ಇಂಡಿ

ಅಬ್ದುಲ್ ಕಲಾಂರನ್ನು ಯುವಕರು ಆದರ್ಶವಾಗಿಸಿಕೊಳ್ಳಲಿ: ದಯಾಸಾಗರ

ಅಬ್ದುಲ್ ಕಲಾಂರನ್ನು ಯುವಕರು ಆದರ್ಶವಾಗಿಸಿಕೊಳ್ಳಲಿ: ದಯಾಸಾಗರ

ಲೋಕದರ್ಶನ ವರದಿ 

ಇಂಡಿ 17: ದೇಶದ ಅಭಿವೃದ್ಧಿಯ ಚಿಂತನೆ, ದೂರದೃಷ್ಠಿಯೊಂದಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ‌್ಯಗಳ ಬಗ್ಗೆ ಮೆಚ್ಚುಗೆ ಪಡುವ ಜತೆಗೆ ಅವರ ನೀತಿ ನಡುವಳಿಕೆಗಳನ್ನು ನಾವು ಅನುಷ್ಠಾನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ತಕ್ಕಂತೆ ಕೆಲಸ ಮಾಡಿ ಪಕ್ಷ, ಸಂಘಟನೆ ಮತ್ತಷ್ಟು ಬಲಪಡಿಸೋಣ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.  

ರವಿವಾರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು. ಎಪಿಜೆ ಅಬ್ದುಲ್ ಕಲಾಮರು ದೇಶಪ್ರೇಮ, ದೂರದೃಷ್ಠಿತ್ವ, ಚಿಂತನೆ, ನಡುವಳಿಕೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿ ಶ್ಲಾಘನೆ ವ್ಯಕ್ತವಾಗಿದ್ದು ಅವರ ಆದರ್ಶ ಯುವಕರು ಪಾಲಿಸಬೇಕಾಗಿದೆ ಎಂದರು. 

ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಬಾಳು ಮುಳಜಿ, ಸೋಮಶೇಖರ ದೇವರ, ಯಂಟಮನ ಮಾತನಾಡಿದರು.  

ಕೆ.ಎಸ್‌.ಪಾಟೀಲ, ಶರಣಗೌಡ ಬಂಡಿ, ಆರ್‌.ಡಿ.ಪಾಟೀಲ ಹಿರೇಬೇವನೂರ, ಶ್ರೀಶೈಲ ಮದರಿ ಮಿರಗಿ, ಮಲ್ಲನಗೌಡ ಬಿರಾದಾರ ವೇದಿಕೆ ಮೇಲಿದ್ದರು. 


ಸುದ್ದಿ ಓದಿ