ಜಮಖಂಡಿ

ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವ ತಿಳಿಸಿ: ಬೆನಕಟ್ಟಿ

ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವ ತಿಳಿಸಿ: ಬೆನಕಟ್ಟಿ

ಲೋಕದರ್ಶನ ವರದಿ,

ಜಮಖಂಡಿ  11: ಚುನಾವಣೆ ಪ್ರಜಾಪ್ರಭುತ್ವದ ಜೀವಾಳವಾಗಿದ್ದು ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವದ ಅರಿತು. ಸಂವಿಧಾನದ ಆಶಯವನ್ನು ಅಳವಡಿಸಿಕೊಳ್ಳಬೇಕು ಎಂದು ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕಿ, ಶಿಕ್ಷಕಿ ಸವಿತಾ ಬೆನಕಟ್ಟಿ ಹೇಳಿದರು. 

ತಾಲೂಕಿನ ಕುಂಬಾರಹಳ್ಳ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಂಸತ್ತ ಚುನಾವಣೆಯ ಸಂಚಾಲಕತ್ವವಹಿಸಿ ಮಾತನಾಡಿದ ಅವರು,  ಭಾರತ ಜಗತ್ತಿನಲ್ಲಿಯೆ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿನ ಪ್ರಜೆಗಳೆ ಪ್ರಭುಗಳಾಗಿದ್ದಾರೆ. ಮತಗಳೆ ಪ್ರಭುತ್ವವನ್ನು ನಿರ್ಧರಿಸುತ್ತವೆ .ಮುಂದಿನ ಪ್ರಜೆಗಳಾದ ಮಕ್ಕಳು ವಿದ್ಯಾರ್ಥಿದೆಸೆಯಿಂದಲೆ ಪವಿತ್ರ ಮತದಾನದ ಮಹತ್ವ ಅರಿಯುವಂತಾಗಲು ಶಾಲಾ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೆ ಮೊಬೈಲ್ನಲ್ಲಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ಗಳನ್ನು ಮಾಡಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಮತದಾನದ ಪ್ರಾತ್ಯಕ್ಷಿಕೆಯಲ್ಲಿ ಕುಂಬಾರಹಳ್ಳ ಗ್ರಾಮಪಂಚಾಯತ ಅಧ್ಯಕ್ಷ ನಿಂಗಪ್ಪ ತೇರದಾಳ, ಮಲ್ಲೇಶ್ ಬಂಡಿವಡ್ಡರ, ನಾಗಪ್ಪ ಹೆಗಡೆ ಇದ್ದರು.

ಶಿಕ್ಷಕ ಬಾಹುಬಲಿ ಮುತ್ತೂರ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸಂಜೀವ ಝಂಬುರೆ ತಂತ್ರಜ್ಞರಾಗಿ ಸಹಕರಿಸಿದರು. ಶಿಕ್ಷಕ ಸಂಗನಬಸವ ಉಟಗಿ, ಶಿಕ್ಷಕಿ ಆಸೀಫಾಭಾನು ಮೊಮಿನ ಚುನಾವಣಾ ಸಿಬ್ಬಂದಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ತರಬೇತಿ ನೀಡಿದರು. ಶಿಕ್ಷಕ ಚಂದ್ರಕಾಂತ ಪೊಲೀಸ್, ಶಕುಂತಲಾ ಬಿರಾದಾರ ಇದ್ದರು.



ಸುದ್ದಿ ಓದಿ