ಗುರು ಭಕ್ತಿಯತ್ತ ನಮ್ಮ ಚಿತ್ತವಿದ್ದರೆ ಬದುಕು ಸಾರ್ಥಕ: ಹೊನ್ನಳಿ ಶ್ರೀಗಳು
ರಾಣೇಬೆನ್ನೂರು 26: ವಿದ್ಯೆ ನಮ್ಮಲ್ಲಿರುವ ಸುಪ್ತ ಸಂಪತ್ತು. ಭೌತಿಕ ಸಂಪತ್ತು ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ ಆದರೆ ಜ್ಞಾನ ಸಂಪತ್ತು ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಇಲ್ಲಿನ ಮೃತ್ಯುಂಜಯ ನಗರದ, ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ, ಅಗಿ ಹುಣ್ಣಿಮೆ, 276ನೇ ಮಾಸಿಕ ಜ್ಞಾನವಾಹಿನಿ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಜ್ಞಾನದ ಜೊತೆಗೆ ನಿರಂತರ ಅನ್ನೋದಾಸೂಹದ, ಇದು ಭಾರತೀಯ ಸಂಸ್ಕೃತಿಯ ಪರಂಪರೆ, ಇತಿಹಾಸದ ಗುರುಕುಲ ಶಿಕ್ಷಣ ನಮ್ಮದಾಗ ಬೇಕಾಗಿದೆ ಅಂತಹ ಕೆಲಸ, ಜ್ಞಾನವಾಹಿನಿ ಮೂಲಕ ನಡೆಯುತ್ತಿರುವುದು, ಶಿವಾಚಾರ್ಯರಿಗೆ ತುಂಬು ಸಂತೋಷ ನೀಡಿದೆ. ಇಂತಹ ಸಂಸ್ಕಾರ ಪರಂಪರೆ ನಾಡಿನ ಜನತೆ ನಿತ್ಯ ನಿರಂತರ ನಡೆಸುವಂತಾಗಬೇಕಾಗಿದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಬ್ಯಾಡಗಿಯ ಕಾಲೇಜು ಉಪನ್ಯಾಸಕ ಸಿದ್ದಲಿಂಗ ಸ್ವಾಮಿ ಉಜ್ಜಯಿನಿ ಮಠ ಅವರು, ನಮ್ಮ ಚಿತ್ತ ಗುರುಭಕ್ತಿ ಯತ್ತ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ ಇಂದು ಪ್ರತಿಭೆಗಳಿಗೆ ಕೊರತೆ ಇಲ್ಲ. ವಿದ್ಯೆ ಸುಮ್ಮನೆ ಒಲಿಯುವುದಿಲ್ಲ ಭಕ್ತಿ ಮತ್ತು ಶೃದ್ದೆ ಇದ್ದರೆ ಮಾತ್ರ ಒಲಿಯುತ್ತದೆ, ಶೈಕ್ಷಣಿಕ ಪ್ರಗತಿಗೆ, ಪ್ರೋತ್ಸಾಹ ಅಗತ್ಯ ಅಂತಹ ಕೆಲಸ ನಿತ್ಯ ನಿರಂತರವಾಗಿ ನಡೆದು ಬಂದಿರುವುದು, ಪ್ರಗತಿಯ ಸಂಕೇತವಾಗಿದೆ ಎಂದರು.
ನಿವೃತ್ತ ಲಿಂಗವಂತ ಸಮಾಜ ನೌಕರರ ಸಂಘವು, ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಚಂದನಾ ಆರ್. ಎಲ್. ಸರಕಾರಿ ಪ್ರೌಢಶಾಲೆ ಹಿರೇಬಿದರಿ, ಪ್ರಥಮ, ಲಿಂಗರಾಜ ಬಿದರಿ ಲಯನ್ಸ್ ಪ್ರೌಢಶಾಲೆ ದ್ವಿತೀಯ, ಹಾಗೂ ಗಾಯಿತ್ರಿ ಕುಪ್ಪೇಲೂರು ಗಾಯತ್ರಿ ಕುಪ್ಪೇಲೂರ ಬಿ. ಏ.ಜೆ.ಎಸ್. ಎಸ್ ಪ್ರೌಢಶಾಲೆ ನಿಟ್ಟೂರ. ತೃತಿಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಗುರು ರಕ್ಷಣೆ ನೀಡಿ, ಬಹುಮಾನ ವಿತರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ, ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಬಿದ್ದಾಡೆಪ್ಪ ಚಕ್ರಸಾಲಿ, ಕಾರ್ಯದರ್ಶಿ, ಅಮೃತ ಗೌಡ ಹಿರೇಮಠ, ಶಿಕ್ಷಕ ಜಗದೀಶ ಮಳಿಮಠ, ಎಸ್. ಎನ್. ಜಂಗಳೇರ, ಎಸ್ ಎಮ್. ಸಂಕಮ್ಮನವರ, ವಿಶ್ವನಾಥಯ್ಯ ಗುರುಪಾದ್ದೇವರಮಠ, ಶಿವಯೋಗಿ ಹಿರೇಮಠ ವಿ. ಎಂ.ಕರ್ಜಗಿ, ಚನ್ನವೀರ ಗೌಡ ಪಾಟೀಲ್, ಜ್ಯೋತಿ ಬಣ್ಣದ, ಸೋಮನಾಥ ಹಿರೇಮಠ, ಮೃತುಂಜಯ ಪಾಟೀಲ್, ರಾಚಯ್ಯ ಶಾಸ್ತ್ರಿಗಳು, ಗೌರಿಶಂಕರ್ ಸ್ವಾಮಿ ನೆಗಳೂರುಮಠ, ಎಂ. ಕೆ. ಹಾಲ ಸಿದ್ದಯ್ಯ ಶಾಸ್ತ್ರಿ, ಗಾಯಿತ್ರಿಮ ಕುರುವತ್ತಿ ಭಾಗ್ಯ ಗುಂಡಗಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮಠದ ಕಲಾವಿದರಾದ, ಗುಡ್ಡಪ್ಪ ಹಿಂದಲಮನಿ, ಗಣಪ್ಪ ಕುಲಕರ್ಣಿ ಅನುಸೂಯ ರಾಠೋಡ, ಯುವರಾಜ್ ಹಿರೇಮಠ, ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ,ವಿ. ವೀ.ಹರಪನಹಳ್ಳಿ ಸ್ವಾಗತಿಸಿದರು. ಕಸ್ತೂರೆಮ್ಮ ಪಾಟೀಲ, ನಿರೂಪಿಸಿದರು. ತಾಲೂಕಾ ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ. ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ ಸಹಯೋಗ ನೀಡಿದ್ದರು.