ಕಾಗವಾಡ

ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿ ; ವಿಧಾನ ಪರಿಷತ್ ಸದಸ್ಯ, ಲಕ್ಷ್ಮಣ ಸವದಿ ಕರೆ: ಐನಾಪುರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ

ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿ ; ವಿಧಾನ ಪರಿಷತ್ ಸದಸ್ಯ, ಲಕ್ಷ್ಮಣ ಸವದಿ ಕರೆ: ಐನಾಪುರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ

ಕಾಗವಾಡ 10:  ಬರುವ ಮೇ ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಕರ್ನಾಟಕ ದಿಂದ 140 ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು  ಪುನಃ ಭಾರತೀಯ ಜನತಾ ಪಕ್ಷದ ಆಡಳಿತ ಕರ್ನಾಟಕದಲ್ಲಿ ಬರಬೇಕು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕೈ ಬಲಪಡಿಸಬೇಕು ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಯಗಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಲಕ್ಷ್ಮಣ ಸವದಿ ಹೇಳಿದರು.  

ಅವರು ದಿ 9ರಂದು ತಾಲೂಕಿನ ಐನಾಪುರ ಪಟ್ಟಣದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಮಾಡಿದ ಬಳಿಕ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು 240 ಕ್ಷೇತ್ರದಲ್ಲಿ, ವಿಜಯ ಸಂಕಲ್ಪ ಯಾತ್ರೆ ಪ್ರಾರಂಭ ಮಾಡಿದ್ದೇವೆ ಎಂದ ಅವರು ಕಾರ್ಯಕರ್ತರು ಬರುವ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನಗಳನ್ನು ಜನರ ಮನೆಮನೆಗೆ ಮುಟ್ಟಿಸುವ  ಸಂಕಲ್ಪ ಮಾಡಬೇಕು ಎಂದರು.  

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ ಕಾಂಗ್ರೆಸ್ ಪಕ್ಷ ಸುಳು ಆಶ್ವಾಸನೆ  ಹಾಗೂ ಬೆದರಿಕೆಗೆ  ಜನರು ಬಲಿಯಾಗಬೇಡಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ 2000 ಕೊಡಲು ಸಾಧ್ಯವಿಲ್ಲ ಮೊದಲು ರಾಜಸ್ಥಾನ ಛತಿಸಗಡದಲ್ಲಿ ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸಲಿ ಎಂದ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬಹುದು. ಇಡೀ ಪ್ರಪಂಚವೇ ಹಾಡಿ ಹೊಗಳುವಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಮಿಂಚುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಭಿವೃದ್ಧಿ ಯೋಜನೆಯನ್ನು ಬಲದಿಂದ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.  

ಪ್ರಧಾನಮಂತ್ರಿ ಮೋದಿ ಅವರು ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ತಲಾ 6 ಸಾವಿರ ರೂ. ನೀಡುತ್ತಿದ್ದರೆ, ಕರ್ನಾ ಟಕದ ಬಿಜೆಪಿ ಸರ್ಕಾರ 4 ಸಾವಿರ ರೂ. ನೀಡುವಮೂಲಕ ರಾಜ್ಯದಲ್ಲಿ ಬಿಜೆಪಿ ಸದುರ್ಥವಾಗಿ ಆಡಳಿತ ಮಾಡುತ್ತಿದೆ ಎಂದರು.  

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವೆ ನಾನು ಮತ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನ ನಂತೆ ಹಗಲು ರಾತ್ರಿ ಎನ್ನದೇ ಸಂಕಷ್ಟಗಳಿಗೆ ಸ್ಪಂದಿಸುತ್ತ ಅಭಿವೃಧ್ಧಿಯೆ ನನ್ನ ಮೂಲ ಮಂತ್ರವಾಗಿದ್ದು ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರಮಾಡುವ ಗುರಿ ಹೊಂದಿದ್ದೇನೆ ಮತ್ತು ಮತಕ್ಷೇತ್ರದಲ್ಲಿ ನೀರಾವರಿ ಶಿಕ್ಷಣ ರಸ್ತೆ  ಆರೋಗ್ಯ ಅಭಿವೃದ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದನೆ ಎಂದರು.  

ಇದಕ್ಕೂ ಮೊದಲು  ಐನಾಪುರ ಪಟ್ಟಣದ ಕಾರ್ಯಕ್ರಮ ನಿಯೋಜಿತ ಸ್ಥಳದ  ಸಿದೇಶ್ವರ  ದೇವಸ್ಥಾನದಿಂದ ಬಿಜೆಪಿ ಸಂಕಲ್ಪ ಯಾತ್ರೆಯ ಮೆರವಣಿಗೆ ಹಾಗೂ ಬೃಹತ್  ಬೈಕ್ ರಾಲಿ  ಪಟ್ಟಣ ಪ್ರಮುಖ ಬೀದಿಗಳಲಿ ಸಂಚರಿಸಿ ಅಥಣಿ ಕಡೆಗೆ ಪ್ರಯಾಣ ಬೆಳಸಿತ್ತು. 

ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ, ಅರುಣ ಶಹಾಪೂರ, ರಾಜೇಶ ನೇರ್ಲಿ, ತಮ್ಮಣ್ಣಾ ಪಾರಶೆಟ್ಟಿ, ದಾದಾ ಪಾಟೀಲ ರತನ ಪಾಟೀಲ, ರಾಕೇಶ ಪಾಟೀಲ, ರತನ ಪಾಟೀಲ, ಉದಯ ನಿಡಗುಂದಿ, ನಿಂಗಪ್ಪ ಚೌಗಲಾ, ಉಮೇಶ ಮನೋಜ, ಶಶಿಕಾಂತ ನಡೋಣಿ, ಮೋಹನ ಕಾರ್ಚಿ, ಅಣ್ಣಾಸಾಬ ಡೂಗನವರ, ವಿವೇಕಾನಂದ ಡಬ್ಬಿ, ಅಭಯ ಮಾನ್ವಿ, ಸತೀಶ ಅಪ್ಪಾಜಿಗೋಳ, ನಿಂಗಪ್ಪ, ರಮೇಶ ಖ್ಯಾತಗೌಡ, ವಿನಾಯಕ ಬಾಗಡಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ