ಗೋಕಾಕ್

ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಲಿ: ಡಾ. ನಾವಲಗಿ

ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಲಿ: ಡಾ. ನಾವಲಗಿ

ಲೋಕದರ್ಶನ ವರದಿ 

ಗೋಕಾಕ 24: ವಿದ್ಯಾರ್ಥಿಗಳು ಬರೀ ಭತ್ತ ತುಂಬುವ ಗೋಣಿ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕೆಂದು ಜಾನಪದ ತಜ್ಞ ಡಾ. ಸಿ.ಕೆ.ನಾವಲಗಿ ಅಭಿಪ್ರಾಯ ಪಟ್ಟರು.  

ಅವರು ಅರಭಾವಿ ಮಠದ ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಬಿ.ಎ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಚಾರಿತ್ರ್ಯವೇ ಪದವಿ, ಜೀವನವೇ ಪರೀಕ್ಷೆ, ವಿಶ್ವವೇ ವಿಶ್ವವಿದ್ಯಾಲಯ ಎಂಬಂಥ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಪದವಿಗಳನ್ನು ಸಂಪಾದಿಸಿ, ಉದಾತ್ತ ಬದುಕನ್ನು ಬಾಳಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.  

ಟ್ರಸ್ಟ ಸಲಹಾ ಸಮಿತಿ ಸದಸ್ಯ ಕಾಡಯ್ಯ ದಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮರಡಿಮಠ ಪದವಿ ಕಾಲೇಜಿನ ಪ್ರಾಚಾರ್ಯೆ ಜೆ.ವಿ.ಕಡಗದ, ಹೈಸ್ಕೂಲ ಮುಖ್ಯಸ್ಥೆ ಆರ್‌. ಡಿ. ಮುರಘೋಡ, ಎಸ್‌. ಜಿ. ಅಂಗಡಿ, ವಿನುತಾ ನಾವಲಗಿ, ಮಹಾಂತೇಶ ಗುಗ್ಗರಿ, ಶೀರೀನೊ ಮೋಮಿನ್, ಆರ್‌.ಎಂ. ಕಳಸದ, ಪ್ರಾಚಾರ್ಯರಾದ ಪ್ರೊ.ಎಂ. ಎನ್‌. ಬಂಬಲಾಡಿ, ಪ್ರೊ. ಎಸ್ .ಡಿ. ವಾಲಿಕರ್, ಆನಂದ ಸೋರಗಾವಿ ಮೊದಲಾದವರು ವೇದಿಕೆಯಲ್ಲಿದ್ದರು. ಹಾಡು, ನೃತ್ಯ, ಬಹುಮಾನ ವಿತರಣೆ ಕಾರ್ಯಕ್ರಮ ಕೂಡ ಜರುಗಿತು. ಹಾಲವ್ವ ಅಂತರಗಟ್ಟಿ ನಿರೂಪಿಸಿದರು. ವಿದ್ಯಾ ನಿಂಬೆಣ್ಣನವರ ವಂದಿಸಿದರು. 


ಸುದ್ದಿ ಓದಿ