ಕಾಗವಾಡ

28ರಂದು ಮದಭಾಂವಿಯಲ್ಲಿ ಜರುಗಲಿರುವ ಕಾರ್ಯಕರ್ತರ ಸಭೆಯನ್ನು ಯಶಸ್ವಿಗೊಳಿಸೋಣ: ನೇರ್ಲಿ

28ರಂದು ಮದಭಾಂವಿಯಲ್ಲಿ ಜರುಗಲಿರುವ ಕಾರ್ಯಕರ್ತರ ಸಭೆಯನ್ನು ಯಶಸ್ವಿಗೊಳಿಸೋಣ: ನೇರ್ಲಿ

ಶೇಡಬಾಳ 24: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ ಅವರ ನೇತೃತ್ವದಲ್ಲಿ ಬುಧವಾರ ದಿ. 28ರಂದು ಮದಭಾಂವಿಯಲ್ಲಿ ಜರುಗಲಿರುವ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ ಕರೆ ನೀಡಿದರು. 

ಅವರು ಶುಕ್ರವಾರ ದಿ. 23 ರಂದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಜರುಗಿದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.  

ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ ಅವರು ಭೂತಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಪಕ್ಷದ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿದರು.  

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಕಲೆ ಮಾತನಾಡಿ ಮುಂಬರುವ ವಿಧಾನ ಸಭಾ ಚುನಾವಣೆಯ ಗಮನದಲ್ಲಿರಿಸಿ ಜರುಗಲಿರುವ ರಾಜ್ಯಾಧ್ಯಕ್ಷರ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಬಿಜೆಪಿ ಪಕ್ಷದ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರ ಕೈಬಲ ಪಡಿಸುವಂತೆ ಕರೆ ನೀಡಿದರು. 

ಮಂಡಲದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಮಾತನಾಡಿ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಶ್ರೀಮಂತ ಪಾಟೀಲರು ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೊಳಿಸುತ್ತಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಸಹಕರಿಸಿ ಬುಧವಾರ ದಿ. 28ರಂದು ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಕಲೆ, ಕಾಗವಾಡ ಮಂಡಲದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಜಿಲ್ಲಾ ಎಸ್‌.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೆಂಪವಾಡೆ, ಶಿವಾನಂದ ನವಿನ್ಯಾಳ, ಅಶ್ಥತ ಪಾಟೀಲ, ಕಿರಣ ಯಂದಗೌಡರ, ಗೀರೀಶ ಕುಲಕರ್ಣಿ, ಮಹಾವೀರ ಲಗಾರೆ, ಭರತ ಸಮಾಜ, ವಸಂತ ಶಿಂಧೆ, ಪೋಪಟ ಕವಟಗೆ, ವಿಠ್ಠಲ ಚೋಳಕೆ, ಸುನೀಲ ಸೊಟ್ರಾಯಿ, ಸದಾಶಿವ ಮಾಂಗಲೆ, ಶೀತಲ ಲಕ್ಕಪ್ಪಗೋಳ ಸೇರಿದಂತೆ    ಪಟ್ಟಣ ಪಂಚಾಯತ ಎಲ್ಲ ಸದಸ್ಯರು, ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಇದ್ದರು. 


ಸುದ್ದಿ ಓದಿ