ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಲಿ
ನವಲಗುಂದ 22 : ರಾಜ್ಯದಲ್ಲಿ ಕೊರೋನಾದಿಂದ ನಿಧನರಾದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ ಹೊಂದಿದವರಿಗೆ ರಾಜ್ಯ ಸರ್ಕಾರ 1 ಲಕ್ಷ ಹಾಗೂ ಕೇಂದ್ರ ಸರ್ಕಾರ ತನ್ನ ಪಾಲಿನ 5 ಲಕ್ಷ ಸೇರಿಸಿ ಪ್ರತಿ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಬೇಕು ಹಾಗೂ 2019 ರಿಂದ 2021 ರ ವರೆಗಿನ ಪ್ರಧಾನ ಮಂತ್ರಿ ಫಸಲಬೀಮಾ ಯೋಜನೆಯ ರೈತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು, ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಬೇಕೆಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪನರಿಗೆ ಮನವಿ ಮಾಡಿದ್ದಾರೆ.
ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು, ವಾಜಪೇಯಿ ಹಾಗೂ ಬಸವ ವಸತಿ ಯೋಜನೆಯ ಮತ್ತು ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಅವುಗಳನ್ನು ಮರು ಡಾಂಬರೀಕರಣ ಮಾಡಲು ಕೋನರಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನವಲಗುಂದ ಅಧ್ಯಕ್ಷ ದೆವೇಂದ್ರ್ಪ ಹಳ್ಳದ, ಅಣ್ಣಿಗೇರಿ ಅಧ್ಯಕ್ಷ ಪ್ರದೀಪ ಲೆಂಕನಗೌಡ್ರ, ನವಲಗುಂದ ಪುರಸಭೆ ವಿರೋಧ ಪಕ್ಷದ ನಾಯಕ ಅಪ್ಪಣ್ಣ ಹಳ್ಳದ, ಪುರಸಭೆ ಸದಸ್ಯರಿಗಳಾದ ಪ್ರಕಾಶ ಶಿಗ್ಲಿ, ಜೀವನ ಪವಾರ, ಮೋದಿನ ಶಿರೂರ, ಬಾಬಾಜಾನ ಮಕಾನದಾರ, ಸುರೇಶ ಮೇಟಿ, ಮಾಂತೇಶ ಭೋವಿ, ಹನಮಂತ ವಾಲಿಕಾರ, ಶ್ರೀಮತಿ ಹುಸೇನಬಿ ಧಾರವಾಡ, ಶ್ರೀಮತಿ ಚಂದ್ರಕಲಾ ಮಳಗಿ, ಮುಖಂಡರುಗಳಾದ ಆನಂದ ಹವಳಕೋಡ, ಬಿ.ಎಲ್. ಜೈನರ, ಶಂಕರಗೌಡ ಪಾಟೀಲ, ಸಿದ್ದಲಿಂಗಪ್ಪ ಮದ್ನೂರ, ಮುದ್ದಣ್ಣ ಅಳಗವಾಡಿ, ಬಸವರಾಜ ಬೋರಶೇಟ್ಟರ, ಶಿವು ನಾಯ್ಕರ, ಬಸನಗೌಡ ಪಾಟೀಲ, ಫಕ್ಕೀರಗೌಡ್ರ, ರಾಘು ತೆರದಾಳ, ಯಲ್ಲಪ್ಪ ದೇವರಡ್ಡಿ, ಮಲ್ಲಪ್ಪ ಹಳ್ಳದ, ಶ್ರೀಮತಿ ಶಿವಲೀಲಾ ಬೋರಶೇಟ್ಟರ, ನೂರಜಹಾನ ದವಲತ್ತಾರ ಇತರರು ಉಪಸ್ಥಿತರಿದ್ದರು.