ಮನರಂಜನೆ

ಆನೆ ಸಂರಕ್ಷಣೆಗೆ ಪ್ರತಿಜ್ಞೆ ಮಾಡೋಣ : ದಚ್ಚು

ಆನೆ ಸಂರಕ್ಷಣೆಗೆ ಪ್ರತಿಜ್ಞೆ ಮಾಡೋಣ : ದಚ್ಚು
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ಬೆಂಗಳೂರು, ಆಗಸ್ಟ್ 12 : ವಿಶ್ವ ಆನೆ ದಿನದಂದು ಸ್ಯಾಂಡಲ್ ವುಡ್ ನಟ ದರ್ಶನ್ ರಾಜ್ಯದ ಜನತೆ ಹಾಗೂ ಅಭಿಮಾನಿಗಳಿಗೆ ವಿಶೇಷ ಸಲಹೆ ನೀಡಿದ್ದಾರೆ. 

ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ. 

ಈ ವೇಳೆ ಗಜರಾಜನ ಜತೆಗಿರುವ ಭಾವಚಿತ್ರವನ್ನು ದರ್ಶನ್ ಪೋಸ್ಟ್ ಮಾಡಿದ್ದಾರೆ.  

ದೇಶದಲ್ಲಿರುವ ಸುಮಾರು 27 ಸಾವಿರ ಆನೆಗಳ ಪೈಕಿ ನಮ್ಮ ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಆನೆಗಳಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.  ಆದಾಗ್ಯೂ, ಆಹಾರವನ್ನರಸಿ ನಾಡಿನೆಡೆ ಬಂದಾಗ ಹಾಗೂ ಚರ್ಮ, ದಂತಕ್ಕಾಗಿ ಆನೆಯ ಬೇಟೆ ಅವ್ಯಾಹತವಾಗಿ ನಡೆಯುತ್ತಲೇ ಇರುವುದು ವಿಷಾದಕರ ಸಂಗತಿಯಾಗಿದೆ.  

ಸುದ್ದಿ ಓದಿ