ಹುಲಿಗುಡ್ಡ ಬಳಿ ಜಾಕ್ವಾಲ್ನಲ್ಲಿ ಚಿರತೆ ಪ್ರತ್ಯಕ್ಷ: ಸೆರೆ
ಲೋಕದರ್ಶನ ವರದಿ
ಹೂವಿನಹಡಗ01: ಹುಲಿಗುಡ್ಡದ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ 2ನೇ ಜಾಕ್ವಾಲ್ನಲ್ಲಿ ಸೋಮವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿ ಕೆಲಸ ಮಾಡುವ ಯುವಕರು ಆತಂಕಗೊಂಡ ಘಟನೆ ಸಂಭವಿಸಿದೆ.
ಚಿರತೆ ಪ್ರತ್ಯಕ್ಷವಾಗಿದ್ದು,ಯಾರಿಗೆ ಯಾವುದೇ ಜೀವಕ್ಕೆ ತೊಂದರೆ ನೀಡಿಲ್ಲವಾದರೂ, ಚಿರತೆ ಏನಾದರೂ ಮಾಡಬಹುದು ಎನ್ನುವ ಆತಂಕದಲ್ಲಿ ಇದ್ದ ಕೆಲಸಗಾರರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಕೆಲಸ ಮಾಡುವ ಯುವಕರು ಜಾಕ್ವಾಲ್ನ ಮನೆಯಲ್ಲಿ ಇದ್ದ ಚಿರತೆ ತಪ್ಪಿಸಿಕೊಂಡು ಓಡಿ ಹೋಗುವಾಗ ಅಂತಿಮವಾಗಿ ಕುರಿಯ ಬಲಿಯನ್ನು ಹಾಕಿ ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಕೆಲಸಗಾರರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.