ಜಮಖಂಡಿ

ಧಾರಾಕಾರವಾಗಿ ಸುರಿದ ಮಳೆಯ ನೀರಿನಿಂದ ಜನಜೀವನ ಅಸ್ತವ್ಯಸ್ತ

ಧಾರಾಕಾರವಾಗಿ ಸುರಿದ ಮಳೆಯ ನೀರಿನಿಂದ ಜನಜೀವನ ಅಸ್ತವ್ಯಸ್ತ

ಜಮಖಂಡಿ, 24 : ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯ ನೀರಿನಿಂದ ಜನಜೀವನ ಅಸ್ತವ್ಯಸ್ತತವಾಗಿದೆ. ಶಾಲಾ ಕಾಲೇಜುಗಳಿಗೆ ಹೋಗಬೇಕಾದ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದು. ಮುಧೋಳ ಬೈಪಾಸ್ ರಸ್ತೆಯು ಸಂಪೂರ್ಣವಾಗಿ ಜಲಾವೃತ್ತಗೊಂಡ ಪರಿಣಾಮ ಅಲ್ಲಿನ ನಿವಾಸಿಗಳ ಮನೆಯೊಳಗೆ ಮಳೆಯ ನೀರು ನುಗ್ಗಿದ ಘಟನೆ ಸಂಭವಿಸಿದೆ. 

ಮುಧೋಳ ಬೈಪಾಸ್ ರಸ್ತೆಯು ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತ ಪರಿಸ್ಥಿತಿಯಾಗಿದ್ದು. ರಸ್ತೆಯ ಪಕ್ಕದಲ್ಲಿ ಕನ್ನಡ ಮತ್ತು ಉರ್ದು ಶಾಲೆ ಇದ್ದು. ಶಾಲಾ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಪ್ರಮಾಣ ನೀರು ರಸ್ತೆಯ ಮೇಲೆ ನಿಂತ ಪರಿಣಾಮ ಅಲ್ಲಿನ ನಿವಾಸಿಗಳು ಪರದಾಡುವಂತ ಪರಿಸ್ಥಿತಿಯಾಗಿದೆ. ಭಾರಿ ವಾಹನಗಳು ಅದೇ ನೀರಿನಲ್ಲಿ ಸಂಚರಿಸುತ್ತಿವೆ. ಮತ್ತು ಕಾರು, ಶಾಲಾ ವಾಹನಗಳು, ಅಟೋಗಳು, ಟಾಟಾಗೂಡ್ಸ್‌ಗಳ ವಾಹನಗಳು ರಸ್ತೆ ಸಂಪೂರ್ಣವಾಗಿ ಜಲಾವೃತ್ತಗೊಂಡಿದರಿಂದ ಪರದಾಡುವ ಪರಿಸ್ಥಿತಿ ಉಂಟಾಗಿದೆ. 

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಮೂಧೋಳ ಬೈಪಾಸ್ ರಸ್ತೆಯಲ್ಲಿ ಮಳೆಯ ನೀರಿನಿಂದ ಜಲಾವೃತ್ತವಾಗಿದ್ದು. ಹಾಗೂ ಭಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಜಂಬುಕೇಶ್ವರ ದೇವಸ್ಥಾನ ಅಕ್ಕ,ಪಕ್ಕದಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಅನಾನೂಕಲತೆಯಾಗಿದೆ. ಅದಕ್ಕಾಗಿ ಶಾಶ್ವತವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಾದ ಉಪವಿಭಾಗಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ, ನಗರಸಭೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಆದಷ್ಟು ಬೇಗನೆ ಕೆಲಸವನ್ನು ಪ್ರಾರಂಭ ಮಾಡಬೇಕು. ಅಲ್ಲಿನ ನಿವಾಸಿಗಳಿಗೆ ಯಾವುದೆ ತರಹದ ತೊಂದರೆಯಾಗದಂತೆ ಹಾಗೂ ಮಳೆಯ ನೀರು ಮನೆಯೊಳ್ಳಗೆ ನುಗ್ಗದ ಹಾಗೆ ಬೇಗನೆ ಕಾಮಗಾರಿಯನ್ನು ಪ್ರಾರಂಭ ಮಾಡಿ. ಅಲ್ಲಿನ ತೊಂದರೆಯನ್ನು ಬಗ್ಗೆ ಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತದೆ ಎಂದರು. 

ಕೂಗಾಟ ಚಿರಾಟ ; ಮಳೆಯ ನೀರು ಮನೆಯೊಳಗೆ ನುಗ್ಗಿದ್ದು. ಅಲ್ಲಿನ ನಿವಾಸಿಗಳ ಧವಸ,ಧಾನ್ಯಗಳು ಮತ್ತು ದಿನನಿತ್ಯದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ ಪರಿಣಾಮ ಹಿಡಿಶಾಪವನ್ನು ಹಾಕುವದು ಸಾಮಾನ್ಯವಾಗಿತ್ತು.  

ರಾಜು ಮೊಸಳಿ ಅವರು ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ದ ಕೀಡಿಕಾರಿದರು. ಸಾಕಷ್ಟು ಭಾರಿ ಮನವಿ ಮಾಡಿಕೊಂಡರು ಯಾವುದೆ ಪ್ರಯೋಜವಾಗಿಲ್ಲ. ಇತ್ತ ಕಡೆ ಶಾಸಕ ಜಗದೀಶ ಗುಡಗುಂಟಿ ಅವರು ನೋಡುವುದೆ ಇಲ್ಲ. ಶಾಲಾಮಕ್ಕಳು ಶಾಲೆಗ ಹೋಗಬೇಕಾದರೆ ರಸ್ತೆಯಲ್ಲಿ ಮಳೆ ನೀರು ನಿಂತು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ  ವಿರುದ್ದ ಕೂಗಾಟ ಚಿರಾಟವನ್ನು ಮಾಡಿದರು. ಅಷ್ಟರಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಸಮಾಧಾನ ಪಡಿಸಿದರು. 

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಬಸು ಹರಕಂಗಿ, ರೋಹಿತ ಸೂರ್ಯವಂಶಿ ಸೇರಿದಂತೆ ಉಪವಿಭಾಗಾಧಿಕಾರಿ, ಲೋಕೋಪಯೋಗಿ ಅಧಿಕಾರಿ, ನಗರಸಭೆಯ ಅಧಿಕಾರಿಗಳು ಇದ್ದರು, 


ಸುದ್ದಿ ಓದಿ