ಜಿಲ್ಲಾ ಆರೋಗ್ಯ ಇಲಾಖೆ ಮೈ ಚಳಿಬಿಟ್ಟು ‘ಡೆಂಗ್ಯೂ’ವಿನ ಬಗ್ಗೆ ಜಾಗ್ರತಿ ಮೂಡಿಸಲಿ
ರಾಣೇಬೆನ್ನೂರು 10; ‘ಕೊರೋನಾ ಕಾಯಿಲೆಗಿಂತ ಭೀಕರವಾಗಿರುವ ಸದ್ದಿಲ್ಲದೆ ಸಾವಿನದವಡೆಗೆ ನೂಕುವ ‘ಡೆಂಗ್ಯೂ’ ಕಾಯಿಲೆಯ ಬಗ್ಗೆ ಜಿಲ್ಲೆಯ ಹಿರಿಯ ಆರೋಗಾಧಿಕಾರಿಗಳು ಜನರಲ್ಲಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಹಂತದಲ್ಲೇ ಯೋಗ್ಯ ಚಿಕಿತ್ಸೆ ನೀಡಿ ‘ಕಾಯಿಲೆ’ ಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವಿಂದ್ರಗೌಡ ಎಫ್. ಪಾಟೀಲ ಹೇಳಿದರು.
ಅವರು ಇಂದು ತಾಲೂಕಿನ ಮುಷ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ತಾಲೂಕಾ ಆರೋಗ್ಯ ಇಲಾಖೆ, ಎಸ್.ಡಿ.ಎಂ.ಸಿ. ಮುಷ್ಟೂರು ಇವಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈ ಶತಮಾನದಲ್ಲಿ ಜರುಗಿದ ಭೀಕರ ಕಾಯಿಲೆ ‘ಕೊರೋನ’ದ ಕಹಿ ಘಟನೆಗಳನ್ನು ಮೆಲುಕುಹಾಕಿದ ಅವರು ಅಂದಿನ ಪರಿಸ್ಥಿತಿಯನ್ನು ಜನ ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಮರೆತುಬಿಟ್ಟಿದ್ದಾರೆ.
ಆ ಭೀಕರ ಸಂದರ್ಭವನ್ನು ಆಗಾಗ ನೆನಪುಮಾಡಿಕೊಂಡು ಬರುವ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಹೊಸಕಿ ಹಾಕಬೇಕೆಂದರು. ಡೆಂಗ್ಯೂ ನಿಂಯಂತ್ರಣಕ್ಕೆ ಯುದ್ದೋಪಾದಿಯಲ್ಲಿ ಇಲಾಖೆ ಕಾರ್ಯನಿರ್ವಸಬೇಕೆಂದರು. ಆರೋಗ್ಯ ಇಲಾಖೆಯ ಮುದೇನೂರು ಉಪಕೇಂದ್ರದ ಆರೋಗ್ಯ ನೀರೀಕ್ಷಣಾಧಿಕಾರಿ ಡಾಽಽ ಕುಮಾರ ಡೆಂಗ್ಯೂ ಜ್ವರದ ಹರಡುವಿಕೆ ಮತ್ತು ಚಿಕಿತ್ಸೆ ಹಾಗೂ ನಿಯಂತ್ರಣದ ಬಗ್ಗೆ ಸಮಗ್ರವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಂದ್ರಣ್ಣ ಬೇಡರ, ಕರಬಸಪ್ಪ ಕೂಲೇರ, ಆರೋಗ್ಯ ಇಲಾಖೆಯ ಎಎನ್ಎಂ ಕುಽಽ ಅಶ್ವಿನಿ ಡೆಂಗಿ ಕಾಯಿಲೆಯ ಬಗ್ಗೆ ಮಾತನಾಡಿದರು. ವೇದಿಕೆಯ ಮೇಲೆ ರೈತ ಮುಖಂಡರಾದ ಗೀರೀಶ ಮಾಗನೂರು, ಕೃಷ್ಣಮೂರ್ತಿ ಲಮಾಣಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಫಯಾಜ್ ಅಹ್ಮದ್ ಹಲಗೇರಿ, ದಿಳ್ಳೆಪ್ಪ ಗಂಗಣ್ಣನವರ, ಮುಖ್ಯ ಶಿಕ್ಷಕ, ರಾಜಶೇಖರ ಉಪಸ್ಥಿತರಿದ್ದರು. ಟೋಲ್ ಪ್ಲಾಜಾ ಮ್ಯಾನೇಜರ್ ಹನುಮಂತಪ್ಪ ಯಲ್ಲಕ್ಕನವರ ಸೇರಿದಂತೆ ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಶಿಕ್ಷಕ, ಬಸವರಾಜ ಕಾಯಕದ ಕಾರ್ಯಕ್ರಮ ನೆರವೇರಿಸಿದರು. ಎಸ್.ಡಿ.ಎಂ. ಅಧ್ಯಕ್ಷ ಯಲ್ಲಪ್ಪ ಓಲೇಕಾರ ಅಧ್ಯಕ್ಷತೆ ವಹಿಸಿದ್ದರು.