ಲೈನ್ಸ್ ಕ್ಲಬ್ ಬೆಳ್ಳಿ ಮಹೋತ್ಸವ: ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಾಗವಾಡ26: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರದ ಉದ್ಯಮಿಗಳಾದ ರಾಜಾಭಾವು ಶಿರಗಾಂವಕರ ಇವರ ನೇತೃತ್ವದಲ್ಲಿ ಉಗಾರ ಲೈನ್ಸ್ ಕ್ಲಬಿನ ಸದಸ್ಯರು ನಿರಂತರವಾಗಿ ಕಡುಬಡವರಿಗೆ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಂಡು ಉಚಿತ ಸೇವೆ ನೀಡುವದೊಂದಿಗೆ ಇನ್ನೀತರ ಸೇವೆ ನೀಡಿ ಜಿಲ್ಲೆಯಲ್ಲಿ ಮಾದರಿ ಲೈನ್ಸ್ ಕ್ಲಬ್ಯೆಂದು ಹೆಸರಾಂತವಾಗಿದೆಯೆಂದು ಬೆಳಗಾವಿಯ ಲೈನ್ಸ್ ಕ್ಲಬ್ ವಿಭಾಗಿಯ ಅಧ್ಯಕ್ಷ ರಾಜಶೇಖರ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ರವಿವಾರರಂದು ಉಗಾರದ ಡಾ. ಶಿರಗಾಂವಕರ ಆರೋಗ್ಯ ಮಂದಿರದಲ್ಲಿ ಲೈನ್ಸ್ ಕ್ಲಬಿನ ಬೆಳ್ಳಿ ಮಹೋತ್ಸವ ನಿಮಿತ್ಯವಾಗಿ ಮಿರಜದ ಖ್ಯಾತ ಸೇವಾ ಸದನ ಆಸ್ಪತ್ರೆಯ ಡಾ. ರವಿಕಾಂತ ಪಾಟೀಲ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದರು. ಡಾ. ಅಮೀತ ಕೋಲೆ, ಡಾ. ರೋಹಿತ ಚಡ್ಢಾ, ಡಾ. ಸಿಮರನ್ ಮುಜಾವರ ಇವರು ಶಿಬಿರಾರ್ಥಿಗಳಿಗೆ ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಪ್ಯಾರಾಲೈಸಿಸ್ ಸೇರಿದಂತೆ ಇನ್ನೀತರ ಕಾಯಿಲೆಗಳ ಮೇಲೆ ಉಪಚಾರ ನೀಡಿದರು.
ಮಿರಜದ ಸೇವಾ ಸದನ ಲೈಫ್ ಲೈನ್, ಉಗಾರ ಲೈನ್ಸ್ ಕ್ಲಬ್, ಉಗಾರ ವೈದ್ಯರ ಸಂಘಟನೆ, ಉಗಾರ ಸಕ್ಕರೆ ಕಾರ್ಖಾನೆ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಿದ್ದರು. ಇದರ ಉದ್ಘಾಟನೆ ಲೈನ್ಸ್ ಜಿಲ್ಲಾ ವಿಭಾಗಿಯ ಅಧ್ಯಕ್ಷ ರಾಜಶೇಖರ ಪಾಟೀಲ ಇವರು ಶಿಬಿರ ಉದ್ಘಾಟಿಸಿ ಮಾತನಾಡುವಾಗ, ಬೆಳಗಾವಿಯಿಂದ ನಾವು ಪ್ರಾರಂಭಿಸಿದ ಉಗಾರ ಶಾಖೆ 25 ವರ್ಷದಲ್ಲಿ ಅತ್ಯುತ್ತಮ ಸೇವೆ ನೀಡಿದೆ. ಅವರ ಸೇವೆ ಪ್ರತಿಯೊಂದ ಹಳ್ಳಿ-ಹಳ್ಳಿಗೆ ತಲುಪಿದೆ. ಇದರಿಂದ ನಮಗೆ ಸಂತಸ ತಂದಿದೆಯೆಂದು ಹೇಳಿದರು.
ಉಗಾರ ಲೈನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಬಾಬಾಗೌಡ ಪಾಟೀಲ ಮತ್ತು ಮಾಜಿ ಅಧ್ಯಕ್ಷ ಶ್ರೀಕಾಂತ ಭಟ್ಟ ಇವರು ಮಾತನಾಡುವಾಗ, ನಮ್ಮ ಕ್ಲಬಿಗೆ 25 ವರ್ಷ ಕಳೆದಿದ್ದರಿಂದ ಬೆಳ್ಳಿ ಮಹೋತ್ಸವ ವರ್ಷ ಆಚರಿಸುತ್ತಿದ್ದೇವೆ. ಈ ವರೆಗೆ ಅನೇಕ ಉಚಿತ ವೈದ್ಯಕೀಯ ಶಿಬಿರಗಳು ಹಮ್ಮಿಕೊಂಡು ತಜ್ಞ ವೈದ್ಯರಿಂದ ಜನರ ಆರೋಗ್ಯ ತಪಾಸಣೆ ಮಾಡಿ ಅವರಿಗೆ ನೆರವಾಗಿದ್ದೇವೆ. ನಿರಂತರವಾಗಿ ಡಾ. ಶಿರಗಾಂವಕರ ಆರೋಗ್ಯ ಮಂಂದಿರದ ವತಿಯಿಂದ ಈ ವರೆಗೆ 1 ಲಕ್ಷ ಜನರ ನೇತ್ರ ತಪಾಸಣೆ ಮಾಡಿ ಉಚಿತ ಉಪಚಾರ ನೀಡಿದ್ದೇವೆ. ಇದು ನಿರಂತರವಾಗಿ ಮುಂದೆ ಸಾಗುತ್ತಿದೆಯೆಂದು ಹೇಳಿದರು.
ಶಿಬಿರ ಯಶಸ್ವಿಗೊಳಿಸಲು ಅಧ್ಯಕ್ಷ ಡಾ. ಬಾಬಾಗೌಡಾ ಪಾಟೀಲ ಇವರ ನೇತೃತ್ವದಲ್ಲಿ ಮಾಜಿ ಅಧ್ಯಕ್ಷರಾದ ಸುಭಾಷ ಹೆಬ್ಬಳ್ಳಿ, ಮನೀಷ ಶಹಾ, ಬಿ.ಎನ್.ಚೌಗುಲೆ, ಡಾ. ಎಚ್.ಎನ್.ಸಾಬಡೆ, ಡಾ. ಬಿ.ಎ.ಪಾಟೀಲ, ಸಚೀನ ಪೋತದಾರ, ಬಸವರಾಜ ಕೊಟಬಾಗಿ, ಕಿಶೋರ ಬಿರಾಜದಾರ, ಪ್ರಥಮೇಶ ಪಾಟೀಲ, ಬಿ.ಬಿ.ಕಾಗೆ, ಡಾ. ಎಸ್.ಎ.ಭರಮದೆ, ಇವರು ಶ್ರಮಿಸಿದರು. ಅತಿಥಿಗಳಾಗಿ ಬೆಳಗಾವಿಯ ಲೈಯನ್ ಎಂ.ಬಿ.ಪಾಟೀಲ(ನ್ಯಾಯವಾದಿಗಳು), ಲೈಯನ್ ಧೊಂಡಬಂಗಿ ಸೇರಿದಂತೆ ಅನೇಕರು ಇದ್ದರು.