ಹೂವಿನ ಹಡಗಲಿ

ಜನಪರ ಜೀವಪರ ಕಾವ್ಯ ಹೊರಹೊಮ್ಮಲಿ: ಕವಿ ಸುರೇಶ ಅಂಗಡಿ

ಜನಪರ ಜೀವಪರ ಕಾವ್ಯ ಹೊರಹೊಮ್ಮಲಿ: ಕವಿ ಸುರೇಶ ಅಂಗಡಿ

ಹೂವಿನ ಹಡಗಲಿ 02: ಕವಿಗಳು ಜನಪರ ಜೀವಪರ ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕು ಎಂದು ಕವಿ ಸುರೇಶ ಅಂಗಡಿ ಹೇಳಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಗುರುವಾರಪದ್ಯ ಬಳಗ ಆಯೋಜಿಸಿದ್ದಕವನ ಸಂಕಲನ ಸರಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕವಿ ರಾಮಪ್ಪ ಕೋಟಿಹಾಳಜಿರಾಫೆ ಕತ್ತಿನ ಅವ್ವ ಕಾವ್ಯಕೃತಿಯಲ್ಲಿ ಹಸಿವು ಬಡತನ ಶೋಷಣೆಮೊದಲಾದ ಜ್ವಲಂತ ಸಮಸ್ಯೆಗಳನ್ನು ಕಾವ್ಯಗಳಾಗಿರಚಿಸಿದ್ದಾರೆ.ಹೆತ್ತವರ ಒಡಲಿನ ಸಂಕಟಗಳನ್ನು ಅನಾವರಣಗೊಳಿಸಿದ್ದಾರೆ ಎಂದರು. 

ಉಪನ್ಯಾಸಕ ಶಂಕರ್ ಬೆಟಗೇರಿ ಮಾತನಾಡಿ ಕವಿ ಪಿ ಎಂ ಕೊಟ್ರಸ್ವಾಮಿ ರವರ ಇದು ಯಾರ ಹಂಗಿರದ ಮಣ್ಣು ಕಾವ್ಯ ಕೃತಿಯ ಕವಿತೆಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿವೆ ಎಂದರು. ಉಪನ್ಯಾಸಕ ಎಂ ಪರಶುರಾಮ ಬಂಡಾಯ ನವ್ಯ ಸಾಹಿತ್ಯದ ಪ್ರಕಾರಗಳನ್ನು ಎರಡು ಕಾವ್ಯ ಕೃತಿಗಳು ಒಳಗೊಂಡಿವೆ ಎಂದರು.  

ಕವಿತೆ ಹೇಗಿರಬೇಕು ಎನ್ನುವ ಕುರಿತು ಜಿ ಎಸ್ ಶಿವರುದ್ರ​‍್ಪರ ಮಾತನ್ನು ವಿವರಿಸಿ ಅರ್ಥೈಸಿದರು. ಕವಿಗಳಾದ ರಾಮಪ್ಪ ಕೋಟಿಹಾಳ, ಪಿ ಎಂ ಕೊಟ್ರಸ್ವಾಮಿ ತಮ್ಮ ಕಾವ್ಯಕೃತಿ ಬಗ್ಗೆ ಅನುಭವ ಹಂಚಿಕೊಂಡರು. ವಿಶ್ವಪಾಲ್ ಕೆಂಪಕಟ್ಟೆ, ಅನಂತ್, ಶಶಿಧರ ಕೆ ಎಂ, ಜಾವೇದ್ ಬಾಷಾ, ಪ್ರಭು ಸೊಪ್ಪಿನ, ಗೀರೀಶ್ ವಾಲ್ಮೀಕಿ, ರವಿ ಯಲ್ಲಪ್ಪನವರ್, ಶೇಕ್ಷಾವಲಿ ಅಯ್ಯನಹಳ್ಳಿ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ