ಬೈಲಹೊಂಗಲ

ಉದ್ಯೋಗದಲ್ಲಿ ಮೀಸಲು, ಆಡಳಿತದಲ್ಲಿ ಕನ್ನಡ ಕಡ್ಡಾಯ ಘೋಷಣೆಗಳು ಅನುಷ್ಠಾನಗೊಳ್ಳಲಿ : ಸರ್ಕಾರವನ್ನು ಒತ್ತಾಯಿಸಿದ ಚಿತ್ರನಟ ಶಿವರಂಜನ ಬೋಳಣ್ಣವರ

ಉದ್ಯೋಗದಲ್ಲಿ ಮೀಸಲು, ಆಡಳಿತದಲ್ಲಿ ಕನ್ನಡ ಕಡ್ಡಾಯ ಘೋಷಣೆಗಳು ಅನುಷ್ಠಾನಗೊಳ್ಳಲಿ : ಸರ್ಕಾರವನ್ನು ಒತ್ತಾಯಿಸಿದ ಚಿತ್ರನಟ ಶಿವರಂಜನ ಬೋಳಣ್ಣವರ

ಲೋಕದರ್ಶನ ವರದಿ 


ಬೈಲಹೊಂಗಲ 02: ರಾಜ್ಯದಲ್ಲಿ ಪ್ರಸಕ್ತ ದಿನಮಾನಗಳಲ್ಲಿ ಆಂಗ್ಲ, ತಮಿಳು, ಹಿಂದಿ ಭಾಷೆಗಳ ಭರಾಟೆಯಲ್ಲಿ ಕನ್ನಡಿ ನಾಡಿನಲ್ಲಿ ಕನ್ನಡ ಬಳಕೆ  ಕಡಿಮೆಯಾಗುತ್ತಿದ್ದು ಕನ್ನಡದ ಉಳಿವು ಮತ್ತು ಅಭಿವೃದ್ಧಿ ಕಾರ್ಯ ಕೇವಲ ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ ನಾವು ನೀವೆಲ್ಲರು ನಿತ್ಯ ಕನ್ನಡ ಬಳಕೆ ಮಾಡಿದಾಗ ಮಾತ್ರ ಸಾಧ್ಯವೆಂದು ಚಿತ್ರನಟ ಶಿವರಂಜನ ಬೋಳಣ್ಣವರ ಹೇಳಿದರು.  

   ಅವರು ಪಟ್ಟಣದ ಕರ್ನಾಟಕ ನವ ನಿರ್ಮಾಣ ಪಡೆ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ ನೇತ್ರತ್ವದಲ್ಲಿ ಜರುಗಿದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಉದ್ಯೋಗದಲ್ಲಿ ಮೀಸಲು, ಶಿಕ್ಷಣ, ಆಡಳಿತದಲ್ಲಿ ಕನ್ನಡ ಕಡ್ಡಾಯದಂತಹ ಘೋಷಣೆಗಳು ಹಲವು ವರ್ಷಗಳಿಂದ ನೆನಗುದ್ದಿಗೆ ಬಿದ್ದಿವೆ ಅವುಗಳನ್ನು ಅನುಷ್ಠಾನಕ್ಕೆ ಮುಂದಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.   

       ಪವರ ಸ್ಟಾರ ಪುನೀತರಾಜಕುಮಾರ ಜೊತೆ ನಾನು ಅವರು 8 ವರ್ಷದ ಬಾಲಕನಾಗಿದ್ದಾನಿಂದ ಇವರ ಜೊತೆ ಅವಿನಾಭುವ ಸಂಭಂದ ಹೊಂದಿದ್ದು, ಅವರ ಅಕಾಲಿಕ ನಿಧನದಿಂದ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಬಾಳಿ ಬೆಳಕಾಗ ಬೇಕಾದ ಪುನೀತ ಇವರ ಅಗಲಿಕೆ  ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದರು. 

    ಶಾಸಕ ಮಹಾಂತೇಶ ಕೌಜಲಗಿ, ಕರ್ನಾಟಕ ನವ ನಿರ್ಮಾಣ ಪಡೆ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಕನ್ನಡಿಗರ ಆದ ನಾವು ನಿತ್ಯ ಕನ್ನಡ ಬಳಕೆ ಮಾಡಿ ಕನ್ನಡತನವನ್ನು ಮೆರಯಬೇಕೆಂದರು.  

    ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ನಿರಂಜನ ಶಾಸ್ತ್ರೀ ಇಂಚಲಮಠ ಸಾನಿದ್ಯ ವಹಿಸಿ ಮಾತನಾಡಿ, ಕನ್ನಡ ನಾಡು, ನೆಲ,ಜಲ, ಭಾಷೆ, ಗಡಿ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯ ಅಮೋಘವಾಗಿದೆ. ನಮ್ಮ ನೆಲದಲ್ಲಿ ನಮ್ಮತನ ಉಳಿಸಬೇಕಾಗಿದೆ ಎಂದರಲ್ಲದೇ ಚಿತ್ರನಟ ಪುನಿತರಾಜಕುಮಾರ ನಿಧನದಿಂದ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ, ಅವರ ಅಗಲಿಕೆಯಿಂದ ಭಗವಂತನು ಕುಟುಂಬಕ್ಕೆ ದುಖಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.   

       ವೇದಿಕೆ ಮೇಲೆ ಮಾಜಿ ಶಾಸಕ ಜಗದೀಶ ಮೆಟಗುಡ್ಡ,  ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಕುಮಾರ ದೇಶನೂರ, ಉದ್ಯಮಿ ವಿಜಯ ಮೆಟಗುಡ್ಡ, ತಾಪಂ ಇಓ ಸುಭಾಷ ಸಂಪಗಾಂವಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್‌.ಎಸ್‌.ಸಿದ್ದನ್ನವರ, ಡಿವೈಎಸ ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ,  ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮುಂತಾದವರು ಇದ್ದರು.  

     ಚಿತ್ರನಟ ಪುನೀತರಾಜಕುಮಾರ ನಿಧನಕ್ಕೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನವನ್ನು ಆಚರಿಸಿದರು.  

    ಪುರಸಭೆ ಸದಸ್ಯ ಗುರು ಮೆಟಗುಡ್ಡ, ಸುಭಾಷ ತುರಮರಿ, ಮಹಾಂತೇಶ ಹೊಸಮನಿ, ರೀತೀಶ ಪಾಟೀಲ, ಮಾರುತಿ ತುರಮರಿ, ಸಂತೋಷ ಹಡಪದ, ರವಿ ತುರಮರಿ, ಮುನ್ನಾ ಜಾಡವಾಲೆ, ವಿವೇಕ ಬೇವಿನಕೊಪ್ಪ, ಆನಂದ ಭಜಂತ್ರಿ,  ಕರ್ನಾಟಕ ನವ ನಿರ್ಮಾಣ ಪಡೆ ತಾಲೂಕಿನ ವಿವಿಧ ಶಾಖೆಗಳ ಅಧ್ಯಕ್ಷರು,  ಪದಾಧಿಕಾರಿಗಳು, ನೂರಾರು ನಾಗರೀಕರು ಇದ್ದರು.  

           ವಿದ್ಯಾರ್ಥಿ ಧುರೀಣ ಪ್ರಥಮ ತುರಮರಿ, ಮುರಗೇಶ ದೊಡ್ಡಗೌಡರ, ಶಿವಾನಂದ ಜನ್ಮಟ್ಟಿ , ಪ್ರೀತಮ ಬೆಳಗಾವಿ, ಬಸವರಾಜ ಚಿನಿವಾಲರ, ಶ್ರೀಹರ್ಷ ಕಟ್ಟಿಮನಿ, ದರ್ಶನ ಕಮ್ಮಾರ, ವಿನಯ ಬೋಡಕಿ, ಗಜು ತೋಟಗಿ, ನಿರಂಜನ ಮಠಪತಿ, ಶಶಾಂಕ ಕುರಬೆಟ್ಟ ಇವರ ನೇತ್ರತ್ವದಲ್ಲಿ ನೂರಾರು ಯುವಕರು ಬೈಕ ರಾ​‍್ಯಲಿ ನಡೆಸಿದರು.  

  ಮಹಿಳಾ ಕಾರ್ಯಕರ್ತ ಕನ್ನಡ ಭಾವುಟ ಹಿಡಿದು ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಟ್ಟಣದ ತುಂಬೆಲ್ಲ ಕನ್ನಡ ಬಾವುಟಗಳು ರಾರಾಜುಸುತ್ತಿದ್ದವು.  

ಜಯ ಕರ್ನಾಟಕ ಸಂಘಟನೆ --- ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ವತ್ತದಲ್ಲಿ 66 ನೇ ಕನಾ9ಟಕ ರಾಜ್ಯೋತ್ಸವ ನಿಮಿತ್ಯ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಪೂಜೆ ಸಲ್ಲಿಸಿದರು. ಕಲಾವಿದ ಸಿ.ಕೆ.ಮೆಕ್ಕೇದ, ಮಡಿವಾಳಪ್ಪ ಹೋಟಿ, ಮಹಾಂತೇಶ ಮತ್ತಿಕೊಪ್ಪ, ವಿರುಪಾಕ್ಷ ಕೊರಿಮಠ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಸೋಮನಾಥ ಸೊಪ್ಪಿಮಠ, ವಿಠಲ ಅಂದಾನಿ, ಶ್ರೀಶೈಲ ಹಂಪಿಹೊಳಿ, ಈಶ್ವರ ಬೋರಕನವರ ಹಾಗೂ ಮಹಿಳೆಯರು, ನೂರಾರು ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ