ರಾಣೆಬೆನ್ನೂರ

ವಿದ್ಯಾರ್ಥಿನಿಯರು ಓದಿನಲ್ಲಿ ಮುಂದೆ ಬರಲಿ: ಅನಿತಾ ಸಿಂಗ್

ವಿದ್ಯಾರ್ಥಿನಿಯರು ಓದಿನಲ್ಲಿ ಮುಂದೆ ಬರಲಿ: ಅನಿತಾ ಸಿಂಗ್

ರಾಣೇಬೆನ್ನೂರು 20: ವಿದ್ಯಾರ್ಥಿನಿಯರು ಓದಿನಲ್ಲಿ ಮುಂದೆ ಬರಬೇಕು. ನಿಮ್ಮ ಜೀನದಲ್ಲಿ ಹಲವಾರು ಉತ್ತಮ ಅವಕಾಶಗಳು ಸಿಗುತ್ತವೆ. ಅವುಗಳನ್ನು ಪಡೆದುಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ನಿಮ್ಮ ಮುಂದಿನ ಭವಿಷ್ಯಕ್ಕೆ ಬುನಾದಿ ಎಂದು ಬೆಂಗಳೂರು ಪಾಂಚೀ ಫೌಂಡೇಶನ್ ತಂಡದ ಸದಸ್ಯರಾದ ಅನಿತಾ ಸಿಂಗ್ ಹೇಳಿದರು.ನಗರದ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಪಾಂಚಿ ಪೌಂಡೇಶನ್ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮೂಲಕ ಸಶಕ್ತಿಕರಣ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಕಲಿಕಾ ಸಾಮಗ್ರಿಗಳ ಕಿಟ್ಟ, ಸ್ಕೂಲ್ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.ವನಸಿರಿ ಸಂಸ್ಥೆಯು ಬಹಳ ಮೌಲ್ಯಯುತವಾದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕುಟುಂಬದಲ್ಲಿ ತಮ್ಮ ಹೆಣ್ಣು, ಗಂಡು ಮಕ್ಕಳಿಗೆ ಬೇದಭಾವ ಮಾಡದೆ ಶಾಲೆಯನ್ನು ಮದ್ಯದಲ್ಲಿ ಬಿಡಿಸದೆ ಉನ್ನತ ಶಿಕ್ಷಣಕ್ಕೆ ಹೋಗಲು ಸಹಾಯ ಮಾಡಿದರೆ. ನಿಮ್ಮ ಹೆಣ್ಣು ಮಗಳೂ ಸಹ ಎಲ್ಲಾ ಕ್ಷೇತ್ರದಲ್ಲಿ  ಶೈಕ್ಷಣಿಕವಾಗಿ, ಕ್ರೀಡಾಕ್ಷೇತ್ರದಲಿ, ರಾಜಕೀಯವಾಗಿ ಮುಂದೆ ಬರಲು ಧೈರ್ಯವಾಗಿ ಮುನ್ನುಗ್ಗಲು ಸಹಕಾರ ಕೊಡಬೇಕು ಎಂದರು.ವನಸಿರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಡಿ.ಬಳಿಗಾರ ಮಾತನಾಡಿ ವನಸಿರಿ ಸಂಸ್ಥೆಯು ಬಡತನದ ಹೆಣ್ಣುಮಕ್ಕಳಿಗೆ ಶಿಕ್ಷಣದ ಬಗ್ಗೆ ನೆರವು ನೀಡುವಂತ ಕಲಿಕಾ ಸಾಮಗ್ರಿ, ಶಿಷ್ಯವೇತನದ ನೆರವು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಹೆಣ್ಣುಮಕ್ಕಳು ಶಿಕ್ಷಣದಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವಾವಲಂಬನೆಯಾಗಲು ತಮ್ಮ  ಸ್ವಂತಕಾಲ ಮೇಲೆ ನಿಂತು ತಮ್ಮ ಕುಟುಂಬದ ನಿರ್ವಹಣೆ ಮತ್ತು  ಸಮುದಾಯದ ಸೇವೆ ಮಾಡಲು ಮುಂದಾಗಬೇಕಾಗಿದೆ ಎಂದರು. 

ಅಂತವರಳ್ಳಿ, ಬುಡಪನಹಳ್ಳಿ ಗ್ರಾಮದ ಭಾರತಿ ಕೊಕ್ಕನವರ  ವಿದ್ಯಾರ್ಥಿನಿಯು ಎಲ್ಲಾ ಹಂತದ ತರಗತಿಗಳಲ್ಲಿ ಉತ್ತಮ ಅಂಕ ಗಳಿಸಿ, ತನ್ನ ಪ್ರತಿಭೆಯನ್ನು ವ್ಯಕ್ತಪಡಿಸುತ್ತಿದ್ದಾಳೆ. ಈಗ ಅವಳು ಬಿಎಸ್‌ಎಫ್ (ಭಾರತ್ ಸೆಕ್ಯುರಿಟಿ ಫೋರ್ಸ) ಪರೀಕ್ಷೆ ಪಾಸಾಗಿ ದೇಶದ ಸೇವೆ ಸಲ್ಲಿಸುವಂತ ಅವಕಾಶಗಳ ಕಡೆ ಹೆಜ್ಜೆ ಇಡುತ್ತಿದ್ದಾಳೆ. ಅವಳ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ ಎಂದರು.ತಾಲೂಕಿನ ಹನುಮಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಭಗವಂತಗೌಡ ಮಾತನಾಡಿ  ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಪ್ರಮುಖವಾಗಿದ್ದು, ಈ ಸಮಯವನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳದೆ ಇದರ ಸದುಪಯೋಗಪಡೆದುಕೊಂಡು ಕಷ್ಟಪಟ್ಟು ಓದಬೇಕು ಜ್ಞಾನವನ್ನು ಪಡೆದುಕೊಳ್ಳಬೇಕು ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು. 

 ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ವಿ ಶ್ರೀನಿವಾಸ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಚೀಫ್ ಬ್ಯಾಂಕ ಮ್ಯಾನೇಜರ್  ಅನಿತಾ ಸಿಂಗ್, ಚಿತ್ರ ರೆಡ್ಡಿ, ವೈಶಾಲ್ ಶೆಟ್ಟಿ, ಕಲ್ಪನಾ ದುಬೆ, ಕೃಷಿಕ ಐರಣಿ, ಮಮತಾ ರಾವ್, ಪೇರಣ ತಂಡೊನ, ಕಲ್ಪನಾ ಕುಮಾರನ್, ರಾಮಚಂದ್ರ, ರಾಮಚಂದ್ರ​‍್ಪ, ಪ್ರಕಾಶ್ ಜ್ಯೋತಿ, ಹಬೀಬ್ ಬಾನು ಹಾನಗಲ್, ರೇಣುಕಾ ಗುಡಿಮನಿ, ಸಿಬ್ಬಂದಿಗಳು, ವಿದ್ಯಾರ್ಥಿನಿಯರು,ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ