ಧಾರವಾಡ - ಹುಬ್ಬಳ್ಳಿ

ಗ್ರಂಥಾಲಯಗಳು ದೇವಾಲಯಗಳಿದ್ದಂತೆ: ಡಾ. ಅಜಿತ ಪ್ರಸಾದ

ಗ್ರಂಥಾಲಯಗಳು ದೇವಾಲಯಗಳಿದ್ದಂತೆ: ಡಾ. ಅಜಿತ ಪ್ರಸಾದ

ಧಾರವಾಡ,13: ಗ್ರಂಥಾಲಯಗಳು ದೇವಾಲಯಗಳಿದ್ದಂತೆ, ದೇವಸ್ಥಾನವು ಹೇಗೆ ಪ್ರಶಾಂತವಾಗಿದ್ದು, ಮನಸ್ಸಿಗೆ ನೆಮ್ಮದಿ ಹಾಗೂ ಸ್ಫೂರ್ತಿಯನ್ನು ಕೊಡುತ್ತವೆಯೋ ಹಾಗೇ ಗ್ರಂಥಾಲಯಗಳು ಕೂಡ ಮನಸ್ಸಿಗೆ ನೆಮ್ಮದಿ ಹಾಗೂ ಮೆದುಳಿಗೆ ಅಪಾರವಾದ ಜ್ಞಾನವನ್ನು ನೀಡಿ ಉತ್ತಮ ಜೀವನಕ್ಕೆ ಸ್ಫೂರ್ತಿಯನ್ನು ನೀಡುತ್ತವೆ. ಗ್ರಂಥಾಲಯಗಳು ಸ್ವಾಸ್ಥ್ಯ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯಗಳಿಗೆ ಅದರದ್ದೇ ಆದ ರೂಪುರೇಷೆಯನ್ನು ನೀಡಿ ಅವುಗಳ ಅಭಿವೃದ್ದಿಗೆ ಕಾರಣರಾದವರು ಡಾ. ಎಸ್ ಆರ್‌. ರಂಗನಾಥನ್ ರವರು ಎಂದು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಜೆ.ಎಸ್‌.ಎಸ್ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.  

ಡಾ. ಎಸ್‌.ಆರ್ ರಂಗನಾಥನ್‌ರವರು ಭಾರತೀಯ ಗಣಿತಜ್ಞ ಹಾಗೂ ಸುಪ್ರಸಿದ್ಧ ಗ್ರಂಥಪಾಲಕರು ಇವರು ಗ್ರಂಥಾಲಯದಲ್ಲಿ ಪಂಚಸೂತ್ರ ಮತ್ತು ಕೋಲೊನ್ ವರ್ಗಿಕರಣವನ್ನು ಪರಿಚಯಿಸಿದವರು. ಆದ್ದರಿಂದ ಇವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದವರು. ಗಣಿತ ಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಮದ್ರಾಸ ವಿಶ್ವ ವಿದ್ಯಾಲಯದಲ್ಲಿ ಗಣಿತ ಎಂ. ಪದವಿ ಪಡೆದಿದ್ದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಕೊಯಿಮತ್ತೂರಿನ ಸರಕಾರಿ ಕಾಲೇಜು, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1924 ರಲ್ಲಿ ಮದ್ರಾಸು ವಿಶ್ವ ವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ನೇಮಕವಾದ ನಂತರ ಅವರ ವೃತ್ತಿ ಜಿವನ ಹೊಸ ತಿರುವನ್ನು ಪಡೆದಕೊಂಡಿತು.  

ಇವರಿಗೆ ಗ್ರಂಥಗಳ ಜೊಡಣೆ ಮತ್ತು ವಿತರಣೆ ಬಗ್ಗೆ ಇರುವ ಅಪಾರ ಆಸಕ್ತಿಯನ್ನು ಗಮನಿಸಿ ಮದ್ರಾಸು ವಿಶ್ವವಿದ್ಯಾಲಯ ಇವರನ್ನು ಇಂಗ್ಲೇಡಿನ್ ಲಂಡನ್ ಸ್ಕೂಲ್ ಆಫ್ ಲೈಬ್ರರಿಯನ್ ಎಂಬ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಟ್ಟಿತು. ಅಲ್ಲಿ ಬೆರಿ​‍್ವಕ್‌ಸೇಯರ್ಸ ಅವರ ಆಪ್ತ ಶಿಷ್ಯರಾಗಿ ಗ್ರಂಥಾಲಯ ವಿಜ್ಞಾನದ ಅಧ್ಯಯನ ಮಾಡಿದರು. ಇದರಿಂದ ಅವರಿಗೆ ಗ್ರಂಥಾಲಯ ವಿಜ್ಞಾನದ ಕಲ್ಪನೆ ದೊರೆಯಿತು. ಗ್ರಂಥಾಲಯ ವಿಜ್ಞಾನದ ಆನರ್ಸ ಡಿಪ್ಲೋಮಾ ಪಡೆದುಕೊಂಡ ಇವರು ಮದ್ರಾಸಿಗೆ ಹಿಂದಿರುಗಿ ಮದ್ರಾಸ್ ವಿಶ್ವವಿದ್ಯಾಲಯವನ್ನೆ ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸಿದರು. ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ನ್ಯಾಶನಲ್ ಲೈಬ್ರರಿ ಕ್ಲಾಸಿಫಿಕೇಶನ್ ಸೇರಿ ಹತ್ತು ಹಲವು ಕೃತಿಗಳನ್ನು ರಚಿಸಿ ಗ್ರಂಥಾಲಯ ವಿಜ್ಞಾನಕ್ಕೆ ಮೆರಗು ತಂದು ಕೊಟ್ಟರು. ಇವರು ತಮ್ಮ ಜೀವನದ ಕೊನೆಯ ದಿನಗಳ ವರೆಗೂ ಕೃತಗಳನ್ನು ರಚಿಸುವಲ್ಲಿ ತಲ್ಲಿನರಾಗಿದರು. ಇವರ ಕೃತಿಗಳು ಭಾರತವಷ್ಟೆ ಅಲ್ಲದೇ ನೇಪಾಳ ಶ್ರೀಲಂಕ, ಯು.ಕೆ, ಯು.ಎಸ್‌.ಎ ದೇಶಗಳಿಗೂ ಪೇರಣೆಯಾಗಿವೆ. ಇವರ ಈ ಸುಧೀರ್ಘ ಸೇವೆ ಇವರಿಗೆ ಪದಶ್ರೀ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಮೇರಿಕ ದೇಶ ಇವರಿಗೆ ಮಾರ್ಗರೇಟ್ ಮಾನ್ ಪಾರಿತೋಷ ನೀಡಿದೆ. ಅವರ ಈ ಸಾಧನೆ ಹಾಗೂ ಸವಿ ನೆನಪಿಗಾಗಿಯೇ ಅಗಷ್ಟ 12 ರಂದು ಗ್ರಂಥಪಾಲಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಜೆ.ಎಸ್‌.ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ನಾಗಚಂದ್ರ, ಮಹಾವೀರ ಉಪಾದ್ಯೆ, ಶಾಂತಿನಾಥ ರೋಖಡೆ, ವಿಜಯಕುಮಾರ ದೇಶಬಾಗ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ