ಹರ ಘರ ತಿರಂಗಾ ಅಭಿಯಾನ ಯಶಸ್ವಿಗೊಳಿಸೋಣ
ಶೇಡಬಾಳ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂ.ಎನ್. ಕವಲಾಪೂರೆ ಕರೆ
ಶೇಡಬಾಳ: ನಮ್ಮ ದೇಶದಲ್ಲಿನ ಇಂದಿನ ನಾಗರಿಕರಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶದಿಂದ ಹರ ಘರ ತಿರಂಗಾ ಎಂಬ ಅಭಿಯಾನ ಹಮ್ಮಿಕೊಂಡಿರುವುದು ಅದನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಶೇಡಬಾಳ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂ.ಎನ್. ಕವಲಾಪೂರೆ ಕರೆ ನೀಡಿದರು.
ಅವರು ಶುಕ್ರವಾರ ದಿ. 12 ರಂದು ಶೇಡಬಾಳ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಪಪಂ ಸದಸ್ಯರು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ನಮ್ಮ ದೇಶ ಬ್ರಿಟಿಷ್ರ ಆಡಳಿತದಿಂದ ಹೊರ ಬಂದು ಸ್ವತಂತ್ರವಾಗಿ ಇಂದಿಗೆ 75 ವರ್ಷ ಗತಿಸಿದವು. ಅದಕ್ಕೆ ನಾವು ಇಂದು 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಪ್ರತಿ ಮನೆಮನೆಗಳಲ್ಲಿ ರಾಷ್ಟ್ರ ಧ್ವಜದ ಅಭಿಯಾನವನ್ನು ಯಶಸ್ವಿಗೊಳಿಸಿ ರಾಷ್ಟ್ರೇ್ರಮವನ್ನು ಮೆರೆಯೋಣ ಎಂದು ಹೇಳಿದರು.
ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ದಿ. 13 ರಂದು ಪಟ್ಟಣ ಪಂಚಾಯತಿಯ ಕಾರ್ಯಾಲಯದ ಮುಂದೆ ಮುಂಜಾನೆ 8 ಗಂಟೆಗೆ ಮುಖ್ಯ ಅತಿಥಿಗಳಿಂದ ಧ್ವಜಾರೋಹಣವನ್ನು ನೆರವೇರಿಸಲಾಗುವುದು. ನಂತರ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರ ಭವ್ಯ ಜಾಥಾ ಕಾರ್ಯಕ್ರಮವನ್ನು ಏರಿ್ಡಲಾಗಿದೆ ಎಂದು ಹೇಳಿದರು. ಅದರಂತೆ ರವಿವಾರದಂದು ಧ್ವಜಾರೋಹಣ, ಸೋಮವಾರದಂದು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
3 ದಿನಗಳ ಕಾಲ ಜರುಗಲಿರುವ ಈ ಅಮೃತ ಮಹೋತ್ಸವ ಸಮಾರಂಭಕ್ಕೆ ಪಟ್ಟಣದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿಯನ್ನು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಮುಖ್ಯಾಧಿಕಾರಿ ಎಂ.ಎನ್. ಕವಲಾಪೂರೆ, ಗ್ರಾಮದ ಮುಖಂಡರಾದ ಸುಭಾಷ ಢಾಲೆ, ಪಟ್ಟಣ ಪಂಚಾಯತ ಸದಸ್ಯರಾದ ಬಾಬಾಸಾಬ ಮೇಸ್ತ್ರಿ, ಬಾಬು ಐನಾಪೂರೆ, ರಮೇಶ ರತ್ನಪ್ಪಗೋಳ, ನಾಮದೇವ ಹೊನಕಾಂಬಳೆ, ರಾಮು ನರಸಾಯಿ, ಪ್ರಕಾಶ ಮಾಳಿ, ಪ್ರವೀಣ ಕೆಂಪವಾಡೆ, ಸಿಬ್ಬಂದಿಗಳಾದ ಸುಪ್ರೀಯಾ ಹಿರೇಮಠ, ಮಹಾದೇವಿ ಗುನಾಪುರೆ, ಅಶೋಕ ತೀರ್ಥ, ಸುಧೀರ ಮಾಳಪ್ಪಗೋಳ, ಅಣ್ಣಪ್ಪ ಕಲಾಲ ಸೇರಿದಂತೆ ಪಪಂ ಸಿಬ್ಬಂದಿ ವರ್ಗ ಗ್ರಾಮಸ್ಥರು ಇದ್ದರು.