ಹಾಲುಮತ ಕೂಡ ಅಭಿವೃದ್ಧಿ ಪಥದತ್ತ ಸಾಗಲಿ: ಪಾಟೀಲ
ಲೋಕದರ್ಶನ ವರದಿ
ಇಂಡಿ 17: ಒಂದು ಸಮಾಜ ಕೇವಲ ರಾಜಕೀಯ ಮಾತ್ರವಲ್ಲದೇ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದಾಗಲೇ ಬಹುರೂಪಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಅಂಥ ಅಭಿವೃದ್ಧಿ ಪಥದಲ್ಲಿ ಹಾಲುಮತ ಕೂಡ ಸಾಗಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.ಪಾಟೀಲ ಆಶಯ ವ್ಯಕ್ತಪಡಿಸಿದರು.
ರವಿವಾರ ತಾಲೂಕಿನ ನಾದ ಕೆ.ಡಿ. ಗ್ರಾಮದಲ್ಲಿ ಕನ್ನಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಪುರಾಣ ಮಂಗಲ ಮಹೋತ್ಸವದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬಂದರೆ ಮಾತ್ರ ಸಾಮಾಜಿಕ ನ್ಯಾಯ ಪರಿಪೂರ್ಣವಾಗಲು ಸಾಧ್ಯ. ರಾಜಕಾರಣದಲ್ಲಿ ಜಾತಿ ಮುಖ್ಯವಲ್ಲ ನೀತಿ ಹಾಗೂ ಮುಖ್ಯ ಎಂದರು.
ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಶಿವಲೀಂಗೇಶ್ವರ ಶಿವಯೋಗಿಗಳು ವಹಿಸಿದರು.ಸಾನಿಧ್ಯ ಗೋಳಸಾರ ಮಠದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ವಹಿಸಿದರು. ಮುಖ್ಯ ಅತಿಥಿಗಳಾಗಿ ಹುಲಜಂತಿಯ ಮಹಾಳಿಂಗರಾಯರು, ಹಾಗೂ ಮಖಣಾಪೂರದ ಸೋಮೇಶ್ವರ ಮಹಾರಾಜರು ವಹಿಸಿದರು.
ವೇದಿಕೆಯಲ್ಲಿ ಅರವಿಂದ ದಳವಾಯಿ, ಚಿದಂಬರ ಬಂಡಗಾರ, ಆರ್.ಕೆ. ಪಾಟೀಲ, ಸಿದ್ದರಾಯ ಐರೋಡಗಿ, ನಿಂಗಣ್ಣ ತಾವರಖೇಡ, ಸಂಗಣ್ಣ ಪಾಟೀಲ, ಬಸಣ್ಣಗೌಡ ಪಾಟೀಲ, ಮಹಾದೇವ ಕೆರಟೂಗಿ, ಬಸವರಾಜ ಪಾಟೀಲ, ಅಶೋಕ ತೋಂಟಾಪುರ, ದತ್ತಾತ್ರೇಯ ಡೂಕೆ, ಶಿವಪ್ಪ ಗೋಡೆಕರ, ವಿಠ್ಠಲ ಪಾಟೀಲ, ಪುಂಡಲೀಕ ಜಿಡ್ಡಿಮನಿ, ಕಾಂತು ಬಿರಾದಾರ, ಪಂಢರಿನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.