ಕಾಗವಾಡ

ಗ್ರಂಥಪಾಲಕರು ತಮ್ಮ ಜ್ಞಾನವನ್ನು ಹಂಚುವವರಾಗಿದ್ದಾರೆ: ಡಾ. ಎಸ್‌.ಪಿ. ತಳವಾರ

ಗ್ರಂಥಪಾಲಕರು ತಮ್ಮ ಜ್ಞಾನವನ್ನು ಹಂಚುವವರಾಗಿದ್ದಾರೆ: ಡಾ. ಎಸ್‌.ಪಿ. ತಳವಾರ

ಕಾಗವಾಡ,22:  ಇಂದು ನಾವು ಜ್ಞಾನಕೋಶದ ನಾವಿಕರಾಗಿರುವ ನಮ್ಮ ಗ್ರಂಥಪಾಲಕರಿಗೆ ಗೌರವ ಸಲ್ಲಿಸಲು ಇಲ್ಲಿ ಸೇರಿದ್ದೇವೆ. ಗ್ರಂಥಪಾಲಕರ ದಿನಾಚರಣೆಯು ನಮ್ಮ ಸಮಾಜದಲ್ಲಿ ಅವರ ಅಮೂಲ್ಯವಾದ ಪಾತ್ರವನ್ನು ಸ್ಮರಿಸುವಸು ದಿನ. ಗ್ರಂಥಪಾಲಕರು ತಮ್ಮ ಕೆಲಸವನ್ನು ಮಾತ್ರ ಕರ್ತವ್ಯವಾಗಿ ಮಾಡುವವರಲ್ಲ. ಅವರು ಜ್ಞಾನವನ್ನು ಹಂಚುವವರಾಗಿದ್ದಾರೆ. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ, ಪುಸ್ತಕಗಳ ಮಹತ್ವವನ್ನೂ, ಜ್ಞಾನ ಸಂಗ್ರಹವನ್ನೂ ಕಾಪಾಡುವುದು ಗ್ರಂಥಪಾಲಕರ ಅವಿರತ ಪರಿಶ್ರಮದ ಫಲ ಎಂದು ಉಪಪ್ರಾಚಾರ್ಯರಾದ ಡಾ. ಎಸ್‌.ಪಿ. ತಳವಾರ ಹೇಳಿದರು.  

ಅವರು ಗುರುವಾರ ದಿ. 22 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಗ್ರಂಥಾಪಾಲಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಗ್ರಂಥಾಲಯ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎ.ಎಂ. ಜಕ್ಕಣ್ಣವರ ಮಾತನಾಡಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಪ್ರೀತಿಯ ನಮ್ಮ ಗ್ರಂಥಪಾಲಕರು ಪುಸ್ತಕಗಳೊಂದಿಗೆ ನಮಗೆ ಹೊಸದನ್ನು ಕಲಿಸಲು ಪ್ರೇರೇಪಿಸುತ್ತಾರೆ. ಈ ಗ್ರಂಥಪಾಲಕರ ದಿನ, ಅವರ ಸೇವೆಯನ್ನು ಮೆಚ್ಚಿ, ನಮ್ಮ ಜ್ಞಾನವನ್ನು ವಿಸ್ತರಿಸಲು ಸಾಧ್ಯವಾದಷ್ಟು ಓದೋಣ, ಜ್ಞಾನವನ್ನು ಬೆಳೆಸೋಣ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ಎಸ್‌.ಆರ್‌. ರಂಗನಾಥನ್ ಅವರ ಭಾವಚಿತ್ರದ ಪೂಜೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಪ್ರೊ.ಬಿ.ಡಿ. ಧಾಮನ್ನವರ್, ಪ್ರೊ. ಜೆ.ಕೆ. ಪಾಟೀಲ, ಪ್ರೊ. ಆರ್‌.ಎಸ್‌. ನಾಗರಡ್ಡಿ, ಗ್ರಂಥಾಲಯ ಸಿಬ್ಬಂದಿ ವಿ.ಎಂ. ಪೋರ್ತುಗಲ್ಲೆ ಹಾಗೂ ಇನ್ನೂಳಿದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಆರ್‌.ಎಸ್‌. ಕಲ್ಲೋಳಿಕರ ರ್ಸ್ವಾಗತಿಸಿದರು ಗ್ರಂಥಾಪಾಲಕರಾದ ಪಿ.ಎಂ. ದೊಡ್ಡಮನಿ ವಂದಿಸಿದರು. 


ಸುದ್ದಿ ಓದಿ