ಧಾರವಾಡ - ಹುಬ್ಬಳ್ಳಿ

ಗ್ರಂಥಪಾಲಕರ ದಿನಾಚರಣೆ

ಗ್ರಂಥಪಾಲಕರ ದಿನಾಚರಣೆ

ಹುಬ್ಬಳ್ಳಿ,13:  ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಬಸವ ಪರಿಸರ ಸಂರಕ್ಷಣಾ ಸಮಿತಿ ಹಾಗೂ ಶಿವರುದ್ರ ಟ್ರಸ್ಟ ವತಿಯಿಂದ ಕೆ.ಎಲ್‌.ಇ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ  ಅವರನ್ನು ಸನ್ಮಾನಿಸಲಾಯಿತು.  

ಕೆ.ಎಲ್‌.ಇ ಸಂಸ್ಥೆಯ ಸಿ.ಆಯ್‌.ಮುನವಳ್ಳಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಪ್ರೊ ವೀರೇಶ ಬಿ. ಅಂಗಡಿ, ಶಿವರುದ್ರ ಟ್ರಸ್ಟನ ನಿರ್ದೇಶಕ ಡಾ. ಬಸವಕುಮಾರ ತಲವಾಯಿ,   ಶ್ರೀಶೈಲ್ ತುಂಗಳದ,  ಸಂತೋಷ ಕಂಠಿ, ಬಸವರಾಜ ತಲವಾಯಿ, ಮುಂತಾದವರು ಇದ್ದರು. ಭಾಗವಹಿಸಿದ ಗಣ್ಯರು ಮಾತನಾಡಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾಡುವ ಕಾರ್ಯಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. 


ಸುದ್ದಿ ಓದಿ