ರಾಣೆಬೆನ್ನೂರ

ವಿದ್ಯುತ್ ಸ್ಪರ್ಶದಿಂದ ಲೈನ್ ಮ್ಯಾನ್ ಚನ್ನಬಸಯ್ಯ ಗತ್ತಿಮಠ ಸಾವು

ವಿದ್ಯುತ್ ಸ್ಪರ್ಶದಿಂದ ಲೈನ್ ಮ್ಯಾನ್ ಚನ್ನಬಸಯ್ಯ  ಗತ್ತಿಮಠ ಸಾವು

ರಾಣೆಬೆನ್ನೂರ 07: ತಾಲೂಕಿನ ಹರನಗಿರಿ ಬಳಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಪವರ್ ಮ್ಯಾನಗೆ ಮೇನ್ ಲೈನ್ ಸ್ಪರ್ಶವಾಗಿ ಕೆಳಗಡೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ  ಮೃತಪಟ್ಟ ಘಟನೆ ಹರನಗಿರಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತನನ್ನು ಚನ್ನಬಸಯ್ಯ ಬಸಯ್ಯ ಗತ್ತಿಮಠ(34) ಎಂದು ಗುರುತಿಸಲಾಗಿದೆ. ತಾಲೂಕಿನ ಕುದರಿಹಾಳ ಮತ್ತು ಹರನಗಿರಿ ಗ್ರಾಮಗಳಿಗೆ ಪವರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ. ಮೂಲತಃ ಹಾವೇರಿ ತಾಲೂಕಿನ ಗುತ್ತಲ ಗ್ರಾಮದರಾದ ಚನ್ನಬಸಯ್ಯ ಗತ್ತಿನಮಠ. ನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ