ಕಾಗವಾಡ

ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಬಾಗಡಿ

ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಬಾಗಡಿ

ಕಾಗವಾಡ 12: “ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ" ಎಂದು ಆಕ್ಷೇಪಕಾರಿ ಹೇಳಿಕೆ ನೀಡಿದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಮತ್ತು ಬಿಜೆಪಿಯ ಕ್ಷಮೆ ಕೇಳಬೇಕೆಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಪಕ್ಷದ ಉಪಾಧ್ಯಕ್ಷ ವಿನಾಯಕ ಬಾಗಡಿ ಆಗ್ರಹಿಸಿದರು. 

ಅವರು ಶುಕ್ರವಾರ ದಿ.12 ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮದಭಾವಿ ಗ್ರಾಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ದಲಿತರು ಮತ್ತು ಹಿಂದುಳಿದ ವರ್ಗದವರು ಸಹಜವಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ಅತ್ಯಂತ ನೋವಾಗಿದೆ. ಆದುದರಿಂದ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. 

ಕಾಗವಾಡ ಮಂಡಲದ ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಾ ಶಿಂಧೆ ಮಾತನಾಡುತ್ತ ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಈ ಮುಂಚೆ ಜೆಡಿಎಸ್ನಲ್ಲಿದ್ದರು. ಅದನ್ನು ಬಿಟ್ಟು ಕಾಂಗ್ರೆಸ್ಸಿಗೆ ಹೊಟ್ಟೆಪಾಡಿಗಾಗಿ ಬಂದರಾ ಎಂಬುದನ್ನು ಸ್ಪಷ್ಟಪಡಿಸಬೇಕೇಂದು  ಆಗ್ರಹಿಸಿದರು. ಕೂಡಲೇ ಸಿದ್ದರಾಮ್ಯನವರು ದಲಿತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. 

 ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸವಿಲ್ಲ, ಆ ಕಾರಣಕ್ಕೆ ಈ ರೀತಿ ಅಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕೃಷ್ಣಾ ಶಿಂದೆ ಆಕ್ರೋಶ ವ್ಯಕ್ತ ಪಡಿಸಿದರು.  

ಸಂಜಯ ಅದಾಟೆ, ಜ್ನಾನೇಶ್ವರ ಭಂಡಾರೆ, ಮಹಾಂತೇಶ ಕಾಂಬಳೆ, ರಾವಸಾಬ ಕಾಂಬಳೆ,ಪ್ರವೀಣ,ಭಂಡಾರೆ,ರಾಯಪ್ಪಕಾಂಬಳೆ, ಶಿವಾನಂದ ಮಗದುಮ್, ಗೋಪಾಲ ನಿವಲಗಿ, ಬೈರು ಪಾಟೀಲ, ಬಾಳು ಮಗದುಮ್, ಸಿದ್ದಲಿಂಗ ಇಬ್ರಾಹಿಂಪುರ, ಅರ್ಜುನ ಇಬ್ರಾಹಿಂಪುರ, ಸೋಮಿಂಗ ಮಗದುಮ್, ಬಾಹುಬಲಿ ಉಮದಿ, ಅಪ್ಪಾಸಾಬ ಚೌಗುಲೆ, ಮಹೇಶ ಕೇಸ್ತಿ, ಕೇದಾರಿ ಮುಚ್ಚಂಡಿ ಅನೀಲ ಭಂಡಾರೆ, ಜಗದೀಶ ಕೊಪ್ಪದ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ