ಅಥಣಿ

ವಿರೋಧಿಗಳು ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲಿ: ಶ್ರೀಮಂತ ಪಾಟೀಲ

ವಿರೋಧಿಗಳು ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲಿ: ಶ್ರೀಮಂತ ಪಾಟೀಲ

ಅಥಣಿ 06: ಕಾಗವಾಡ ಮತಕ್ಷೇತ್ರದ ಜುಗೂಳ ಗ್ರಾಮದ ಅಭಿವೃದ್ಧಿಗೆ ನನ್ನ ಅಧಿಕಾರವಧಿಯಲ್ಲಿ 18.84 ಕೋಟಿ ಅನುದಾನದಲ್ಲಿ ಜನಪರ,  ಅಭಿವೃದ್ಧಿ ಪರ ಯೋಜನೆಗಳನ್ನು ಇದೇ ಮೊದಲ ಬಾರಿಗೆ ಜಾರಿಗೊಳಿಸಿರುವೆ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದರು.  

    ಅವರು ಜಗೂಳ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ರಸ್ತೆ ಸುಧಾರಣೆಗೆ 11 ಕೋಟಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಗಾಗಿ 1 ಕೋಟಿ 20 ಲಕ್ಷ, ಸಮುದಾಯ ಭವನಗಳ ನಿರ್ಮಾಣಕ್ಕಾಗಿ 74 ಲಕ್ಷ, ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿ  5 ಕೋಟಿ 80 ಲಕ್ಚ  ಅನುದಾನದ ಜಲ ಜೀವನ್ ಮೀಶನ್  ಹಾಗೂ 10 ಲಕ್ಷ ವೆಚ್ಚದ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಿರುವೆ ಎಂದರು.  

    ಕೆಲ ವಿರೋಧಿಗಳು ನಾನು ಭಷ್ಟಾಚಾರ ಮಾಡುತ್ತಿದ್ದೇನೆ ಎಂದು ಆರೋಪಿಸಿರುವ ಇವರು ತಾಕತ್ತ ಇದ್ದರೆ ದೇವಸ್ಥಾನದ ಕಟ್ಟೆ ಏರಿ ಮಕ್ಕಳ ಮೇಲೆ ಪ್ರಮಾಣ ಮಾಡಿ ನಾನು ಒಂದು ಪೈಸೆ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಲಿ ಎಂದು ಸವಾಲೆಸೆದ ಅವರು ಚುನಾವಣೆ ಬಂದ ತಕ್ಷಣ ಜಾತಿ, ಜಾತಿ ಎಂದು ಕೂಗಲು ಪ್ರಾರಂಭಿಸುವ ವಿರೋಧಿಗಳು ನಾನು ಮಾಡಿದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳ ಕುರಿತಾಗಿ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.  

     ಕೃಷ್ಣಾ ನದಿಗೆ ಬೇಸಿಗೆ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯದಿಂದ ನಾಲ್ಕು ಟಿ.ಎಮ್‌.ಸಿ ನೀರು ಬಿಡುಗಡೆ ಮಾಡುವ ಎರಡೂ ರಾಜ್ಯಗಳ ಮಧ್ಯೆ ಒಪ್ಪಂದ ಮಾಡಿಸುವ ಗುರಿ ನನ್ನದಾಗಿದೆ ಇದೇ ರೀತಿ ಇನ್ನೂ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಗುರಿ ಕೂಡ ತಮ್ಮದಾಗಿದೆ ಎಂದ ಅವರು ಮೇ.10 ರಂದು ನನಗೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.  

ದುಂಡಪ್ಪಾ ಭೆಂಡವಾಡೆ ಮಾತನಾಡಿ, ಪ್ರಧಾನ ಮಂತ್ರಿ ಪದವಿಗೆ ಮುಕ್ತಿ ಹೇಳಿದ ನರೇಂದ್ರ ಮೋದಿಯವರು ಪ್ರಧಾನ ಸೇವಕರಾಗಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುವ ಮೂಲಕ ದೇಶವನ್ನು ವಿಶ್ವದಲ್ಲಿಯೇ ನಂಬರ ಒನ್ ಸ್ಥಾನ ಕಲ್ಪಿಸಿದ್ದಾರೆ. ಶ್ರೀಮಂತ ಪಾಟೀಲರು ಕಾಗವಾಡ ಕ್ಷೇತ್ರದಲ್ಲಿ ಅತೀ ಹೆಚ್ಚು ಜನಪರ, ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಇಡೀ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿರುವ ಇವರಿಗೆ ಮೇ.10 ರಂದು ತಮ್ನ ಮತ ನೀಡಿ ಎಂದು ಮನವಿ ಮಾಡಿದರು.  

     

   ಜುಗೂಳ ಗ್ರಾಮದ ಮುಸ್ಲಿಂ ಸನಾಜದ ಮುಖಂಡ ಅನ್ವರ ಜನಾಬ ಮಾತನಾಡಿ, ಯಾವುದೇ ಜಾತಿ, ಮತ, ಧರ್ಮದ ಭೇದ, ಭಾವ ಇಲ್ಲದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರು ಜಗೂಳ ಗ್ರಾಮದ ಮುಸ್ಲಿಂ ಸಮಾಜದ ಅನಕೂಲಕ್ಕಾಗಿ ಶಾದಿ ಮಹಲ್ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾಗವಾಡ ಮತಕ್ಷೇತ್ರದಲ್ಲಿ ದಾಖಲೆ ಮಟ್ಟದಲ್ಲಿ ಅಂಗನವಾಡಿಗಳನ್ನು ಪ್ರಾರಂಭಿಸಿದ್ದಾರೆ ಜೊತೆಗೆ ಶಿಕ್ಷಣ, ನೀರಾವರಿ, ಕುಡಿಯುವ ನೀರು ಸೇರಿದಂತೆ 3100 ಕ್ಕೂ ಹೆಚ್ಚು ಕೋಟಿ ಅನುದಾನದಲ್ಲಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಇಂತಹ ಜನಪರ ಅಭ್ಯರ್ಥಿಗೆ ನಾವೆಲ್ಲ ಮತ ನೀಡೋಣ ಎಂದರು.  

ಗ್ರಾಮದ ಯುವ ಮುಖಂಡ ಅರುಣ ಗಣೇಶವಾಡಿ,  ಶಿರಗುಪ್ಪಿ ಗ್ರಾಮದ ರಾಮಗೌಡ ಪಾಟೀಲ ಮಾತನಾಡಿದರು.  

ಕಾಗವಾಡ ಮಂಡಲ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಧುರೀಣರಾದ ಅಭಯ ಅಕ್ಕಿವಾಟೆ, ಶಿವಾನಂದ ಪಾಟೀಲ,  ಸುಭಾಷ್ ಮೋನಿ ವಿಶ್ವನಾಥ ಶಮನೆವಾಡಿ,  ಸುಧಾಕರ್ ಗಣೇಶ್ ವಾಡಿ, ಅನ್ವರ್ ಗಡ್ಕರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ