14ರಂದು ರಾಷ್ಟ್ರೀಯ ಅದಾಲತ್ನ್ನು ಯಶಸ್ವಿಗೊಳಿಸೋಣ: ಅಂದಾನಶೆಟ್ಟಿ
ಗೋಕಾಕ 09: ಇದೇ ಆಗಸ್ಟ್ 14ರಂದು ಜರುಗಲಿರುವ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿರುವ ಹಳೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಕಕ್ಷೀಗಾರರಿಗೆ ವಕೀಲ ಬಾಂಧವರ ಸಲಹೆ ಬಹುಮುಖ್ಯವಾಗಿದೆ ಎಂದು ಇಲ್ಲಿನ 12ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ಅಂದಾನಶೆಟ್ಟಿ ಹೇಳಿದರು.
ಶುಕ್ರವಾರ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಕರೆಯಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಜರುಗಿದ ಅದಾಲತ್ ಯಶಸ್ವಿಯಾಗಲು ಇಲ್ಲಿನ ವಕೀಲರ ಸಹಕಾರ ಬಹುಮುಖ್ಯವಾಗಿತ್ತು ಎಂದು ಜ್ಞಾಪಿಸಿದರು.
ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಂಡಲ್ಲಿ ಮೊದಲನೇಯದಾಗಿ ಬಿನ್ನಾಭಿಪ್ರಾಯಕ್ಕೆ ಅವಶ್ಯಕ ಪರಿಹಾರ ಲಭಿಸುವುದು, ಆ ಮೂಲಕ ಮನಸ್ಸಿಗೆ ನೆಮ್ಮದಿ ಹಾಗೂ ಎಲ್ಲಕ್ಕೂ ಮಿಗಿಲಾಗಿ ಅಂಥ ಸಮಸ್ಯೆ ಮರುಕಳಿಸುವ ಸಾಧ್ಯತೆ ತೀರಾಕಡಿಮೆ ಎಂಬುದನ್ನು ಕಕ್ಷೀಗಾರರಿಗೆ ವಕೀಲರು ಮನವರಿಕೆ ಮಾಡಿಕೊಡುವ ಮೂಲಕ ಇದೇ ಆಗಸ್ಟ್ 14ರಂದು ಜರುಗಲಿರುವ ರಾಷ್ಟ್ರೀಯ ಅದಾಲತ್ವನ್ನು ಮತ್ತೊಂದು ಯಶಸ್ವೀ ಅದಾಲತ್ ಆಗಿಸೋಣ ಎಂದು ಸಲಹೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಮತ್ತು ಕಿರಿಯ ವಕೀಲರು ಅದಾಲತ್’ನ ರೂಪು-ರೇಷೆಗಳ ಕುರಿತು ಚರ್ಚೆ ನಡೆಸಿ, ಬೌನ್ಸ್-್ಡ ಚೆಕ್ ಪ್ರಕರಣಗಳು ಅದಾಲತ್ಗಳಲ್ಲಿ ಭಾಗಶಃ ಇತ್ಯರ್ಥಗೊಳ್ಳುತ್ತವೆ ಆದರೆ ಬಾಕಿ ಉಳಿದ ಮೊತ್ತ ನಿಗದಿಯಂತೆ ವಸೂಲಿಯಾಗದೇ ತೊಂದರೆಗಳು ಹಾಗೆಯೇ ಮುಂದುವರೆಯುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು. ಅಂಥ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನಿನ ಕ್ರಮಗಳ ಕುರಿತು ಚರ್ಚೆ ನಡೆಯಿತು.
ವೇದಿಕೆಯಲ್ಲಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ದೀಪಾ ಜಿ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಂ.ಶಂಕರ ಹಾಗೂ ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಮಾತನಾಡಿದರು.