ಗುಳೇಗುಡ್ಡ

ಶಿಕ್ಷಕರು ಸೃಜನಶೀಲತೆ ಬೆಳೆಸಿಕೊಳ್ಳಿ : ಡಾ. ಮೋಮಿನ

ಶಿಕ್ಷಕರು ಸೃಜನಶೀಲತೆ ಬೆಳೆಸಿಕೊಳ್ಳಿ : ಡಾ. ಮೋಮಿನ
ಗುಳೇದಗುಡ್ಡದಲ್ಲಿ ಅಣುಬೋಧನಾ ತರಬೇತಿ ಕಾರ್ಯಾಗಾರ ಉದ್ಘಾಟಿಸಲಾಯಿತು.

ಗುಳೇದಗುಡ್ಡ, ಆ.9 :ಮಕ್ಕಳಿಗೆ ಉತ್ತಮ ಪಾಠಬೋಧನೆ ಮಾಡಲು ಉತ್ತಮ ಜ್ಞಾನ ಹೊಂದುವುದರೊಂದಿಗೆ ಸೃಜನಶೀಲ ಗುಣ ಬೆಳೆಸಿಕೊಳ್ಳಬೇಕೆಂದು ಜಗದ್ಗುರು ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪಿ.ಆಯ್‌.ಮೋಮಿನ ಹೇಳಿದರು. 

ಅವರು ಸೋಮವಾರ ಶಿಕ್ಷಕ ತರಬೇತಿಯಲ್ಲಿ ಮಹತ್ವ ಪೂರ್ಣವಾದ ‘ಅಣು ಬೋಧನಾ ತರಬೇತಿ ಕಾರ್ಯಾಗಾರ’ವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದುದು, ಬಿ.ಇಡಿ ತರಬೇತಿಯಲ್ಲಿ ಉತ್ತಮವಾದ ಶಿಕ್ಷಣ ಪಡೆದು, ಶಿಕ್ಷಕರಾದ ಮೇಲೆ ದಕ್ಷ ಮತ್ತು ಪ್ರಾಮಾಣಿಕವಾಗಿ ವೃತ್ತಿಯನ್ನು ಮಾಡಬೇಕೆಂದು ಹೇಳಿದರು. 

ಉಪನ್ಯಾಸಕಿ ಶ್ರೀಮತಿ ಬಿ.ಎ.ನಾದಾಫ್ ಮಾತನಾಡಿ, ಸೂಕ್ಷ್ಮ ಬೋಧನೆಯಲ್ಲಿ ಎಲ್ಲಾ ಆರು ಕೌಶಲ್ಯಗಳಲ್ಲಿ ಪರಿಣಿತಿ ಹೊಂದಿದಾಗ ಮಾತ್ರ ಉತ್ತಮ ಪಾಠಯೋಜನೆ ರೂಪಿಸಲು ಸಾಧ್ಯ. ಇದರಿಂದ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಎಚ್‌.ಎಸ್‌.ಘಂಟಿ, ಎಸ್‌.ಟಿ.ಕತ್ತಿ. ವಿಠ್ಠಲ ಬದಿ. ಸಿಲ್ವಿಯಾ ಗುಬ್ಬಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ