ಬೈಲಹೊಂಗಲ

ರೈತರು ಹೊಲ-ಗದ್ದೆಗಳಿಗೆ ಮಿತವಾಗಿ ನೀರು ಬಳಸಲಿ: ಡಾ. ಪಾಟೀಲ

ರೈತರು ಹೊಲ-ಗದ್ದೆಗಳಿಗೆ ಮಿತವಾಗಿ ನೀರು ಬಳಸಲಿ: ಡಾ. ಪಾಟೀಲ

ಲೋಕದರ್ಶನ ವರದಿ 


ಬೈಲಹೊಂಗಲ 02:  ಭೂಮಿಗಳು ಜವಳು ಮತ್ತು ಸವಳಾಗುವುದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ರೈತರು ತಮ್ಮ ಹೊಲ-ಗದ್ದೆಗಳಿಗೆ ಮಿತವಾಗಿ ನೀರು ಬಳಸಬೇಕೆಂದು ಬೆಳಗಾವಿ ಕಾಡಾ ಅಧ್ಯಕ್ಷ  ಡಾ. ವಿಶ್ವನಾಥ ಪಾಟೀಲ ಹೇಳಿದರು. 

     ಅವರು ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಕಾಡಾ ಪ್ರಾಧಿಕಾರದಿಂದ ಸವುಳು ಜವುಳು ನಿರ್ಮೂಲನೆ ಯೋಜನೆಯಡಿಯಲ್ಲಿ  ಅಂದಾಜು ರೂ. 25 ಲಕ್ಷ ರೂ ಗಳಲ್ಲಿ  ಹೊಲಬಸಿಗಾಲುವೆ ನಿರ್ಮಾಣ ಬ್ಲಾಕ್ -1 ಲಿಂಗದಹಳ್ಳಿ ಮತ್ತು  ಏಣಗಿ ಹಿಟ್ಟಣಗಿ  ಏತ ನೀರಾವರಿ ಯೋಜನೆಯಡಿಯಲ್ಲಿ ಸುತಗಟ್ಟಿ ಗ್ರಾಮದ ಹತ್ತಿರ ಬಾವಿ ಹಳ್ಳ ಅಂದಾಜು ಮೊತ್ತ 70 ಲಕ್ಷ ರೂ ಗಳಲ್ಲಿ  ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,  ಸರ್ಕಾರ ರೈತರ ಅನುಕೂಲಕ್ಕಾಗಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿವೆಯಾದರೂ ರೈತರು ತಮ್ಮ ಜಮೀನುಗಳಿಗೆ ನೀರನ್ನು ಮಿತವಾಗಿ ಬಳಸದ ಕಾರಣ ಭೂಮಿ ಸವಳು ಮತ್ತು ಜವಳಾಗುತ್ತಿವೆ,  ಮಿತವಯವಾಗಿ ಬಳಕೆ ಮಾಡುವುದರಿಂದ ಜವಳ ಮತ್ತು ಸವಳಾಗುವುದನ್ನು ತಪ್ಪಿಸಬಹುದು ಎಂದರಲ್ಲದೇ ಅತಿಯಾದ ನೀರಿನ ಬಳಕೆಯಿಂದ ಭೂಮಿ ಕೆಡಬಾರದು ಎಂಬುದು ಸರಕಾರದ ಉದ್ದೇಶವಾಗಿದೆ. ಈ ಕಾಮಗಾರಿಯಿಂದ  ಸವುಳು ಜವುಳು ಬಾಧಿತ ರೈತರು ಜಮೀನನ್ನು ಪುನಶ್ಚೇತನಗೊಳ್ಳುವುದು ಎಂದರು. 

     ಕಾಡಾ ಪ್ರಾಧಿಕಾರದ ಅಧಿಕಾರಿಗಳು, ಲಿಂಗದಹಳ್ಳಿ, ವಕ್ಕುಂದ, ಅರವಳ್ಳಿ, ಸುತಗಟ್ಟಿ, ಏಣಗಿ, ಹಿಟ್ಟಣಗಿ, ಅಸುಂಡಿ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ