ರಸಾದ ಮಾಡುತ್ತಾ ಬಂದಿದೆ. ಪ್ರಸಾದ ಯೋಜನೆಯು ಇಂದಿಗೆ 265 ವಾರಗಳ ಕಾಲ ನಡೆದು ಬಂದಿದೆ ಎಂದು ವಿವರಿಸಿ ಮಾತನಾಡಿದರು.  

   24 -25 ನೇ ಸಾಲಿಗೆ, ಲಯನ್ಸ್‌ ಹಿರಿಯ ಸದಸ್ಯ ಶಿವಪ್ಪ ಬ. ಗುರಿಕಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಅಂಗಡಿ ಮತ್ತವರ ತಂಡದವರಿಗೆ, 317-ಬಿ, ಜಿಲ್ಲಾ ರಾಜ್ಯಪಾಲ  ಲ, ಜೈ ಅಮೋಲ್ ನಾಯ್ಕ್‌ ಅವರು ಪ್ರಮಾಣವಚನ ಬೋಧಿಸುವರು. ಮುಖ್ಯ ಅತಿಥಿಗಳಾಗಿ ತೆರಿಗೆ ಇಲಾಖೆಯ ಜಿಲ್ಲಾ ಸಹ  ಆಯುಕ್ತ, ಎನ್ ರವಿಕುಮಾರ್, ಮತ್ತು ಇನ್ನೋರ್ವ ಆಯುಕ್ತ ಬಿ. ನಾಗರಾಜರಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ಸ್ಥಳೀಯ ನಾಯಕರು ಸೇರಿದಂತೆ, ನಾಡಿನ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು  ನೂತನ ಅಧ್ಯಕ್ಷ ಪದಾಧಿಕಾರಿಗಳಿಗೆ ಶುಭ ಹಾರೈಸಬೇಕೆಂದು ಮಲ್ಲೇಶಪ್ಪ ಅರಿಕೇರಿ ಅವರು ಮನವಿ ಮಾಡಿದರು. ಮಾಧ್ಯಮಗೋಷ್ಠಿಯಲ್ಲಿ ಲಯನ್ ಸೇವಾ ಸಂಸ್ಥೆಯ. ಮಾಜಿ ಅಧ್ಯಕ್ಷರಾದ ಬಸವರಾಜ ಬಡಿಗೇರ್, ನಾಗರಾಜ ಕುಲಕರ್ಣಿ,  ಜಯಣ್ಣ ಮುಚಡಿ, ಅಶೋಕ ಹೂಟ್ಟಿ ಗೌಡ್ರು, ನೂತನ ಅಧ್ಯಕ್ಷ ಶಿವಪ್ಪ ಗುರಿಕಾರ್, ಕಿರಣ್ ಕುಮಾರ್ ಅಂಗಡಿ, ಗುತ್ತೆಪ್ಪ ಹಳೆಮನಿ, ನಂದೀಶ್ ಆರ್, ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ