ಬೈಲಹೊಂಗಲ

ವಿದ್ಯಾರ್ಥಿಗಳು ಉನ್ನತ ಸಾಧನೆಗೆ ಸ್ಪಷ್ಟ ಗುರಿ ಹೊಂದಲಿ

ವಿದ್ಯಾರ್ಥಿಗಳು ಉನ್ನತ ಸಾಧನೆಗೆ ಸ್ಪಷ್ಟ ಗುರಿ ಹೊಂದಲಿ

ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಶರತಕುಮಾರ ಬಚ್ಚೇಗೌಡ ಕರೆ 

ಬೈಲಹೊಂಗಲ 13: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸ್ಪಷ್ಟ ಗುರಿ ಇಟ್ಟುಕೊಂಡು, ಆ ಗುರಿ ತಲುಪಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದು ಹೊಸಕೋಟೆ ಶಾಸಕ ಶರತಕುಮಾರ ಬಚ್ಚೇಗೌಡ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಲ್ಲಿ ಅಭಿಪ್ರೇರಣೆ ಮೂಡಿಸುವ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು ಮತ್ತು ಯಾವುದೇ ಸವಾಲುಗಳಿಗೆ ಅಳುಕದೆ ಅದನ್ನು ಸಾಧಿಸಲು ಪ್ರಯತ್ನಿಸಬೇಕು.  ಆಧುನಿಕ ಭರಾಠೆಯಲ್ಲಿ ನಮ್ಮತನ ಮರೆಯಬಾರದು. ಅತಿಯಾದ ಫೋನ್ ಬಳಕೆ ನಿಲ್ಲಿಸಬೇಕು. ಉತ್ತಮ ಸಂಸ್ಕೃತಿಯನ್ನು ಅನುಸರಿಸಲು ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು. ತಂದೆ, ತಾಯಿ, ಗುರುಗಳನ್ನು ಗೌರವಿಸಬೇಕು.  ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಉತ್ತಮ ಪ್ರತಿಫಲ ದೊರಕೇ ದೊರೆಯುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗದೇ ಮುಂದೆ ಸಾಗಿದ್ದಲ್ಲಿ ಯಶಸ್ಸು ಸಿಗಲಿದೆ. ಜೀವನದಲ್ಲಿ ಉನ್ನತ ಸಾಧನೆಗಳ ಕನಸು ಇಟ್ಟುಕೊಳ್ಳಿ ಎಂದರು.  

ಕೃಷಿ ಇಲಾಖೆ ಆಯುಕ್ತ ವೈ.ಎಸ್‌.ಪಾಟೀಲ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಉತ್ತಮ  ಸಂಸ್ಕಾರಗಳನ್ನು  ಆಳವಡಿಸಿಕೊಳ್ಳಬೇಕೆಂದರು. 

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.  

ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಅಶೋಕ ವಾಲಿ,  ಪ್ರಾಚಾರ್ಯ ಬಸವರಾಜ ಕುರಿ, ಉಪನ್ಯಾಸಕ ಬಸವರಾಜ ಪುರಾಣಿಕಮಠ ಹಾಗೂ ಉಪನ್ಯಾಸಕ ಸಿಬ್ಬಂದಿ,  ವಿದ್ಯಾರ್ಥಿಗಳಿದ್ದರು 

ಶಾಸಕರೊಂದಿಗೆ ವಿದ್ಯಾರ್ಥಿಗಳ ಸಂವಾದ:   ರಾಜಕಾರಣಕ್ಕೆ ಬರಲು ಕಾರಣವೇನು,  ನೆನಪಿನ  ಶಕ್ತಿಗೆ  ಯಾವ ತಂತ್ರ ಅನುಸರಿಬೇಕು. ಉತ್ತಮ ಸ್ಕೋರ ಮಾಡಲು ಏನು ಮಾಡಬೇಕು ಎಂದು ವಿದ್ಯಾರ್ಥಿಗಳು ಶಾಸಕ ಶರತಕುಮಾರ ಅವರಿಗೆ  ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. 


ಸುದ್ದಿ ಓದಿ