ಸಿಂಧಗಿ

ಚುನಾವಣೆಯಲ್ಲಿ ನ್ಯಾಯಯುತವಾಗಿ ಗೆಲುವು ಸಾಧಿಸೋಣ: ಅಭ್ಯರ್ಥಿ ಹುಕ್ಕೇರಿ

ಚುನಾವಣೆಯಲ್ಲಿ ನ್ಯಾಯಯುತವಾಗಿ ಗೆಲುವು ಸಾಧಿಸೋಣ: ಅಭ್ಯರ್ಥಿ ಹುಕ್ಕೇರಿ

ಸಿಂದಗಿ: ನಮಗೆ ಚುನಾವಣೆ ಎದುರಿಸುವುದು ಗೊತ್ತು. ನ್ಯಾಯಯುತವಾಗಿ ಚುನಾವಣೆ ಮಾಡಿ. ನ್ಯಾಯಯುತವಾಗಿ ಗೆಲುವು ಸಾಧಿಸೋಣ. ಬೆಳಗಾವಿ ಜಿಲ್ಲೆಯವರಿಗೆ ಚುನಾವಣೆ ಹ್ಯಾಂಗ ಮಾಡೋದು ಗೊತ್ತು. ಚುನಾವಣೆಯಲ್ಲಿ ವಾಮಮಾರ್ಗ ಸಲ್ಲದು ಎಂದು ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಎದುರಾಳಿ ಅಭ್ಯರ್ಥಿಗೆ ಕಿವಿಮಾತು ಹೇಳಿದರು. 

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಬುಧವಾರ ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರ ಪರವಾಗಿ, ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮತಯಾಚನೆ ಮಾಡಿ ಅವರು ಮಾತನಾಡಿದರು. 

ನಾನು ಏಳು ಸಲ ಗೆದ್ದಿದ್ದೇನೆ. ಗೆಲು ಸಾಧಿಸುವ ಅನುಭವ ನನಗಿದೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಶಿಕ್ಷಕರ ಸಮಸ್ಯೆಗಳನ್ನು ಚಾಲೇಂಜಾಗಿ ತಗೆದುಕೊಳ್ಳುತ್ತೇನೆ. ಒಂದು ವೇಳೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ರಾಜಿನಾಮೆ ನೀಡಿ ಮನೆಗೆ ಹೋಗುತ್ತೇನೆ ಎಂದು ಮತದಾರರಿಗೆ ಬರವಸೆ ನೀಡಿ ಮತಯಾಚನೆ ಮಾಡಿ, ನನಗೂ ಮತ್ತು ಪದವಿಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. 

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಕಳೆದ 30 ವರ್ಷದಿಂದ ರಾಜಕೀಯದಲ್ಲಿದ್ದು ಸಾಕಷ್ಟು ಅಭಿವೃದ್ಧಿಪರ ಕೆಲಸ ಮಾಡುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಪ್ರಾಮಾಣಿಕ, ಸರಳ ವ್ಯಕ್ತಿತ್ವದವರು. ಅವರ ಗೆಲುವಿಗೆ ಶ್ರಮಿಸೋಣ. ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. 

ಕೆಪಿಸಿಸಿ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ನಿರ್ಲಕ್ಷಕ್ಕೊಳಪಟ್ಟ ಕ್ಷೇತ್ರವಾಗಿದೆ. ಯಾವುದೇ ಸರಕಾರಗಳು ಶಿಕ್ಷಣ ಕ್ಷೇತ್ರ ಹಿತಕಾಪಾಡಿಲ್ಲ. ಕಳೆದ 25 ವರ್ಷಗಳಿಂದ ನೊಡುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಜ್ವಾಲಾಮುಖಿಯಂತೆ ಪುಟಿಯುತ್ತಿವೆ. ಉತ್ತರ ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೇ ಶೈಕ್ಷಣಿಕ ಕ್ರಾಂತಿಯಾಗಿದೆ. ಆದರೆ ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡುತ್ತಿಲ್ಲ. ನೂರಾಯೆಂಟು ಕಾನೂನುಗಳನ್ನು ಹೆರುತ್ತಿವೆ. ನೇಮಕಾತಿ ಪ್ರಕ್ರೀಯೆ ಮಾಡುತ್ತಿಲ್ಲ. ಇನ್ನಾದರು ಎಚ್ಚತ್ತು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡೆಸಬೇಕು. ಹೀಗಾಗಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯಮತ ನೀಡಿ ಚುನಾಯಿಸಿ ಎಂದು ಮನವಿ ಮಾಡಿಕೊಂಡರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಿದೆ. ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ಶಿಕ್ಷಕರ ಮತ್ತು ಪದವಿಧರರ ಸಮಸ್ಯೆಗಳಿಗೆ ಸ್ಪಂಧಿಸಿದೆ. ಆದ್ದರಿಂದ ಈ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. 

ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಮಾತನಾಡಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಅಶೋಕ ವಾರದ, ರಾಜಶೇಖರ ಕೂಚಬವಾಳ, ಮಲ್ಲಣ್ಣ ಸಾಲಿ, ಬಿ.ಎಸ್‌. ಪಾಟೀಲ ಯಾಳಗಿ, ರಮೇಶ ಭಂಟನೂರ, ಶಿಕ್ಷಕರ ಪರವಾಗಿ ಎಸ್‌.ಎಸ್‌. ತಾವರಖೇಡ ಮಾತನಾಡಿದರು. 

ಎಂ.ಆರ್‌. ತಾಂಬೋಳಿ, ಸುಬಾಸ ಛಾಯಾಗೋಳ, ಯೋಗಪ್ಪಗೌಡ ಪಾಟೀಲ, ಶರಣಪ್ಪ ವಾರದ, ಪರಶುರಾಮ ಕಾಂಬಳೆ, ಅಶೋಕ ಕೋಳಾರಿ, ಅಯುಬ ದೇವರಮನಿ, ಭಾರತಿ ಬೆಟಗೇರಿ, ಜಯಶ್ರೀ ಹದ್ನೂರ, ಪುರಸಭೆ ಸದಸ್ಯ ಶಾಂತವೀರ ಬಿರಾದಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ವೇದಿಕೆ ಮೇಲೆ ಇದ್ದರು. 


ಸುದ್ದಿ ಓದಿ